
ಬಾಗಲಕೋಟೆ/ಇಲಕಲ್ಲ :ಹಿರೇಕೆರೂರ ದಿಂದ ಗುಡ್ಡಾಪುರ , ಗುಡ್ಡಾಪುರದಿಂದ ಹಿರೇಕೆರೂರ ಮಾರ್ಗವಾಗಿ ಚಲಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ವಾಹನವು (ಬಸ್) ವಿಶೇಷವಾಗಿದ್ದು, ಕನ್ನಡಮಯವಾಗಿದೆ ಆ ವಾಹನವನ್ನು ನೋಡಿದರೆ ಕನ್ನಡ ಸಾಹಿತ್ಯದ ಜಗತ್ತೇ ಕಣ್ಣ ಮುಂದೆ ಬರುತ್ತದೆ ಕನ್ನಡದ ಕಟ್ಟಾ ಅಭಿಮಾನಿಗಳಾದ ಶ್ರೀಯುತ ಶಶಿ ಬೋಸ್ಲೆ ಆ ವಾಹನದ ನಿರ್ವಾಹಕನಾಗಿದ್ದಾರೆ ಚಾಲಕರಾದ ಅಂಜನಿ ಟಿ. ಅವರು ಸಹ ಸಹಕಾರ ನೀಡುತ್ತಿದ್ದಾರೆ ಸುಮಾರು ಆರು ವರ್ಷಗಳಿಂದ ಶಶಿ ಬೋಸ್ಲೆ ಅವರು ತಮ್ಮ ವಾಹನವನ್ನು ಕನ್ನಡದ ತೇರಾಗಿ ತಮ್ಮ ಸ್ವಂತ ಖರ್ಚಿನಿಂದ ಮಾರ್ಪಾಟು ಮಾಡುತ್ತಾ ಬಂದಿದ್ದಾರೆ ಕನ್ನಡದ ಉಕ್ತಿಗಳು, ನಾಡು ನುಡಿಗಳು, ಘೋಷ ವಾಕ್ಯಗಳು, ಅದಲ್ಲದೆ ಕನ್ನಡದ ಕವಿಗಳ, ದಾಸರ ಶ್ರೇಷ್ಠರ, ಶರಣರ ಭಾವ ಚಿತ್ರಗಳನ್ನು ಸೂಕ್ತವಾದ ಸ್ಥಳಗಳಲ್ಲಿ ಲಗತ್ತಿಸಿ , ಕೆಲವೊಂದು ಪತ್ರಿಕೆ, ಪುಸ್ತಕಗಳನ್ನು ಸಹ ಇರಿಸಿ, ವಾಹನದ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳಿಗೆ ಹಳದಿ ಕೆಂಪು ಬಣ್ಣದ ಹೊದಿಕೆಗಳನ್ನು ಹಾಕಿ ಉಪಯುಕ್ತ ಮಾಹಿತಿಯೊಂದಿಗೆ ಒಳಭಾಗದಲ್ಲಿ ಅತ್ಯಂತ ಸುಂದರವಾಗಿ ಸಾಹಿತ್ಯಿಕವಾಗಿ ಅಲಂಕರಿಸಿದ್ದಾರೆ ಒಟ್ಟಿನಲ್ಲಿ ಬಸ್ ನ ಒಳಭಾಗ ಹಾಗೂ ಹೊರಭಾಗ ಎಲ್ಲವೂ ಕನ್ನಡಮಯವಾಗಿದೆ ಅದು ವಾಹನವಲ್ಲ ನಡೆದಾಡುವ ಕನ್ನಡ ಲೋಕ ಎಂದರೂ ತಪ್ಪಾಗದು ಒಮ್ಮೆಯಾದರೂ ಆ ವಾಹನವನ್ನು ಒಳಗೆ ಮತ್ತು ಹೊರಗೆ ಖಂಡಿತವಾಗಿಯೂ ತಾವೆಲ್ಲರೂ ವೀಕ್ಷಿಸಬೇಕು ಎನ್ನುವಂತಿದೆ. ದಿನಾಂಕ 13 -11- 2025 ರಂದು ಗುಡ್ಡಾಪುರದಿಂದ ಇಲಕಲ್ಲ ನಗರದ ಬಸ್ ನಿಲ್ದಾಣದಲ್ಲಿ ಆಗಮಿಸಿದ ವಾಹನದ ನಿರ್ವಾಹಕ ಹಾಗೂ ಕನ್ನಡದ ಕಟ್ಟಾಳು ಶ್ರೀಯುತ ಶಶಿ ಬೋಸ್ಲೆ ಅವರ ಜೊತೆಗೆ ಚಾಲಕರಾದ ಅಂಜನಿ. ಟಿ. ಅವರುಗಳನ್ನು ಪ್ರೀತಿ, ಅಭಿಮಾನದಿಂದ ನಗರದ ಎಸ್. ವಿ. ಎಂ ಆಯುರ್ವೇದಿಕ್ ಮಹಾವಿದ್ಯಾಲಯದ ಚೇರ್ಮನ್ ರಾದ ಶ್ರೀ ರಾಜಶೇಖರ, ರೇವಣಸಿದ್ದಪ್ಪ, ಸೂಡಿ, ಗಣ್ಯ ವ್ಯಾಪಾರಿ ಮಲ್ಲಣ್ಣ ಹರವಿ, ಐ.ಟಿ.ಐ. ಉಪನ್ಯಾಸಕ ಮಹಾಂತೇಶ ಕಂದಕೂರ ಹಾಗೂ ಸಿಬ್ಬಂದಿ ತೆಲಿಕಟ್ ಮಠ, ಶಾರದಾ ಮಂದಿರದ ಧರ್ಮದರ್ಶಿಗಳು – ನಿವೃತ್ತ ಶಿಕ್ಷಕರು ನೀಲಕಂಠ ಕಾಳಗಿ, ದತ್ತಾತ್ರೇಯ ಮಲಾರಖಾನ ಸೇರಿದಂತೆ ಇನ್ನಿತರರು ಸನ್ಮಾನಿಸಿ, ಗೌರವಿಸಿ ಸಿಹಿ ನೀಡಿ ಸಂಭ್ರಮಿಸಿದರು. ಎಲ್ಲರೂ ಒಮ್ಮೆ ವಾಹನವನ್ನು ತಪ್ಪದೇ ನೋಡಿರಿ ಖಂಡಿತವಾಗಿಯೂ ತಮಗೆಲ್ಲರಿಗೂ ಕನ್ನಡಾಭಿಮಾನ ಇನ್ನೂ ಹೆಚ್ಚಾಗುತ್ತದೆ ಹಾಗೂ ಬಹಳ ಖುಷಿ ಆಗುತ್ತದೆ ಎನ್ನುವುದು ನೆರೆದಿದ್ದ ಎಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿತ್ತು.
- ಕರುನಾಡ ಕಂದ



















