ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಹಾಗೂ ಶ್ರೀ ಭಕ್ತ ಕನಕದಾಸರ 538 ನೇ ಜಯಂತಿ ಆಚರಣೆ.

ಚಾಮರಾಜನಗರ/ ಹನೂರು :ಪಟ್ಟಣದ ಕನಕ ಸಮುದಾಯ ಭವನದಲ್ಲಿ ಆಯೋಸಿಜಿದ್ದ ಶ್ರೀ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತೋತ್ಸವ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಉದ್ಘಾಟನೆ ಶಾಸಕ ಎಂ ಆರ್ ಮಂಜುನಾಥ್ ಉದ್ಘಾಟನೆ ಮಾಡಿದರು.
ನಂತರ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನಿಸಿದ ಗೌರವಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕನಕದಾಸರ ಕೀರ್ತನೆಗಳು 316 ಕೀರ್ತನೆಗಳೆಂಬ ಅಪಾರ ಹೊತ್ತಿಗೆಂಬ ಖ್ಯಾತಿಯುಳ್ಳವು, ಅವುಗಳಲ್ಲಿ ಭಕ್ತಿ, ವೈರಾಗ್ಯ, ಸಮಾಜ ಸತ್ಸಂಗ ಮತ್ತು ಮೌಲ್ಯಗಳ ಕುರಿತು ಆಳವಾದ ಸಂದೇಶಗಳಿವೆ. ಅವರು ಜಾತಿಪಡೆಯ ವಿರುದ್ಧ ಅವರ ಕೀರ್ತನೆಗಳ ಮೂಲಕ ನಿರಂತರ ಹೋರಾಟ ನಡೆಸಿ ಸಮಾಜದಲ್ಲಿ ಸಮಾನತೆ, ತಿಳಿವಳಿಕೆ ಮತ್ತು ಸತ್ಯದ ಮಾರ್ಗವನ್ನು ಪ್ರತಿಪಾದಿಸಿದವರು ಕನಕದಾಸರ ಕಾವ್ಯಗಳು ಎಲ್ಲರಿಗೂ ಸರಳ ಭಾಷೆಯಲ್ಲಿ ಬೋಧನೆಯ ಅರ್ಥಗಳನ್ನು ತಲುಪುವ ಶಕ್ತಿ ಹೊಂದಿದ್ದು, ಅವರು ತ್ಯಾಗ, ಸೇವಾ ಮನೋಭಾವ ಹಾಗೂ ಮಾನವೀಯತೆಯ ಅಗತ್ಯವನ್ನು ಬೋಧಿಸಿದರು. ಅವರ ತತ್ವಗಳು ಜಾತಿಭೇದ, ಭ್ರಷ್ಟಾಚಾರ ಹಾಗೂ ಸಮಾಜದ ನಕಾರಾತ್ಮಕ ವಿಚಾರಗಳ ವಿರುದ್ಧ ನಿಲ್ದಾಣವನ್ನು ನೀಡುತ್ತವೆ. ಈ ಮಹಾನ್ ವ್ಯಕ್ತಿತ್ವದ ಅಭಿವೃತ್ತಿಯಲ್ಲಿ ನಾವು ಆತ್ಮಸಾತ್ತೆಯಾಗುವ ಮೂಲಕ, ಅವರ ಜೀವನದಿಂದ ಪ್ರೇರಣೆ ಪಡೆದು ನಮಗೂ ಸಮಾಜ ಸೇವೆಗೆ, ಸಹಿಷ್ಣುತೆ, ದಯಾಳುತನ ಮತ್ತು ನೈತಿಕತೆಯನ್ನು ಅನುಸರಿಸೋಣ. ಕನಕದಾಸರ ಕೀರ್ತನೆಗಳ ಒಂದು ಉದಾಹರಣೆಯಾಗಿ “ನೀ ಮಾಯೆಯೊಳಗೋ ನಿನ್ನೊಳಗೆ ಮಾಯೆಯೋ” ಎಂಬ ಕೀರ್ತನೆ ಜೀವನ ಸತ್ಯಗಳನ್ನು ಪ್ರೀತಿಯಿಂದ ತಿಳಿಸುತ್ತದೆ. ಹೊರಗಿನ ಬಾಹ್ಯ ಜಗತ್ತಿನಿಂದ ದೂರವಿದ್ದು, ಭಗವಂತನ ಅಧೀನನಾಗಿರುವ ಆತ್ಮದ ಜೀವಿತವನ್ನು ತಾವು ಬೋಧಿಸಿದ ತತ್ವಗಳಿಂದ ನಾವು ಕಲಿಯೋಣ. ಈ ವೈಕುಂಠ ಸೇವೆಯ ದಾರಿಯಲ್ಲಿ ನಮ್ಮ ಜೀವನವನ್ನೆಲ್ಲಾ ಸಮರ್ಪಿಸೋಣ ಎಂದರು.
ನಂತರ ಸಂಘದ ವತಿಯಿಂದ ಭೋಜನ ಹಾಗೂ ಸಿಹಿ ವಿತರಣೆ ಮಾಡಲಾಯಿತು.

ಇದೇ ಸಮಯದಲ್ಲಿ ತಹಶೀಲ್ದಾರ್ ಚೈತ್ರಾ, ಡಾ. ಧರ್ಮಪುರ ಸಂಸ್ಥಾನ ಮಠದ ಅಶೋಕ್ ಗುರೂಜಿ, ಡಿಸಿಪಿ ಕೆ.ಎಸ್ ನಾಗರಾಜು, ಕೌದಳ್ಳಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರಾದ ಸುಭಾಷ್ ಮಲ್ಲೂರು, ತಾಲೂಕು ಕುರುಬ ಸಂಘದ ಅಧ್ಯಕ್ಷರಾದ ಶಿವಪ್ಪ,ಕೊಳ್ಳೇಗಾಲ ತಾಲೂಕು ಅಧ್ಯಕ್ಷ ನಂಜೇಗೌಡ, ಚಂದ್ರಮುರಳಿ, ಮಂಜು, ಮಹಾದೇವಸ್ವಾಮಿ, ನಾಗರಾಜು, ಶಿವಮಳ್ಳು, ಸಿದ್ದಪ್ಪ, ನಂಜುಂಡ, ಯಾರಂಬಡಿ ಹುಚ್ಚಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!