
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ: 09/11/2025 ರ ರವಿವಾರ ದಿನದಂದು ಆದ್ಯ ದ್ವೈಪನಾಚಾರ್ಯರ ಪುಣ್ಯ ದಿನದ ನಿಮಿತ್ಯವಾಗಿ ಶ್ರೀರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ ಮೂರ್ತಿಯ ಜೊತೆಗೆ ಆದ್ಯ ದ್ವೈಪನಾಚಾರ್ಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅಗರಖೇಡ ಗ್ರಾಮದ ಪ್ರಮುಖರೆಲ್ಲಾ ಸೇರಿಕೊಂಡು ಅಭಿಷೇಕ ಪೂಜೆ, ಪುನಸ್ಕಾರ, ಪುಣ್ಯಾರಾಧನೆಯನ್ನು ಮಾಡಿದರು.
ಶ್ರೀ ಆದ್ಯ ದ್ವೈಪನಾಚಾರ್ಯರು ಆಗಿನ ಮದ್ರಾಸ್, ರಾಜ್ಯ ಈಗಿನ ತಮಿಳುನಾಡಿನ ಕುಂಭಕೋಣ ಗ್ರಾಮದಲ್ಲಿ ಜನಿಸಿದರು. ಅಲ್ಲಿ ವಿದ್ಯಾರ್ಜನೆಯನ್ನು ಮಾಡಿ ಮುಂದೆ ಬನಾರಸದಲ್ಲಿ ಸಂಸ್ಕೃತ ವಿದ್ಯೆಯನ್ನು ಕಲಿತು ಅದೇ ಬನಾರಸ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದರು.
ಒಂದು ದಿನ ಶ್ರೀ ದ್ವೈಪನಾಚಾರ್ಯರು ಪಂಡರಾಪುರ ವಿಠ್ಠಲ ದೇವರ ದರ್ಶನ ಪಡೆಯಬೇಕೆಂದು ಇಚ್ಚಿತರಾಗಿ ಭಕ್ತರೊಂದಿಗೆ ಪಂಡರಾಪುರಕ್ಕೆ ಪ್ರಯಾಣ ಬೆಳೆಸಿದರು.
ಪ್ರಯಾಣದ ಸಂದರ್ಭದಲ್ಲಿ ಇಂಡಿ ತಾಲೂಕ ಅಗರಖೇಡ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಿದಾಗ ರಾತ್ರಿ ಕನಸಿನಲ್ಲಿ ಪಂಡರಾಪುರ ವಿಠ್ಠಲ ದೇವರು ದರ್ಶನ ಕೊಟ್ಟು ಪಂಡರಾಪುರಕ್ಕೆ ಬರುವುದಕ್ಕಿಂತಲೂ ಇದೇ ಅಗರಖೇಡ ಗ್ರಾಮದಲ್ಲಿ ನೀನು ವಾಸ ಮಾಡಿ ಪವಾಡಗಳನ್ನು ಮಾಡುತ್ತಾ ಭಕ್ತರನ್ನು ಉದ್ದರಿಸು ಎಂದು ಆಶೀರ್ವಾದ ಮಾಡಿ ಹೇಳಿದರಂತೆ
ಅದಕ್ಕಾಗಿ ಅವರು ಅಗರಖೇಡ ಗ್ರಾಮದಲ್ಲಿ ತಮ್ಮ ಬಿಡಾರವನ್ನು ಹೂಡಿ ಖಾಯಂ ಇಲ್ಲಿಯೇ ವಾಸಿಗಳಾದರು.
ಮುಂದೆ ಅವರು ಮಾಡಿದ ಅನೇಕ ಪವಾಡಗಳನ್ನು ಮಾಜಿ ತಾಲೂಕಾ ಪಂಚಾಯತಿ ಸದಸ್ಯರಾದ ಮಲ್ಲಣ್ಣ ತೋಳನೂರ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ನೀಲಕಂಠ ಸಾವಳಗಿ ಅವರು ಮಾತನಾಡಿ ತಮ್ಮ ವಿಚಾರಧಾರೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪರಮಾನಂದ ಮಾಶಾಳ, ಶಂಕರಲಿಂಗ ಬಿರಾದಾರ್, ದರಪ್ಪ ಸಾವಳಗಿ, ಯಲ್ಲಪ್ಪ ತಾಂಬೆ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ವರದಿ ಮನೋಜ್ ನಿಂಬಾಳ




















