ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಪ್ಪಳ : ಅಭೂತಪೂರ್ವ ಯಶಸ್ಸು ಕಂಡ ಹನ್ನೊಂದನೆಯ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ ನಗರಕ್ಕೆ, ಐತಿಹಾಸಿಕ, ಸಾಂಸ್ಕೃತಿಕ, ಇತಿಹಾಸ ವಿದೆ, ರನ್ನ, ಪಂಪ, ರಂತಹ ಕವಿಗಳೂ, ಕೊಪ್ಪಳ ಪ್ರದೇಶದ ಪ್ರಸ್ತಾಪ ಮಾಡಿರುವ ಉದಾಹರಣೆಗಳಿವೆ, ಇಂತಹ ಸಾಂಸ್ಕೃತಿಕ ಪರಿಸರ ಹೊಂದಿರುವ ಕೊಪ್ಪಳದ ಸಾಹಿತ್ಯ ಭವನದಲ್ಲಿ ದಿ. 9.11.2025ರಂದು ಹನ್ನೊಂದನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಜರುಗಿತು.


ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು, ಸಾಹಿತಿಗಳೂ ಆದ ಶ್ರೀ ವೀರಣ್ಣ ವಾಲಿ ಅವರು ವಹಿಸಿದ್ದರು.


ಸಮ್ಮೇಳನಕ್ಕೆ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಡಾ. ಎಂ. ಜಿ. ಆರ್, ಅರಸ್ ಮತ್ತು ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರೂ, “ಕೌಸ್ತುಭ,” ಸಾಹಿತ್ಯ ಮಾಸಪತ್ರಿಕೆ ಸಂಪಾದಕರೂ ಆದ ಶ್ರೀಮತಿ ರತ್ನಾ ಹಾಲಪ್ಪ ಗೌಡ ಅವರೂ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.


ಉಧ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಜಿ. ಆರ್ ಅರಸ್, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ರತ್ನಾ ಹಾಲಪ್ಪ ಗೌಡರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.


ದಿವ್ಯ ಸಾನಿಧ್ಯವನ್ನು ಗಜೇಂದ್ರಗಡದ ಕಾಲ ಜ್ಞಾನ ಮಠದ ಶರಣ ಬಸವ ಸ್ವಾಮಿಯವರು ವಹಿಸಿದ್ದರು.

ರಾಜಕಾರಣಿ, ಸಾಹಿತ್ಯ ಪ್ರೇಮಿ,
ಶಿವಣ್ಣ ರಾಯರಡ್ಡಿಯವರು ಭಾಷಣ ಮಾಡುತ್ತಿರುವಾಗ…

ವೇದಿಕೆಯಲ್ಲಿ ರತ್ನಾ ಹಾಲಪ್ಪ ಗೌಡ, ಅವರು
ಮಾತನಾಡುತ್ತಿರುವಾಗ…


ಚುಟುಕು ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ
ರುದ್ರಪ್ಪ ಭಂಡಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತಿರುವ ಡಾ.
ಮಹಾಂತೇಶ ನೆಲಾಗಣಿ.

ಇದೇ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ವೀರಣ್ಣ ವಾಲಿಯವರ ಸಮ್ಮೇಳನ ಕುರಿತ ಭಾಷಣದ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಮೈಸೂರಿನ ಕವಿಯತ್ರಿ
ಶ್ರೀಮತಿ ಸೀತಾ ಲಕ್ಷ್ಮೀ ವರ್ಮಾ ಅವರ ಬಣ್ಣ ಬಣ್ಣದ ಬಿಂದಿಗಳು ಎಂಬ ಕವನ ಸಂಕಲನ ಲೋಕಾರ್ಪಣೆಯಾಯಿತು.


