
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಗದಗ ಜಿಲ್ಲೆ ಮತ್ತು ತಾಲೂಕ ಪದಾಧಿಕಾರಿಗಳಿಂದ ರೈತರಿಗೆ ಬೆಂಬಲ ನೀಡಲಾಯಿತು. ದೇಶಕ್ಕೆ ಅನ್ನ ಹಾಕುವ ರೈತನು ಇಂದು ತಾನು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೇ ಇಂದು ಪ್ರತಿಭಟನೆಗೆ ಇಳಿದಿದ್ದು ಬಹಳ ಖೇದಕರ ವಿಷಯವಾಗಿದೆ. ನಮ್ಮ ರೈತರು ತಾವು ಶಪಥ ಮಾಡಿ ಬೆಳೆ ಬೆಳೆಯದೆ ಇದ್ದರೆ ನಾವೆಲ್ಲಾ ಯಾವ ಅಧಿಕಾರ ಅಂತಸ್ತು ಅಂತ ಮೆರೆಯುತ್ತಿದ್ದೇವೆಯೋ ಎಲ್ಲರೂ ಮಣ್ಣು ತಿನ್ನಬೇಕಾಗುತ್ತೆ. ಸಂಬಂಧ ಪಟ್ಟ ಸರ್ಕಾರವಾಗಲಿ ಮತ್ತು ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಇದು ಜಿಲ್ಲೆ ಜಿಲ್ಲೆಗೆ ಹೋರಾಟ ಕಿಚ್ಚು ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಹಾಲಪ್ಪ ಈ ವರವಿ ಹಾಗೂ ಗದಗ ಜಿಲ್ಲೆ ಅಧ್ಯಕ್ಷರಾದ ಶ್ರೀ ಸಣ್ಣಯಲ್ಲಪ್ಪ ವಳಗೇರಿ, ಗದಗ ಜಿಲ್ಲೆಯ ಗೌರವ ಅಧ್ಯಕ್ಷರಾದ ಶ್ರೀ ಸದಾನಂದ ನಂದೆಣ್ಣವರ, ಕುಮಾರ್ ಬೆಟಗೇರಿ, ರಮೇಶ ಲಮಾಣಿ,ಸಂತೋಷ್ ರಾಠೋಡ,ಮಾಲತೇಶ್ ರಗಟಿ, ಕೊಟ್ರೇಶ ನಿರಲಗಿಮಠ, ಮನು ಕಲಾಲ್, ಶ್ರೀನಿವಾಸ ಬಸವರೆಡ್ಡಿ, ನಾಗರಾಜ್, ಕೆಂಚಪ್ಪ, ನಿಂಗಪ್ಪ, ಮಹಮ್ಮದ್ ಅಲಿ, ಗೋಪಾಲ, ನಾಗೇಶ, ಲಕ್ಷ್ಮಣ, ಶಂಕರಗೌಡ, ಬಸು, ಸಿದ್ದು, ಇಮಾಮಾಸಾಬ, ಮಾಂತೇಶ, ಹನುಮಂತ, ಸೋತೋಷಗೌಡ ಸೇರಿದಂತೆ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ವರದಿ – ಸದಾಶಿವ ಭೀ. ಮುಡೆಮ್ಮನವರ



















