
ಕೊಪ್ಪಳ : ನಮ್ಮ ಜೀವನದಲ್ಲಿ ಡಾ. ಅಬುಲ್ ಕಲಾಂ ಅವರ ಆದರ್ಶ ಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯತೆ ಇದೆಯೆಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ ಹುಲಿಗೆಮ್ಮ ಅಭಿಪ್ರಾಯ ಪಟ್ಟರು. ಅವರು ಸೋಮವಾರದಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ ಹೋರಾಟಗಾರ ಹಾಗೂ ದೇಶದ ಮೊದಲ ಶಿಕ್ಷಣ ಸಚಿವರಾಗಿ ನೆಹರು ಅವರ ಸಂಪುಟದಲ್ಲಿ ಇದ್ದ ಆಜಾದ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತರಲು ಅವರು ಯತ್ನಿಸಿದರು. ಇಡೀ ದೇಶದ ಜನತೆ ಸಾಕ್ಷರತೆ ಪಡೆಯಲು ಪ್ರೇರಣೆ ನೀಡಿದರು. ಅಜಾದ್ ರು ಭಾರತದ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಟೋಬ ಎಸ್ ಮಾತನಾಡಿ ಡಾ ಅಬುಲ್ ಕಲಾಂ ಅವರು ಧರ್ಮಾತೀತರಾಗಿ ಶಿಕ್ಷಣದ ಸೇವೆಯನ್ನು ಮಾಡಿದರು. ಹೀಗಾಗಿ ಅವರ ಹೆಸರಿನಲ್ಲಿ ಶಿಕ್ಷಣ ದಿನವನ್ನಾಗಿ ಇಡೀ ದೇಶದ ತುಂಬಾ ಆಚರಿಸುತ್ತಾರೆ. ಭಾರತದಲ್ಲಿ ಶೇ. 100 ರಷ್ಟು ಸಾಕ್ಷಾರತೆ ಪ್ರಮಾಣ ಹೊಂದಬೇಕೆಂಬ ಅಜಾದ್ ಅವರ ಅಸೆ ಆಗಿತ್ತು. ಅಜಾದ್ ರು ವಿಶ್ವ ವಿದ್ಯಾ ಲಯ ಧನ ಸಹಾಯ ಅಯೋಗ, ಪ್ರೌಢ ಶಿಕ್ಷಣ ಆಯೋಗ, ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸ್ಥಾಪಿಸಿದರು ಎಂದರು.
ಈ ಸಂದರ್ಭದಲ್ಲಿ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಶೋಕಕುಮಾರ, ಗ್ರಂಥಪಾಲಕ ಡಾ ಬಿ ಮಲ್ಲಿಕಾರ್ಜುನ, ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೋ ನಾಗರತ್ನ ಬಿ ತಮ್ಮಿನಾಳ, ದೈಹಿಕ ಶಿಕ್ಷಣ ಭೋಧಕ ಡಾ. ಪ್ರದೀಪ್ ಕುಮಾರ ಅರ್ಥ ಶಾಸ್ತ್ರದ ಮುಖ್ಯಸ್ಥೆ ಶುಭ, ಇಂಗ್ಲಿಷ್ ವಿಭಾಗದ ಮುಖ್ಯಸ್ತೆ ಸುಮಯ್ಯ, ಹನುಮಪ್ಪ ಮೇಟಿ, ಕಲ್ಲಯ್ಯ ಪೂಜಾರ, ಮಹೇಶ ಪೂಜಾರ, ಮಲ್ಲಿಕಾರ್ಜುನ ಎಂ, ನಿಂಗಪ್ಪ ಕೆ, ಶಿವಪ್ಪ ಬಡಿಗೇರ್ ಮುಂತಾದವರು ಇದ್ದರು. ಪತ್ರಿಕೋದ್ಯಮ ಮುಖ್ಯಸ್ಥ ಡಾ ನರಸಿಂಹ ಗುಂಜಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ ಪ್ರದೀಪಕುಮಾರ ಯು ಕೊನೆಯಲ್ಲಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















