
ಕೆ. ಎಲ್. ಇ ಸಂಸ್ಥೆಯ ಜಿ ಕೆ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾನೂನು ಅರಿವು ಕಾರ್ಯಕ್ರಮ

ಹಾವೇರಿ /ಶಿಗ್ಗಾಂವ : ಶ್ರೀ ಚನ್ನಪ್ಪ ಫಕ್ಕೀರಪ್ಪ ಗುಂಜಾಳ ಪ್ರೌಢ ಶಾಲೆ, ಕಬನೂರ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ದಿನಾಂಕ 07/11/2025 ರಂದು ಹಮ್ಮಿಕೊಳ್ಳಲಾಗಿತ್ತು . ಬಾಲ ಕಾರ್ಮಿಕ ನಿರ್ಮೂಲನಾ ಕಾಯ್ದೆ, ಪೋಕ್ಸೋ ಕಾಯ್ದೆ , ಸೈಬರ್ ಅಪರಾಧ, ಶಿಕ್ಷಣದ ಹಕ್ಕು, ಗ್ರಾಹಕ ರಕ್ಷಣಾ ಕಾಯ್ದೆಯ ಕುರಿತು ಕಾನೂನು ವಿದ್ಯಾರ್ಥಿಗಳಾದ ನಾಗರಾಜ ಸಿ ಹಂಡಿ, ಅನ್ನದಾನೇಶ ವಿ. ವಸ್ತ್ರದ, ಅಭಿಷೇಕ ಶಿ ಗುಂಜಾಳ, ರಾಜಶೇಖರ ಜಂತ್ಲಿ ಹಾಗೂ ಶಿವರುದ್ರಯ್ಯ ಹಿರೇಮಠ ಅವರು ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು . ಅಲ್ಲದೆ ಕಾನೂನು ಕುರಿತಾದ ಮಾಹಿತಿಯನ್ನು ನೀಡುವುದರೊಂದಿಗೆ ಮಕ್ಕಳಿಗಾಗಿರುವ ವಿಶೇಷ ಕಾಯ್ದೆಗಳ ಕುರಿತು ಅರಿವನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಜಿ ಕೆ ಗುಂಜಾಳ ಶಾಲೆಯ ಆಡಳಿತ ವರ್ಗದ ಸದಸ್ಯರು ಶಾಲಾ ಶಿಕ್ಷಕ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿ ಕೆ ಗುಂಜಾಳ ವಕೀಲರು ಕಾನೂನು ಎಂಬುವದು ಪ್ರತಿಯೊಬ್ಬರ ರಕ್ಷಣೆಯನ್ನು ಮಾಡುತ್ತದೆ ಎಲ್ಲರಿಗೂ ನ್ಯಾಯವನ್ನು ಒದಗಿಸಿಕೊಡುತ್ತದೆ ಎಂದು ತಿಳಿಸಿದರು. ಮತ್ತು ಹಿರಿಯರಾದ ಮಲ್ಲಪ್ಪ ಬ ಗುಂಜಾಳ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
- ಕರುನಾಡ ಕಂದ ಪತ್ರಿಕೆ




















