ವಿಜಯಪುರ : ಇಂಡಿ ಮತಕ್ಷೇತ್ರ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ನವದೆಹಲಿಯ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವ್ಹಿ ಸೋಮಣ್ಣ ನವರಿಗೆ ಮನವಿ ಸಲ್ಲಿಸಿ ಇಂಡಿ ತಾಲೂಕು ಅತ್ಯಂತ ಹಿಂದುಳಿದ ಗಡಿಪ್ರದೇಶಗಳಿಂದ ಕೊಡಿದೆ. ವಿಶೇಷವಾಗಿ ಲಿಂಬೆ, ದಾಳಿಂಬೆ ಹಾಗೂ ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವಾಗಿದೆ ಹಾಗೂ ಸುಮಾರು 3 ಸಕ್ಕರೆ ಕಾರ್ಖಾನೆಗಳು ಈ ಪ್ರದೇಶದಲ್ಲಿ ಇದ್ದು ನಮ್ಮ ಭಾಗದ ರೈತರಿಗೆ ರೈಲುಗಳ ಅವಶ್ಯಕತೆ ಇದ್ದು ಹಲವಾರು ರೈಲು ಇಂಡಿ ನಿಲ್ದಾಣದ ಮೇಲೆ ಹಾದು ಹೋಗುವವು ಆದರೆ ನಿಲುಗಡೆಗೆ ವ್ಯವಸ್ಥೆ ಇರದ ಕಾರಣ ನಮ್ಮ ರೈತರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಇದ್ದು, ಹಾಗೂ ಬಸವ ಎಕ್ಸ್‌ಪ್ರೆಸ್ ಮತ್ತು ಗೋಲಗುಮ್ಮಟ ಎಕ್ಸ್ ಪ್ರೆಸ್ ಇಂಡಿ ಇಂದ ಬೆಂಗಳೂರಿಗೆ ಹೋಗಲು 14 ರಿಂದ 15 ಗಂಟೆ ತೆಗೆದುಕೊಳ್ಳುವುದು ಆದ್ದರಿಂದ ಎರಡು ರೈಲುಗಳ ವೇಗವನ್ನು ಹೆಚ್ಚಿಸಬೇಕು ಎಂದು ನವದೆಹಲಿಯ ಕೇಂದ್ರ ಸಚಿವರ ಕಚೇರಿಯಲ್ಲಿ ನಿಯೋಗದ ಮುಖಾಂತರ ಮನವಿ ಸಲ್ಲಿಸಿದರು.
ವರದಿ ಆನಂದ ಹರಿಜನ




















