ಕೊಪ್ಪಳ/ಕುಷ್ಟಗಿ : ತಹಶೀಲ್ದಾರ ಕಾರ್ಯಾಲಯ ಕುಷ್ಟಗಿಯಲ್ಲಿ ಮಾನ್ಯ ತಹಶೀಲ್ದಾರ ಗ್ರೇಡ್ ೨ ಹಾಗೂ ಸಮಾಜದ ಮುಖಂಡರವರ ನೇತೃತ್ವದಲ್ಲಿ ವೀರವನತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಗ್ರೇಡ್ ೨ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಮಾತನಾಡಿ ಬಾಲ್ಯದಿಂದಲೂ ಓಬವ್ವನ ಕಥೆಯನ್ನು ಕೇಳುತ್ತಾ ಬಂದಿದ್ದೇವೆ ಆಕೆಯ ಸಾಹಸ ಧೈರ್ಯ ಆತ್ಮಸ್ಥೈರ್ಯ ಇಂದಿನ ಯುವಶಕ್ತಿಗೆ ಪ್ರೇರಣೆ ಎಂದು ಹೇಳಿದರು.
ನಂತರ ವಿಶೇಷ ಉಪನ್ಯಾಸ ನೀಡಿದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಹಡಪದ ಹೈದರಾಲಿಯ ಸೈನ್ಯದ ವಿರುದ್ಧ ಕೋಟೆಯನ್ನು ರಕ್ಷಿಸಲು ಏಕಾಂಗಿಯಾಗಿ ಹೋರಾಡಿದ
ಒನಕೆ ಓಬವ್ವ ಅವರು 18ನೇ ಶತಮಾನದ ಚಿತ್ರದುರ್ಗದ ವೀರ ವನಿತೆಯಾಗಿದ್ದು ಹೈದರಾಲಿಯ ಆಕ್ರಮಣದ ಸಮಯದಲ್ಲಿ ತಮ್ಮ ಒನಕೆಯಿಂದ ಒಂಟಿಯಾಗಿ ಶತ್ರುಗಳನ್ನು ಎದುರಿಸಿ, ತನ್ನ ಪ್ರಾಣವನ್ನು ತ್ಯಾಗ ಮಾಡುವ ಮೂಲಕ ಕೋಟೆಯನ್ನು ರಕ್ಷಿಸಿದರು.
ಅವರ ಅಸಾಧಾರಣ ಧೈರ್ಯ, ಸಮಯ ಪ್ರಜ್ಞೆ ಮತ್ತು ದೇಶಭಕ್ತಿಯನ್ನು ನೆನಪಿಸಿಕೊಳ್ಳಲು, ಕರ್ನಾಟಕ ಸರ್ಕಾರವು ಪ್ರತಿ ವರ್ಷ ನವೆಂಬರ್ 11 ರಂದು ಅವರ ಜಯಂತಿಯನ್ನು ಆಚರಿಸುತ್ತದೆ. ಓಬವ್ವನ ಸಾಹಸ ಧೈರ್ಯ ಶೌರ್ಯ ಇಂದಿನ ಮಹಿಳೆಯರಿಗೆ ಸ್ಪೂರ್ತಿ ಹಾಗೂ ಆದರ್ಶಮಯವಾಗಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಚೆನ್ನಪ್ಪ ಬಾವಿಮನಿ ರವರು ಓಬವ್ವನ ಕಥೆಯನ್ನು ಕವಿತೆಯ ಮೂಲಕ ಹಾಡಿದರು
ಸಿದ್ದಪ್ಪ ಚಲವಾದಿ ,ರಾಮಚಂದ್ರಪ್ಪ ಚಲವಾದಿ ,ಹನುಮಂತಪ್ಪ ಚಲವಾದಿ ಹಾಗೂ ಶರಣಪ್ಪಹುಡೇದ ರವರು ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಆಡಳಿತ ಸಿಬ್ಬಂದಿ ವರ್ಗ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