ದಿವ್ಯ ಸಾನಿಧ್ಯ ವಹಿಸಿದ ಸ್ವಾಮಿಜಿಯವರು, ಕೊಪ್ಪಳ ಜಿಲ್ಲೆಯ ಸಾಹಿತ್ಯಿಕ ಪರಿಸರವನ್ನು ಕೊಂಡಾಡಿ ಈ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನ ಯಶಸ್ವಿಯಾಗಲಿ ಎಂದು ಹರಸಿದರು.
ಪ್ರಾಸ್ತಾವಿಕ ನುಡಿಗಳನ್ನು,ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಡಾ. ಮಹಾಂತೇಶ ನೆಲಾಗಣಿ ಮಾತನಾಡುತ್ತಾ ಕೊಪ್ಪಳ ಜಿಲ್ಲೆ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದೆ, ಇದಕ್ಕೆ ಚುಟುಕು ಸಾಹಿತ್ಯ ಪರಿಷತ್ತು ಅವಿರತವಾಗಿ ಶ್ರಮಿಸುತ್ತಾ ಹಲವಾರು ಕವಿಗೋಷ್ಠಿ, ಉಪನ್ಯಾಸ ಗೋಷ್ಠಿ ನಡೆಸುತ್ತಾ ಬಂದಿದೆ, ಇದಕ್ಕೆಲ್ಲಾ, ಬುದ್ದಿಜೀವಿಗಳ, ಸಮಾಜ ಸೇವಕರ, ಹಿರಿಯ ನಾಗರಿಕ ಬಂಧುಗಳ ಸಹಕಾರವಿದೆ, ಇದನ್ನು ಚುಟುಕು ಸಾಹಿತ್ಯ ಪರಿಷತ್ ಎಂದಿಗೂ ಮರೆಯದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಹನುಮಂತಪ್ಪ ಅಂಡಗಿ, ಅವರ ಕಾರ್ಯವೖಖರಿಯನ್ನು ನೆನಪಿಸಿಕೊಂಡು,ಅವರ ಅಕಾಲಿಕ ಮರಣಕ್ಕೆ ವಿಷಾದಿಸಿದರು, ಜನರಲ್ಲಿ ಜಾಗೃತಿ ಮೂಡಬೇಕಾದರೆ, ಇಂತಹ ಸಮ್ಮೇಳನಗಳ ಅವಶ್ಯಕತೆ ಇದೆ, ನಮ್ಮ ನೆಲ ಜಲ, ಭಾಷೆ ಬಗ್ಗೆ ನಮಗೆ ಅಭಿಮಾನವಿರಬೇಕು, ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷರಾದ ವೀರಣ್ಣ ವಾಲಿಯವರು, ಕನ್ನಡ ಭಾಷೆ, ಈ ನೆಲದಲ್ಲಿಉಳಿಯಬೇಕೆಂದರೆ, ಪ್ರತಿಯೊಬ್ಬರೂ ಕನ್ನಡ ಮಾತುಗಳನ್ನಾಡಬೇಕು, ಸಾಹಿತ್ಯವನ್ನು ಓದಬೇಕು ಮತ್ತು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು,
ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಜಿ ಆರ್. ಅರಸ್ ಮಾತನಾಡುತ್ತಾ ಇಂತಹ ಸಮ್ಮೇಳನವನ್ನು ಆಯೋಜಿಸಿರುವ ರುದ್ರಪ್ಪ ಭಂಡಾರಿ ಮತ್ತು ಅವರ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಅಭಿನಂದಿಸುವೆ ಚುಟುಕು ಸಾಹಿತ್ಯವನ್ನು ನಾಡಿನ ತುಂಬಾ ಹರಡುವ ಶಕ್ತಿ ಈ ಕೊಪ್ಪಳದ ನೆಲಕ್ಕಿದೆ, ಅದಕ್ಕೆ ಈ ಸಮ್ಮೇಳನವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಕುಕನೂರು ತಾಲೂಕಾ ಚುಟುಕು ಪರಿಷತ್ ನ ಅಧ್ಯಕ್ಷರಾದ, ಬಸವರಾಜ ಉಪ್ಪಿನ, ಅವರು ಚುಟುಕು ಸಾಹಿತ್ಯ, ವೈಶಿಷ್ಟತೆ, ಮತ್ತು ಅವಲೋಕನ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ದಿನಕರ ದೇಸಾಯಿ, ರಾಜರತ್ನಂ, ಸಿ. ಪಿ ಕೆ, ಅವರಂತಹ ಹಿರಿಯ ಸಾಹಿತಿಗಳಿಂದ, ಸರ್ವಜ್ಞನಂತಹ ತ್ರಿಪದಿ ಸಾರ್ವಭೌಮನ ಕಾಲದಿಂದಲೇ
