ಕಲಬುರಗಿ/ ಚಿಂಚೋಳಿ : ತಾಲೂಕಿನ ರೈತ ಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ. ಸುಮಾರು ತಿಂಗಳಿಂದ ತೋಟಕ್ಕೆ, ತೋಟದ ಮನೆಗೆ, ಊರಿಂದ ದೂರ ಇರ್ತಕ್ಕಂತ ಒಂಟಿ ಮನೆಗೆ ಸರ್ಕಾರ ಸಿಂಗಲ್ ಫೇಸ್ ಕರೆಂಟ್ ಕೊಡಬೇಕೆಂದು ಆದೇಶ ಹೊರಡಿಸಿರುತ್ತದೆ. ಸರ್ಕಾರ ಆದೇಶದ ಪತ್ರ ಜೊತೆಗೆ ರೈತ ಸಂಘದ ಪತ್ರವನ್ನು ಲಗತಿಸಿ ಸಂಬಂಧಪಟ್ಟ ತಾಲೂಕಿನ ಜೆಸ್ಕಾಂ ಅಧಿಕಾರಿಗಳಿಗೆ ಕೊಟ್ಟಿದ್ದರೂ ಸಹ ಯಾವುದೇ ಪ್ರಕ್ರಿಯೆ ಆಗಿರುವುದಿಲ್ಲ. ಇವತ್ತು ಅಂದರೆ 11/ 11/ 2025 ರಂದು ಮಂಗಳವಾರ, ನಾಲ್ಕಾರು ರೈತ ಮುಖಂಡರು ಚಿಂಚೋಳಿ ಚಂದಾಪುರ ಕೆಇಬಿ ಕಚೇರಿಗೆ ಹೋಗಿ ಮಾನ್ಯ ಕಾಮಣ್ಣ ಎ ಇ ಇ ಚಿಂಚೋಳಿ, ಅಧಿಕಾರಿಯನ್ನು ಸಂಪರ್ಕಿಸಿ ಈಗಾಗಲೇ ಬೇರೆ ತಾಲೂಕಿನಲ್ಲಿ ಅನೇಕ ಹಳ್ಳಿಗಳಿಗೆ ಸಿಂಗಲ್ ಪೇಸ್ ತೋಟದ ಮನೆಗೆ ಒದಗಿಸಲಾಗಿದೆ ತಾವು ಏಕೆ ಚಿಂಚೋಳಿ ತಾಲೂಕಿನ ರೈತರಿಗೆ ಒದಗಿಸುತ್ತಿಲ್ಲ. ನಾಲ್ಕಾರು ತಿಂಗಳ ಹಿಂದೆ ತಮಗೆ ತಾಲೂಕಿನ ರೈತ ಸಂಘದ ಮುಖಂಡರು ಮನವಿ ಪತ್ರ ಸಹ ತಮಗೆ ಕೊಟ್ಟಿರುತ್ತೇವೆ ಆದರೂ ಸಹ ತಾವು ಕೊಡದೇ ಇರುವುದು ನೋವಿನ ಸಂಗತಿ. ಕೂಡಲೇ ತಾಲೂಕಿನ ತೋಟದ ಮನೆಗೆ ಸಿಂಗಲ್ ಪೇಸ್ ಒದಗಿಸಬೇಕು ಎಂದು ಆಗ್ರಹಿಸಿದಾಗ ಸಂಬಂಧಪಟ್ಟ ಜಿಲ್ಲೆಯ ಅಧಿಕಾರಿಗಳನ್ನು ಫೋನ್ ಸಂಪರ್ಕ ಮಾಡಿ ತಾಲೂಕು ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಮತ್ತು ಇನ್ನೂ ಅನೇಕ ರೈತರು ತಾಲೂಕಿನಲ್ಲಿ ಸಿಂಗಲ್ ಫೇಸ್ ಕೊಡಬೇಕೆಂದು ಆಗ್ರಹ ಮಾಡಿರುತ್ತಾರೆ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಮೇಲಾಧಿಕಾರಿಗಳ ಜೊತೆ ಮಾತನಾಡಿದಾಗ ಅವರು ರೈತರ ಪರವಾಗಿ ಅವರಿಗೆ ಸಿಂಗಲ್ ಪೇಸ್ ಕೊಡಿ ಎಂದು ತಿಳಿಸಿರುತ್ತಾರೆ. ಒಂದು ವಾರದಲ್ಲಿ ಚಿಂಚೋಳಿ ತಾಲೂಕಿನ ಸಿಂಗಲ್ ಪೇಸ್ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿರುತ್ತಾರೆ ಮತ್ತು ಇದರ ಚಾಲನೆಗೆ ತಮಗೆ ಆಹ್ವಾನಿಸುತ್ತೇನೆ ಎಂದು ಹೇಳಿರುತ್ತಾರೆ. ಅದಕ್ಕಾಗಿ ಎಲ್ಲಾ ರೈತ ಬಾಂಧವರು ಇದರ ಸದುಪಯೋಗ ಪಡಿಕೊಳ್ಳಬೇಕೆಂದು ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಮತ್ತು ರೈತ ಮುಖಂಡರ ವಿನಂತಿಸಿದ್ದಾರೆ.
ವರದಿ ಎಸ್ .ವಿ .ಗಂಗಾಣಿ



















