ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ ತಾಂಡಾದ ಬಂಜಾರ ಸಮಾಜದ ಯುವ ನಾಯಕರು ಮತ್ತು ಪ್ರಥಮ ದರ್ಜೆ ಗುತ್ತಿಗೆದಾರರಾಗಿ ವಿವಿಧ ಸಾಮಾಜಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತಾ ಯುವಕರ ಅಚ್ಚುಮೆಚ್ಚಿನ ನಾಯಕರಾಗಿ ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕರಿಗೆ ಸಹಾಯ ಸಹಕಾರ ಮಾಡುತ್ತಿರುವ ರಾಜು ಧನಸಿಂಗ್ ರಾಠೋಡ ಅವರಿಗೆ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸಂತ ಲಕ್ಷ್ಮಿ ಫೌಂಡೇಶನ್ ಸಂಜಯನಗರ ಬೆಂಗಳೂರು ಇವರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಸದಾಶಿವನಗರದ ವೀರಶೈವ ಸಭಾಭವನದಲ್ಲಿ ನವೆಂಬರ್ 9ರಂದು ರವಿವಾರ ಬೆಳಗ್ಗೆ 12ಗಂಟೆಗೆ ರಾಜ್ಯದ 20 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಜು ಧನಸಿಂಗ್ ರಾಠೋಡ ಅವರಿಗೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಹಿತಿ ನಾಡೋಜ ಕುಂ. ವೀರಭದ್ರಪ್ಪ ಚಲನಚಿತ್ರ ಸಂಗೀತ ನಿರ್ದೇಶಕರಾದ ವಿ. ಮನೋಹರ್.ಚಕ್ರ ನಟಿ ರೇಖಾ ದಾಸ್ ಮಾಜಿ ಸಚಿವ ವರ್ತೂರ್ ಪ್ರಕಾಶ್.ಡಾ. ಪೂಜ ರಮೇಶ್.ಕಟ್ಟಾ ಜಗದೀಶ್ ಸುಬ್ರಹ್ಮಣ್ಯಂ ನಾಯ್ಡು ಪ್ರಶಸ್ತಿ ಪ್ರಧಾನ ಸಮಾರಂಭದ ಅತಿಥಿಗಳಾಗಿದ್ದಾರೆ ಎಂದು ವಸಂತ ಲಕ್ಷ್ಮಿ ಫೌಂಡೇಶನ್ ಕಾರ್ಯದರ್ಶಿ ಕೆ ಕುಮಾರ್,ಮಾಸ್ತನ್ ನಾಯಕ, ಸಂಗಮೇಶ ನಾಯಕ, ಸತ್ಯರೆಡ್ಡಿ ಗೌಡ, ಹಶೀಮ್ ಖುರೇಶಿ, ಸಮೀರ್ ಮಾನ್ವಿ, ಆಲಂ ಗಬ್ಬೂರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















