ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಸ್ತೆ ಕಾಮಗಾರಿ ಸ್ಥಗಿತ : ಎತ್ತು ಬಂಡಿ ಸಮೇತ ತಹಶೀಲ್ದಾರ್ ಕಚೇರಿ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ

ಬಾಗಲಕೋಟೆ/ ಹುನಗುಂದ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಏಕಾಏಕಿಯಾಗಿ ಸ್ಥಗಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದನ್ನು ಸಂಬoಧಿಸಿದ ಅಧಿಕಾರಿಗಳು ಬಗೆಹರಿಸುವಲ್ಲಿ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಮಂಗಳವಾರ ನೂರಾರು ಜನ ಚಿಕ್ಕಬಾದವಾಡಗಿ ಗ್ರಾಮದ ಗ್ರಾಮಸ್ಥರು ಎತ್ತು-ಬಂಡಿ ಹಾಗೂ ಟ್ರಾಕ್ಟರ್ ಸಮೇತ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಹುನಗುಂದ-ಚಿತ್ತವಾಡಗಿ ರಸ್ತೆಯ ಮಧ್ಯೆ ಇರುವ ಚಿಕ್ಕಬಾದಾವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಅರ್ಧ ಕಿ. ಮೀ. ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಏಕಾಏಕಿ ನಿಲ್ಲಿಸಲಾಗಿದೆ. ಗ್ರಾಮ ನಕಾಶೆ ದಾಖಲೆಯಲ್ಲಿ ಈ ರಸ್ತೆಯೇ ಇಲ್ಲದ್ದರಿಂದ ಜಮೀನು ಮಾಲಿಕನೋರ್ವ ರಸ್ತೆಗೆ ಹೋಗಿರುವ ಜಮೀನಗೆ ಪರಿಹಾರ ಕೊಡದಿದ್ದಕ್ಕೆ ಕಾಮಗಾರಿಗೆ ತಡೆಯೊಡ್ಡಿ ಕಾಮಗಾರಿ ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು ಒಂದು ಕಡೆಯಾದರೆ ಇನ್ನೂಂದೆಡೆಯಲ್ಲಿ ರಸ್ತೆಯಲ್ಲಿ ಒಣ ಕಡಿಗಳನ್ನು ಹಾಕಿ ಕೈ ತೊಳೆದುಕೊಳ್ಳಲು ಮುಂದಾಗಿರುವ ಅಧಿಕಾರಿಗಳ ನಡೆಗೆ ಹಾಗೂ ನಿತ್ಯ ವಾಹನಗಳಲ್ಲಿ ಸಂಚರಿಸುವ ಅದೇಷ್ಟೋ ಜನರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದು ಇದರಿಂದ ಬೇಸತ್ತ ಗ್ರಾಮಸ್ತರ ವತಿಯಿಂದ ಮಂಗಳವಾರದಂದು ನಡೆದ ಎತ್ತು ಬಂಡಿ ಮತ್ತು ಟ್ಯಾಕ್ಟರ್ ಸಮೇತ ಹೋರಾಟಕ್ಕೆ ಕಾರಣವಾಗಿದೆ.

ಗ್ರಾಮದ ಮುಖಂಡ ಬಸವರಾಜ ಹೊರಕೇರಿ ಮಾತನಾಡಿ, ಹುನಗುಂದದಿಂದ ಚಿತ್ತವಾಡಗಿ ಹೋಗುವ ಮಾರ್ಗದಲ್ಲಿ ಚಿಕ್ಕಬಾದವಾಡಗಿ ಕ್ರಾಸ್ ದಿಂದ ಗ್ರಾಮಕ್ಕೆ ₹೨೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ ೨೦ ವರ್ಷಗಳಿಂದಲೂ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಾತಿಗೆ ಗ್ರಾಮಸ್ಥರು ದನಿಗೂಡಿಸಿದರು.

