
ಗುರುಮಠಕಲ್/ ಕುಂಟಿಮರಿ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಗುರುಮಠಕಲ್ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲೆಯ ಗಡಿಭಾಗವಾದ ಕುಂಟಿಮಾರಿ ಚೆಕ್ ಪೋಸ್ಟ್ ಹತ್ತಿರ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕ. ರ. ವೇ ತಾಲೂಕ ಅಧ್ಯಕ್ಷರಾದ ಶರಣಬಸಪ್ಪ ಯಲ್ಹೇರಿ ಅವರು ನೆರವೇರಿಸಿಕೊಟ್ಟರು.
ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಯಾದ ಶ್ರೀಶೈಲ ಎಸ್ ಒಡೆಯರ್ ಅವರು ಪೂಜೆ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ. ರ. ವೇ ತಾಲೂಕಾಧ್ಯಕ್ಷ ಶರಣಬಸಪ್ಪ ಯಲ್ಹೇರಿ ನಮ್ಮದು ಗಡಿಭಾಗ ಇಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಾಗಿ ಇರುವುದರಿಂದ ನಮ್ಮ ಕನ್ನಡ ಭಾಷೆ ಬಳಕೆ ವೃದ್ದಿಸಲು ಸಾಕಷ್ಟು ಕೆಲಸ ಆಗಬೇಕಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಮ್ಮ ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮತ್ತು ಬೆಳೆಸುವ ಕೆಲಸ ಆಗುತ್ತಿಲ್ಲ. ಗಡಿನಾಡ ಉತ್ಸವ ಕೈಗೊಳ್ಳುವ ಮೂಲಕ ಕನ್ನಡ ಬೆಳೆಸುವ ಕಾರ್ಯಕ್ಕೆ ಸರಕಾರ ಮುಂದಾಗಲಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮುಂದುವರೆಸಿ ಕಾರ್ಯಕರ್ತರು ಇನ್ನು ಹೆಚ್ಚಿನ ಕರವೇ ಗ್ರಾಮ ಶಾಖೆಗಳನ್ನು ಮಾಡುವುದರ ಮುಖಾಂತರ ಕನ್ನಡ ನಾಡು, ನುಡಿ, ನೆಲ, ಜಲ ಸಂಸ್ಕೃತಿಯನ್ನು ಎತ್ತಿ ಹಿಡಿದು 2300 ವರ್ಷಗಳ ಅಧಿಕ ಇತಿಹಾಸ ಹೊಂದಿರುವ ಕನ್ನಡದ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡುವದರ ಮೂಲಕ ಅರ್ಥಪೂರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮುಂಬರುವ ಯೋಜನೆ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಪಾಟೀಲ್ ಜೈಗ್ರಾಮ್, ತಾಲೂಕ ಪ್ರಧಾನ ಕಾರ್ಯದರ್ಶಿ ಮೌನೇಶ್ ದೊಬ್ಬಲ್ ಮಾಧ್ವಾರ, ಜಗದೀಶ್ ನಸಲವಾಯಿ, ರಾಕೇಶ್ ಕುಂಟಿಮಾರಿ, ಶಿವು ಕಾವಲಿ ಕೊಂಕಲ್, ರಾಘವರೆಡ್ಡಿ ಪಳ್ಳ ಸಂಬರ, ದೇವಸಿಂಗ್ ಮಾಧ್ವಾರ, ವಿಜಯ ತೋರಣತಿಪ್ಪ ತಾಯಪ್ಪ ಕಾಳೆಬೆಳಗುಂದಿ, ಬನ್ನಯ್ಯ ಕಲಾಲ್, ಪ್ರಭಾಕರ್ ಹೂಗಾರ್, ಮಂಜುನಾಥ ಬಟಿಕೇರಿ, ನಿಂಗಪ್ಪ ಕರಣಿಗಿ, ಹಣಮಂತ ಬೋವಿ, ನಾಗಪ್ಪ ಮಡಿವಾಳ್ ಸಂಬರ, ಅನಿಲ್ ವಂಕಸಂಬರ ಸೇರಿದಂತೆ ಇನ್ನೂ ಹಲವಾರು ಕ. ರ. ವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















