ಬಳ್ಳಾರಿ / ಕಂಪ್ಲಿ : ಕೊಪ್ಪಳದ ತೋಟಗಾರಿಕೆ ಇಲಾಖೆಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವೇದಿಕೆಯಲ್ಲಿ ಬಸವ ಶ್ರೀ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ವತಿಯಂದ ಆಯೋಜಿಸಿದ್ದ ದಶಮಾನೋತ್ಸವ ಹಾಗೂ ಬಸವ ತತ್ವ ಸಂಭ್ರಮಾರಣೆ 2025 ರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಂಪ್ಲಿ ತಾಲೂಕಿನ ಎಮ್ಮೀಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಯ ಅತಿಥಿ ಶಿಕ್ಷಕ ಮತ್ತು ನಿರೂಪಕ ಸಮಪನ್ಮೂಲ ವ್ಯಕ್ತಿ ಶಿಕ್ಷಕ ಎಸ್ ರಾಮಪ್ಪ ಹಾಗೂ ಜಗದೀಶ ಪೂಜಾರ್ ಅವರಿಗೆ ಸಾಮಾಜಿಕ ಸೇವೆಯನ್ನು ಗುರ್ತಿಸಿ ರಾಜ್ಯ ಮಟ್ಟದ ಬಸವ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಎಸ್ ರಾಮಪ್ಪ ಪ್ರಶಸ್ತಿ ಸ್ವೀಕರಿಸಿ ನಂತರ ಮಾತನಾಡಿ ಮಾತನಾಡಿ ನಾನು ಸುಮಾರು 20ವರ್ಷಗಳ ಕಾಲ ಶೈಕ್ಷಣಿಕ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಬಸವ ಶ್ರೀ ಸೇವಾ ಟ್ರಸ್ಟ್ ನವರು ಈ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಸಮಾಜದಲ್ಲಿ ಇನ್ನುಷ್ಟು ಸೇವೆ ಸಲ್ಲಿಸಲು ಉತ್ಸಾಹ ತಂದಿದೆ ನಮ್ಮ ಆರಾಧ್ಯ ಶಿವಯೋಗಿಗಳ ಮಾರ್ಗದರ್ಶಕರಾದ ವಾಮ ದೇವ ಶಿವಚಾರ್ಯ ಹಾಗೂ ಜಡಿತಾತ ಗ್ರಾಮದ ಸಮಸ್ತ ಹಿರಿಯರಿಗೂ ನಮನಗಳು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗುರು ಶಾಂತವೀರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ. ಮಕ್ಕಳ ಅಯೋಗದ ಸದಸ್ಯ ಕೆ. ರಾಘವೇಂದ್ರ ಜಗದೀಶ ಪೂಜಾರ್ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