ಪ್ರಚಲಿತವಾಗಿದೆ, ಹೇಳಬೇಕಾದುದನ್ನು ಕೇವಲ ಕೆಲವೇ ಸಾಲುಗಳಲ್ಲಿ ಹೇಳುವ ಚುಟುಕುಗಳು ಸಹೃದಯರನ್ನು ಆಕರ್ಷಿಸುತ್ತವೆ. ಅಂತಹ ಶಕ್ತಿ
ಚುಟುಕು ಸಾಹಿತ್ಯಕ್ಕಿದೆ ಎಂದರು,
ಕವಿಗೊಷ್ಠಿಯ ಅಧ್ಯಕ್ಷತೆಯನ್ನು ಕವಿ, ಶಿಕ್ಷಕ,ಮಹೇಶ ಬಳ್ಳಾರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಕವಿಗಳು, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಸಾಹಿತ್ಯಿಕ ವಾತಾವರಣ ನಿರ್ಮಿಸಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡ್ರು, ಎಸ್. ಎಂ .ಕಂಬಾಳಿಮಠ, ರಾಜಶೇಖರ ಲಾಡಿ, ಕಳಕಪ್ಪ ಕುರಿ,ಎಂ.ಬಿ.ಅಳವಂಡಿ, ಅಕ್ಬರ್ ಸಿ. ಕಾಲಿಮಿರ್ಚಿ ಸೇರಿದಂತೆ ಮೊದಲಾದವರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಅನ್ನಪೂರ್ಣ ಸಜ್ಜನ
ನಿರೂಪಿಸಿ, ವಂದಿಸಿದರು.
ನಂತರದಲ್ಲಿ ಎರಡನೇ ಗೋಷ್ಠಿ, ವಿಚಾರ ಸಂಕಿರಣ,ಕಾರ್ಯಕ್ರಮ ನಡೆಯಿತು. ಈ ವಿಚಾರ ಸಂಕಿರಣದ ವಿಷಯ, ಕೊಪ್ಪಳ ಜಿಲ್ಲೆಯ ಅಭಿವೃಧ್ದಿ ಸವಾಲುಗಳು, ಒಂದು ಚಿಂತನೆ ಎನ್ನುವುದಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ,
ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಸದಸ್ಯರೂ ಪ್ರಗತಿಪರ ಹೋರಾಟಗಾರೂ ಆದ ಡಿ. ಎಚ್, ಪೂಜಾರ ಅವರು ಸಧ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಸುಧಾರಣೆಗಳ ಪ್ರಮಾಣ ಕುಸಿತವಾಗಿರುವುದನ್ನು ಅಂಕಿ ಅಂಶಗಳ ಮೂಲಕ ಸಮಗ್ರವಾದ ಚಿತ್ರಣವನ್ನು ನೀಡಿ ಮಾತನಾಡಿದರು, ಮತ್ತೊಬ್ಬ ಅತಿಥಿಗಳಾಗಿದ್ದ ಕೊಪ್ಪಳ ವಿಶ್ವವಿದ್ಯಾನಿಲಯದ, ಕನ್ನಡ ಪ್ರಾಧ್ಯಾಪಕ ಡಾ. ಪ್ರವೀಣ ಪೋಲಿಸ್ ಪಾಟೀಲ, ಅವರು ಪ್ರಸ್ತುತ ಆರ್ಥಿಕವಾಗಿ ಭಾರತದ ಮುಂದಿರುವ ಸವಾಲುಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ತೀರ್ಥಯ್ಯ ಮಠದ, ಕಾಶಿನಾಥ ಹಂಚಿನಾಳ, ಶಂಕರ ಲಿಂಗನಬಂಡಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯಲಿ ಅವರು ಮಾತನಾಡುತ್ತಾ ಭಾರತದ ಅರ್ಥ ವ್ಯವಸ್ಥೆ, ಸಂಪೂರ್ಣವಾಗಿ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಕಾಣುವಲ್ಲಿ ಯಶಸ್ವಿಯಾಗಿರುವುದನ್ನು ನಾವು ಹೆಮ್ಮೆಯಿಂದ ಒಪ್ಪಿ ಕೊಳ್ಳಬೇಕು ಎಂದರು.
ಕುಷ್ಟಗಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಹಡಪದ ನಿರೂಪಿಸಿದರೆ, ಕುಕನೂರು ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ವಸಂತ ಗುಡಿಮನಿ ವಂದಿಸಿದರು.