ಪರನಗೌಡ ಪಾಟೀಲ, ಸಂಗಪ್ಪ ಗೋಡಿ, ಸಂಗನಬಸಪ್ಪ ಉಪನಾಳ, ಸಿಂಗಾರಿಗೌಡ ಪಾಟೀಲ ಗುರಪ್ಪ ವಂದಾಲಿ, ಮಲ್ಲಪ್ಪ ಉಪನಾಳ, ನಿಂಗನಗೌಡ ಗೌಡರ, ಭೀಮನಗೌಡ ಗೌಡ್ರ, ಅಶೋಕ ಗೌಡರ, ಮಹಾಂತಪ್ಪ ವಂದಾಲಿ, ರೂಪಾ ಗೌಡರ, ಅನುಸೂಯಾ ಗೌಡರ, ನೇತ್ರಾ ಮುಕಪ್ಪನವರ, ಸಿದ್ದವ್ವ ಲಗಳಿ, ಬಸವ್ವ ಲಗಳಿ ಸೇರಿ ಗ್ರಾಮಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಸ್ತೆ ಸಮಸ್ಯೆಯನ್ನು ಬಗೆಹರಿಸಲು ಎತ್ತಿನ ಬಂಡಿಯಲ್ಲಿ ಪ್ರಯಾಣಿಸಿದ ತಹಶೀಲ್ದಾರ
ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸಮಸ್ಯೆ ಬಗೆ ಹರಿಸಲು ಗ್ರಾಮಸ್ಥರೊಂದಿಗೆ ಎತ್ತಿನ ಬಂಡಿಯಲ್ಲಿ ಗ್ರಾಮಕ್ಕೆ ತೆರಳಿ ಕಾಮಗಾರಿಗೆ ತಡೆ ಮಾಡಿದ ವ್ಯಕ್ತಿ ಮತ್ತು ಗ್ರಾಮಸ್ಥರನ್ನು ಸೇರಿಸಿ ಸಭೆ ಮಾಡಿದರು. ಈ ಸಂಪರ್ಕ ರಸ್ತೆ ಬಹುಕಾಲದಿಂದ ಇದ್ದರೂ ಇದಕ್ಕಾಗಿ ನನ್ನ ಸುಮಾರು ಒಂದು ಎಕರೆ ಹೊಲ ಹೋಗಿದೆ. ರಸ್ತೆ ಡಾಂಬರೀಕರಣಕ್ಕೆ ನನ್ನ ವಿರೋಧ ಇಲ್ಲ. ಪರಿಹಾರ ಬೇಕು. ಈ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಮಾಡಿ ಎಂದು ತಡೆ ಮಾಡಿದ ವ್ಯಕ್ತಿ ಮನವಿ ಮಾಡಿಕೊಂಡನು.

ಜಮೀನ ಮಾಲೀಕ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ :ಕೆಲ ಹೊತ್ತು ಪ್ರಕ್ಷುಬ್ದ ವಾತಾವರಣ ನಿರ್ಮಾಣ

ರಸ್ತೆ ಸಲುವಾಗಿ ಜಮೀನ ಮಾಲೀಕ ಮತ್ತು ಅಧಿಕಾರಿಗಳ ಹಾಗೂ ಗ್ರಾಮಸ್ತರ ಮಧ್ಯೆ ಮಾತಿನ ಸಂಘರ್ಷ ನಡೆದು ಕೆಲ ಹೊತ್ತು ಪ್ರಕ್ಷುಬ್ದ ವಾತಾವರಣ ಸೃಷ್ಠಿಯಾಗಿ ತಹಶೀಲ್ದಾರ್ ಸೇರಿ ಯಾರೂ ಗ್ರಾಮದಿಂದ ಹೋಗದಂತೆ ಎಲ್ಲಾ ಮಾರ್ಗಗಳಿಗೆ ಚಕ್ಕಡಿ, ಮುಳ್ಳು ಕಂಟಿ ಹಚ್ಚಿ ಬಂದ್ ಮಾಡಿದರು. ಪರಿಸ್ಥಿತಿಯ ಗಂಭೀರತೆ ಅರಿತ ತಹಶೀಲ್ದಾರ ಹಿರೇಮಠ, ಈ ರಸ್ತೆ ಆಯ್ದು ಹೋದ ಎಲ್ಲಾ ಕೃಷಿ ಭೂಮಿಗಳ ಸರ್ವೆ ಮಾಡಿ ಯಾರದು ಎಷ್ಟು ಭೂಮಿ ಹೋಗಿದೆ ಎಂಬುದನ್ನು ಗುರುತಿಸಿ, ಇದರ ಸ್ವಾಧೀನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡ ಜಿ. ಪಂ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ನಾಯಕ ಅವರಿಗೆ ಸೂಚಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!