ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಂಗನಗೌಡ ಮಂಟೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಬಾಗಲಕೋಟೆ/ ಮುಧೋಳ :ಜನಸೇವೆ ಅದು ಜನಾರ್ಧನನ ಸೇವೆ ಎಂದು ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತನಾಗಿ ಕೆಲಸವನ್ನು ಮಾಡಿದ ಮುಗಳಖೋಡದ ಯುವ ಧುರೀಣ ನಿಂಗನಗೌಡ ಮಂಟೂರ ಅವರಿಗೆ ಒ.ಬಿ.ಸಿ.ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ. ಆದೇಶ ಪತ್ರವನ್ನು ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಜಿಲ್ಲೆಯ ಹಿಂದುಳಿದ ವರ್ಗದ, ಬಡವರ, ದೀನದಲಿತರ, ನಾಡಿಮಿಡಿತವನ್ನು ಅರಿತು ಕಾಯ೯ ನಿವ೯ಹಿಸಬೇಕೆಂದು ಸೂಚಿಸಿದರು.

ಅಭಿನಂದನೆಗಳು :
ಯುವ ಧುರೀಣ ನಿಂಗನಗೌಡ ಮಂಟೂರ ಅವರಿಗೆ ಸಕಾ೯ರ ಹಾಗೂ ಕಾಂಗ್ರೆಸ್ ಪಕ್ಷವು ಗುರುತರವಾದ ಜವಾಬ್ದಾರಿ ನೀಡಿದೆ. ಕೊಟ್ಟ ಅವಕಾಶ ಬಳಸಿಕೊಂಡು ಸಕಾ೯ರದ ಅನೇಕ ಜನಪರ ಯೋಜನೆಗಳನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಲಿ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹಾರೈಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರಾದ ಮಹಾದೇವ ಇಟಕ್ಕನವರ್, ಶಂಕರಗೌಡ ಪಾಟೀಲ್, ಹಾಗೂ ಪಕ್ಷದ ಯುವ ಮುಖಂಡರಾದ ಬಿಳಿಯಾನಿಸಿದ್ದ ಸೋಮಲಿಂಗಪ್ಪ ಒಡೆಯರ್, ಅನೀಲಗೌಡ ಮಂಟೂರ, ಮಹಾಲಿಂಗಯ್ಯ ಬಬಲಾದಿಮಠ, ಪರಮಾನಂದ ಗೂಳಪ್ಪ ಕಳ್ಳೆನ್ನವರ ಮುಂತಾದವರು ಅಭಿನಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!