ನಂತರ ಭೋಜನ ವಿರಾಮದ ಬಳಿಕ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಕವಿಗೋಷ್ಠಿ ಯ ಆಶಯ ನುಡಿಗಳನ್ನು, ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ
ಶಿವಪ್ರಸಾದ್ ಹಾದಿಮನಿ ಅವರು ಹೇಳುತ್ತಾ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತು
ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತ ಅನೇಕ ಸಾಹಿತ್ಯ ಗೋಷ್ಠಿಗಳನ್ನು ಹಮ್ಮಿಕೊಂಡು
ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದೆ, ರುದ್ರಪ್ಪ ಭಂಡಾರಿಯವರ ನೇತೃತ್ವದಲ್ಲಿ ಬಹು ನಿರೀಕ್ಷೆ ಯ
ಸಮ್ಮೇಳನ ಆಗುತ್ತಿರುವುದಕ್ಕೆ
ನಮಗೆಲ್ಲಾ ಹೆಮ್ಮೆ ಇದೆ ಎಂದರು.
ಕವಿಗೋಷ್ಠಿಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕಾರಟಗಿ, ಕುಕನೂರು ತಾಲೂಕುಗಳ ಕವಿ/ಕವಿಯತ್ರಿಯರು ಭಾಗವಹಿಸಿ
ತಮ್ಮ ಚುಟುಕುಗಳನ್ನು ವಾಚಿಸಿ
ನೆರೆದ ಪ್ರೇಕ್ಷಕರನ್ನು ರಂಜಿಸಿದರು.
ಈ ಕವಿಗೋಷ್ಠಿಯಲ್ಲಿ ಸೋಮಶೇಖರ ಕಂಚಿ, ಶರಣಪ್ಪ ವಿದ್ಯಾನಗರ, ಶ್ರೀಮತಿ ರಾಧಾ ಉಮೇಶ, ಸುನಿತಾ ಪತಂಗರಾಯ, ಶ್ರೀನಿವಾಸ ದೇಸಾಯಿ, ಎ. ಪಿ. ಅಂಗಡಿ, ಪುಷ್ಪ ಲತಾ ಯೋಳಭಾವಿ, ಶ್ರೀಮತಿ ಶಿವಮ್ಮ, ಜಿ. ಅನ್ನಪೂರ್ಣ ಪದ್ಮಸಾಲಿ, ಶಿವಪ್ರಸಾದ್ ಹಾದಿಮನಿ, ಮೈಲಾರಪ್ಪ ಉಂಕಿ, ರವಿ ಎಸ್. ಹಿರೇಮನಿ, ಅಮೀನ ಸಾಬ್ ಮುಲ್ಲಾ,
ಶಿವಮೂರ್ತಿ ಇಟಗಿ, ಸಾವಿತ್ರಿ ಮುಜಮದಾರ, ಮುಮ್ತಾಜ್ ಬೇಗಂ ಕನಕಗಿರಿ, ಕಲಾ ಮಾನ್ವಿ, ಬಸವರಾಜ ಉಪ್ಪಿನ, ಮಹೇಶ ಹಡಪದ ಮತ್ತು ಶರಣಪ್ಪ ಮಹಿಪತಿ ಸೇರಿದಂತೆ ಮುಂತಾದ ಐವತ್ತೆಂಟು ಜನ, ತಮ್ಮ ಚುಟುಕುಗಳನ್ನು ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವೀರಬಸಪ್ಪ ಪಟ್ಟಣಶೆಟ್ಟಿ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಮಂಜುನಾಥ ಚಿಕ್ಕೇನಕೊಪ್ಪ ಅವರು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಕೊನೆಯ ಹಂತ, ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ತಲೇಖಾನ್ ಮಠದ ಪೂಜ್ಯ ಶ್ರೀ ವೀರಭದ್ರ ಶರಣರು ವಹಿಸಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಿಸರ, ಸಮೃದ್ಧವಾಗಿ ಇಂತಹ ಸಮ್ಮೇಳನ ನಡೆಯಲಿ ಎಂದು ಹಾರೈಸಿದರು.
ಸಮಾರೋಪ ನುಡಿಗಳನ್ನು ಕೊಪ್ಪಳ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿಗಳಾದ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ನೆರವೇರಿಸಿದರು, ವೇದಿಕೆಯಲ್ಲಿದ್ದ ಸಿ. ವಿ ಜಡಿಯವರ್ ನಮ್ಮ ಜನಪದ ಸಾಹಿತ್ಯದಿಂದಲೇ ಚುಟುಕು ಸಾಹಿತ್ಯ ಹುಟ್ಟಿದೆ, ಅದು ಬೆಳವಣಿಗೆಯಾಗುತ್ತಾ ಸಾಗಿರುವುದು ಸಂತಸ ತಂದಿದೆ, ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜಕೀಯ ಧುರೀಣರಾದ ಶಿವಣ್ಣ ರಾಯರಡ್ಡಿಯವರು ಸಾಹಿತಿಗಳು ಗಟ್ಟಿಯಾದ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು, ಆ ಮೂಲಕ ರಾಜಕಾರಣಿಗಳ ತಪ್ಪುಗಳನ್ನು ತಿದ್ದುವ ಕಾರ್ಯವಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತ್ಯ ಪ್ರೇಮಿ, ಗಿರಿಜಾಶಂಕರ ಪಾಟೀಲ ಅವರು ” ಯುವ ಜನಾಂಗ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ವಹಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.
ಒಟ್ಟಾರೆ ಕಾರ್ಯಕ್ರಮವು ಅಭೂತಪೂರ್ವವಾಗಿ ಯಶಸ್ವಿಯಾಗಿ ನೆರವೇರಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!