ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಕೊಪ್ಪಲು ಗ್ರಾಮದ ಧನುಷ್ ಎಂಬ ವಿದ್ಯಾರ್ಥಿಯು ಕೆರೆಯಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತನು ಶಾಲೆಯನ್ನು ಮುಗಿಸಿಕೊಂಡು ಬರುವಾಗ ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗಿ ಕಾಲುಜಾರಿ ಬಿದ್ದು ಕೆರೆಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ಇದನ್ನು ತಿಳಿದ ಗ್ರಾಮಸ್ಥರು ಮನೆಗೆ ವಿಷಯ ತಿಳಿಸಿ ನಂತರ ಅಗ್ನಿಶಾಮಕ ಠಾಣೆಗೆ ದೂರು ತಿಳಿಸಿ ಅವರ ಸಿಬ್ಬಂದಿ ಬಂದು ನಂತರ ಕೆಆರ್ ನಗರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ರವರು ಮತ್ತು ಸಿಬ್ಬಂದಿಯವರು ಮಹಾಜರ್ ಮಾಡಿ ಕೆ ಆರ್ ನಗರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸ್ದಾರ ತಂದೆ ಗಿರೀಶ್ ರವರಿಗೆ ದೇಹವನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಕೆಆರ್ ನಗರ ಶಾಸಕರಾದ ರವಿಶಂಕರ್ ಅವರು ಬಂದು ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಶಾಲೆಯ ಶಿಕ್ಷಕರು,ಕುಟುಂಬಸ್ಥರು, ಗ್ರಾಮಸ್ಥರು ಎಲ್ಲರೂ ಸೇರಿ ಅಂತಿಮ ಕಾರ್ಯ ವಿಧಿ ವಿಧಾನ ಮೂಲಕ ಮಾಡಲಾಯಿತು.
ವರದಿ ಹೆಚ್. ಆರ್. ಶಂಕರ್



















