
ದೀಪಕಾಂತಿಯಲ್ಲಿ ಬೆಳಗಿದ ಸಿದ್ದಲಿಂಗ ದೇಗುಲ
ಗುರುಮಠಕಲ್/ ಬೋರಾಬಂಡಾ: ನ. 17 ಬೋರಬಂಡಾ ಶ್ರೀ ಸಿದ್ದಲಿಂಗ ಶ್ರೀಗಳ ಯೋಗ ಸಾಧನೆಯಿಂದ ಬೊಗವಾಗಿದ್ದ ಸ್ಥಳ ಯೋಗಬಂಡಿಯಾಗಿ (ಬೋರಬಂಡಾ) ಪರಿವರ್ತನೆ ಯಾದ ಪುಣ್ಯಕ್ಷೇತ್ರ ದೀಪಗಳ ಕಾಂತಿಯಲ್ಲಿ ಬೆಳಗಿತು.
ಪಶ್ಚಿಮಾದ್ರಿ ಸಂಸ್ಥಾನ ಮಠದ ಶ್ರೀ ಪಂಚಮ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವತಿಯಿಂದ ‘ಕಾರ್ತೀಕ ದೀಪೋತ್ಸವದಲ್ಲಿ ಬೆಳಗಿದ ಜ್ಯೋತಿಗಳ ಕಾಂತಿಯು ನಾಡು, ರೈತ ಹಾಗೂ ದೇಶ ಕಾಯುವ ಯೋಧನ ರಕ್ಷಣೆ ಸದಾ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಭಾರತೀಯ ಸಾಂಪ್ರದಾಯದಂತೆ ಚಳಿಗಾಲದ ಆರಂಭವು ಕಾರ್ತೀಕ ಮಾಸದಿಂದ ಆರಂಭಗೊಳ್ಳುತ್ತದೆ. ಕಾರ್ತೀಕ ಮಾಸವು ಪವಿತ್ರ ಮಾಸಗಳಲ್ಲಿ ಪ್ರಮುಖವಾಗಿದ್ದು, ದೀಪೋತ್ಸವದಿಂದ ದೇವರ ಕೃಪೆ, ಧನಾತ್ಮಕ ಶಕ್ತಿ ಸೇರಿದಂತೆ ಸಕಲ ಸನ್ಮಂಗಳ ಮತ್ತು ಸಂಪತ್ತು ಪ್ರಾಪ್ತಿಯಾಗುವ ನಂಬಿಕೆಯಿದೆ.ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾದ ರೈತರಿಗೆ, ಮೈ ಕೊರೆಯುವ ದೇಶ ಕಾಯುವ ಯೋಧನಿಗೆ, ಸಕಲ ಜೀವಾತ್ಮಕ್ಕೆ ಲೇಸಾಗಲಿ ಎಂದು ಎಲ್ಲಾ ಶ್ರೀಗಳು ದೀಪ ಬೆಳಗಿಸಿ ಶುಭ ಹಾರೈಸಿದರು.
ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಇಂದು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಯೇಲ್ಹೇರಿ ಕೊಟ್ಟೂರೇಶ್ವರ ಶ್ರೀಗಳು, ರಾಯಚೂರು ಜಿಲ್ಲೆ ಗುಡಗುಂಟಾದ ಸದಾನಂದ ಶ್ರೀಗಳು, ಬೆನಕನಹಳ್ಳಿ ಕೇದಾರಲಿಂಗ ದೇವರು, ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಶಿವಾನಂದ ಬೂದಿ, ಮಾಜಿ ಅಧ್ಯಕ್ಷರಾದ ನಾಗಭೂಷಣ ಅವಂಟಿ, ನರಸರೆಡ್ಡಿ ಪೋ. ಪಾಟೀಲ ಗಡ್ಡೆಸುಗೂರು, ಜಗದೀಶ ಕುಮಾರ ಭೂಮಾ, ಶಿವಕುಮಾರ ಗದ್ವಾಲ್, ಶ್ರೀ ಶ್ರೀ ಮಾತಾ ಭದ್ರಕಾಳಿ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ಗದ್ವಾಲ್ ಸೇರಿದಂತೆ ಸಂಘದ ಸದಸ್ಯರು, ಕಾಶೀನಾಥ್ ರಾಥೋಡ್, ಅಮೃತ ಬೋರಾಬಂಡಾ, ಶಂಕರ, ಭಾನು ಪ್ರಕಾಶ ಮೇಧಾ, ಕನ್ನಯ್ಯ ಪಡಿಗೆ ಸೇರಿದಂತೆ ಬೋರಾಬಂಡಾ, ಚಿಂತಕುಂಟಾ,ಕಂದಕೂರು ಗ್ರಾಮದ ಮುಖಂಡರು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.



















