ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಂಜೀವ ಜುನ್ನೂರ ಅವರಿಗೆ ಅಂಬೇಡ್ಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಮಂಜು ಎಂ. ಚಿಕ್ಕಣ್ಣವರ ಅವರು ಮನವಿ ಪತ್ರ ನೀಡಿ ಬೈಲಹೊಂಗಲ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಎಸ್ ಸಿ, ಎಸ್ ಟಿ ಜನರಿಗೆ ಮೀಸಲಿಟ್ಟ ಅನುದಾನ ಬಳಕೆ ಆಗದ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ,ಅನುದಾನ ಬಳಕೆಯಾದ ಗ್ರಾಮ ಪಂಚಾಯಿತಿಗಳಲ್ಲಿ ಜಿಎಸ್ಟಿ ನಂಬರ್ ಇಲ್ಲದ ಬಿಲ್ ರಶೀದಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸರಕಾರ ಸುತ್ತೋಲೆ ಅನ್ವಯ ಎಸ್ ಸಿ, ಎಸ್ ಟಿ ಜನರಿಗೆ ನೀಡಬೇಕಾದ ಕಾಮಗಾರಿಗಳ ಬಗ್ಗೆ ಸಹ ಅನ್ಯಾಯವಾಗಿದೆ ಎಂದು ವಿಷಯ ವ್ಯಕ್ತಪಡಿಸಿದರು.
ವರದಿ ಮಂಜು .ಎಂ .ಚಿಕ್ಕಣ್ಣವರ



















