
ಬೀದರ್ :ದಿನಾಂಕ 05-11-2025 ಬೀದರ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ.) ಭಾಲ್ಕಿ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್ ಎಂ ಜನವಾಡಕರ್ ಅವರ ಬದುಕು ಬರಹ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಉದ್ಘಾಟಕರಾದ ಸಿದ್ಧಾರ್ಥ್ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಪ್ರಭು ಅವರು ಮಾತನಾಡಿ ಎಸ್ ಎಂ ಜನವಾಡಕರ್ ಅವರು ಬೀದರ್ ಜಿಲ್ಲೆಯ ಹಿರಿಯ ಸಾಹಿತಿಗಳು ಅವರನ್ನು ನೋಡಿಯೆ ನಾವು ಬೆಳೆದವರು. ಅಂತಹ ಮಾಹಿತಿಗಳನ್ನು ಪರಿಚಯಿಸಿದ್ದು ಉತ್ತಮ ಕಾರ್ಯಕ್ರಮ ಎಂದು ಹೇಳಿದರು. ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು, ಜ್ಞಾನವೇ ಎಲ್ಲದಕ್ಕೂ ಮುಖ್ಯ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಪವನ ಬಾಲೇರ ಅವರು ಎಸ್ ಎಂ ಜನವಾಡಕರ್ ಅವರು ಬಗ್ಗೆ ಉತ್ತಮ ಮಾಹಿತಿಯನ್ನು ನೀಡುತ್ತದೆ. ಅವರ ಬದುಕಿನುದ್ದಕ್ಕೂ ಮಾಡಿದ ಕನ್ನಡಪರ ಕಾರ್ಯಕ್ರಮಗಳನ್ನು ಸ್ಮರಣೆ ಮಾಡಿದರು.
ಆಶಯ ನುಡಿಯನ್ನು ನುಡಿದ ಹಿರಿಯ ಸಾಹಿತಿಗಳು ನನ್ನ ಬಗ್ಗೆ ಕಾರ್ಯಕ್ರಮ ಮಾಡುತಿರುವದು ಸಂತೋಷದ ಸಂಗತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಇಂತಹ ಸಂದರ್ಭಗಳು ಪ್ರೋತ್ಸಾಹ ನೀಡುತ್ತವೆ. ಸಾಹಿತ್ಯದ ಕಾರ್ಯ ಮಾಡುವುದು ನನಗೆ ಖುಷಿ ಕೊಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಕಥೆಗಾರರಾದ ಗುರುನಾಥ ಅಕ್ಕಣ್ಣ ಅವರು ಮಾತನಾಡುತ್ತಾ ಸಾಹಿತಿಗಳು ಸಮಾಜದ ಕಣ್ಣು, ಸೂರ್ಯ ನೋಡದೆ ಇರುವಂತಹ ವಿಷಯಗಳನ್ನು ಸಾಹಿತಿಗಳು ನೋಡುತ್ತಾರೆ. ಸಮಾಜದ ಪರಿವರ್ತನೆ ಮಾಡುವಲ್ಲಿ ಅವರ ಪಾತ್ರ ಮುಖ್ಯ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಚುಟುಕು ಸಾಹಿತಿಗಳಾದ ಪುಷ್ಪ ಕನಕ ಅವರು ಭಾಗವಹಿಸಿ ಮನುಷ್ಯನಿಗೆ ಹಾಸ್ಯವೂ ಅಷ್ಟೇ ಮುಖ್ಯ. ಸಾಹಿತಿಗಳು ಎಲ್ಲಾ ಪ್ರಕಾರ ಬರೆಯಲು ಸಾಧ್ಯವಿಲ್ಲ. ಅವರದೆ ಆದ ಇಷ್ಟದ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ. ಎಸ್ ಎಂ ಜನವಾಡಕರ್ ಅವರು ಬುದ್ಧ ಸಾಹಿತ್ಯವನ್ನು ಹೆಚ್ಚು ಹೆಚ್ಚು ಬರೆದಿದ್ದಾರೆ. ಅದು ಅವರ ಆಸಕ್ತಿ ಎಂದರು. ನಾಗಶಟ್ಟಪ್ಪ ಜೋತ್ಯಪ್ಪ , ಗುಂಡಪ್ಪ ಅವರು ಗೌರವ ಉಪಸ್ಥಿತರಾಗಿದ್ದರು.
ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನೊಂ. ಭಾಲ್ಕಿಯ ಅಧ್ಯಕ್ಷರಾದ ಡಾ ಮಕ್ತುಂಬಿ ಎಂ ಅವರು ಎಸ್ ಎಂ ಜನವಾಡಕರ್ ಅವರು ಅತೀ ಹೆಚ್ಚು ಸಾಹಿತ್ಯ ಬರೆದು ಸಮಾಜಕ್ಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಬಡತನದ ಬೇಗೆಯಿಂದ ನೋವು ಉಂಡು ಇಂದು ಸಮಾಜದಲ್ಲಿ ಸಾಹಿತಿಗಳು ಎಂದು ಗುರುತಿಸಲ್ಪಡುವ ಅವರು ಸಾಧನೆ ಮಾಡಿದ್ದಾರೆ. ಅವರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಹೇಳಿದರು.
ನಿರೂಪಣೆಯನ್ನು ಸುಲೋಚನಾ ಅವರು ನಡೆಸಿಕೊಟ್ಟರು ಏಕನಾಥ ಅವರು ಸ್ವಾಗತಿಸಿದರು. ಪ್ರಿಯಾಂಕ ಅವರು ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















