ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಸಕರ ಮನೆ ಚಲೋ ಕಾರ್ಯಕ್ರಮ…

ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳಿಗಾಗಿ ಚಳಿಗಾಲ ಅಧಿವೇಶನದಲ್ಲಿ ವಿಧಾನಸೌಧದಲ್ಲಿ ಧ್ವನಿ ಎತ್ತಲು ಶಾಸಕರ ಮನೆ ಚಲೋ ಕಾರ್ಯಕ್ರಮ.

ಗದಗ / ರೋಣ: ಕರ್ನಾಟಕ ರಾಜ್ಯದಲ್ಲಿ 63,000 ಗ್ರಾಮ ಪಂಚಾಯಿತಿ ನೌಕರರು, ಬಿಲ್ ಕಲೆಕ್ಟ್ರುಗಳಾಗಿ, ಕ್ಲರ್ಕ್ ಕಂ. ಗಣಕಯಂತ್ರ ನಿರ್ವಾಹಕರಾಗಿ, ಸ್ವಚ್ಛತಾಗಾರರಾಗಿ, ಸಿಪಾಯಿ ಮತ್ತು ವಾಟರ್ ಮ್ಯಾನ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರವು ಕೊಟ್ಟಷ್ಟು ವೇತನಕ್ಕೆ ದುಡಿಯುತ್ತಿದ್ದ ಗ್ರಾಮ ಪಂಚಾಯಿತಿ ನೌಕರರಿಗೆ ಇಡೀ ಕರ್ನಾಟಕ ರಾಜ್ಯದಲ್ಲಿ ಸಂಘಟಿಸಿ ನಿರಂತರ ಹೋರಾಟ ಮಾಡಿದರ ಫಲವಾಗಿ ಪಂಚಾಯಿತಿ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ಸೇರಿಸಲಾಗಿದೆ.

ಆದರೆ ಇವರಿಗೆ ಬಾಕಿ ಉಳಿಯುವಷ್ಟು ವೇತನ ಮಾತ್ರ ಸಿಗುತ್ತಿಲ್ಲ ಮತ್ತು ಪಂಚಾಯತ್ ಮಟ್ಟದಲ್ಲಿ ಸ್ವಚ್ಛವಾಹಿನಿ ನೌಕರರು ಎಂದು ಸರಕಾರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಗೆ ಆಧಾರದಲ್ಲಿ ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದಾರೆ.
ಸರಕಾರ ಗ್ರಾಮ ಪಂಚಾಯಿತಿ ನೌಕರರು ಎಂದು ಪರಿಗಣಿಸಬೇಕು ಮತ್ತು ಒಂದು ನಿಗದಿತ ವೇತನ ನೀಡಬೇಕು.
1994 ರಿಂದ 2017 ವರೆಗೆ
ಗ್ರಾಮ ಪಂಚಾಯಿತಿ ನೌಕರರಿಗೆ ತೆರಿಗೆ ವಸೂಲಿ ಮಾಡಿಯೇ ವೇತನ ದೊರೆಯುತ್ತಿತ್ತು.
2018 ರಿಂದ ಸರಕಾರದ ನಿಧಿಯಿಂದ ವೇತನ ಪಡೆಯುವಂತಾಗಿದೆ.
ಆದರೆ ಪ್ರತಿ ತಿಂಗಳು ವೇತನ ಸಿಗದೆ ಗ್ರಾಮ ಪಂಚಾಯಿತಿ ನೌಕರರ ಬದುಕು ನಡೆಸುವುದು ಗಂಭೀರವಾಗಿರುತ್ತದೆ.
ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಜಾರಿ ಮಾಡುತ್ತಿರುವ ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಕುರಿತು ಯಾರೂ ಗಮನ ಹರಿಸದಿರುವುದು ದೊಡ್ಡ ದುರಂತವಾಗಿದೆ.
ಕಳೆದ 5-6 ವರ್ಷಗಳಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕೆಂದು ಇವತ್ತಿನ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ 36,000 ವೇತನ ನೀಡಬೇಕೆಂದು ಹೋರಾಟ ನಡೆಸಿ ಸರಕಾರಕ್ಕೆ ಒತ್ತಾಯಿಸಿದರು ಸರಕಾರ ಇನ್ನೂವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗ್ರಾಮ ಪಂಚಾಯಿತಿ ನೌಕರರಿಗೆ ಸರಿಯಾದ ಅವಧಿಗೆ ವೇತನ ಸಿಗದೇ ನೌಕರರು ವಾಟರ್ ಮ್ಯಾನ್ ಒಬ್ಬರು ನಿರಾಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂತಹ ಅನಾಹುತ ಪರಿಸ್ಥಿತಿಯಲ್ಲಿ ಪಂಚಾಯ್ತಿ ನೌಕರರು ದಿನ ಕಳೆಯುತ್ತಿದ್ದಾರೆ.
ಈ ಎಲ್ಲಾ ತೊಂದರೆಗಳು ಇದ್ದರೂ ಸರಕಾರ ಗಮನ ನೀಡುತ್ತಿಲ್ಲ ಎಂದು ರೋಣ ತಾಲೂಕ ಹಾಗೂ ಗಜೇಂದ್ರಗಡ ತಾಲೂಕ ಸಿಐಟಿಯು ವತಿಯಿಂದ ರೋಣ ಮತಕ್ಷೇತ್ರದ ಶಾಸಕ ಜಿಎಸ್ ಪಾಟೀಲ ಇವರ
ಮನೆಗೆ ತೆರಳಿ ಸಿಐಟಿಯು ಜಿಲ್ಲಾ ಸಂಚಾಲಕ ಪೀರು ರಾಥೋಡ್ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ನೌಕರರು.
ನಗರದ ಪರಿವೀಕ್ಷಣಾ ಮಂದಿರದಿಂದ ಮುಲ್ಲನಬಾವಿ ಕ್ರಾಸ್ ಮಾರ್ಗವಾಗಿ ಶಾಸಕರ ಮನೆಯವರಿಗೆ ಕಾಲ್ನಡಿಗೆ ಮೂಲಕ ಹೋಗಿ ಮನವಿ ಸಲ್ಲಿಸಲಾಯಿತು.

ಜನಪ್ರತಿನಿಧಿಗಳಾದ ತಾವು ಗ್ರಾಮ ಪಂಚಾಯಿತಿ ನೌಕರರಿಗೆ ಮತ್ತು ಸ್ವಚ್ಛ ವಾಹಿನಿ ನೌಕರರಿಗೆ ಪ್ರತಿ ತಿಂಗಳು ವೇತನ ಸಿಗುವಂತೆ ಗ್ರಾಮ ಪಂಚಾಯಿತಿ ನೌಕರರ 18 ಬೇಡಿಕೆಗಳನ್ನು ಈಡೇರಿಸುವಂತೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮುಂಗಡಪತ್ರದ ಅಧಿವೇಶನದಲ್ಲಿ ಗ್ರಾಮ ಪಂಚಾಯಿತಿ ನೌಕರರ ಪರವಾಗಿ ಧ್ವನಿ ಎತ್ತಿ ಸರ್ಕಾರದ ಗಮನವನ್ನು ಸೆಳೆಯಬೇಕೆಂದು ಈ ಮನವಿ ಪತ್ರವನ್ನು ನೀಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ನೌಕರರು ಮನವಿ ಕೊಡುವುದರ ಮೂಲಕ ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರ ಪರವಾಗಿ ಧ್ವನಿ ಎತ್ತುತ್ತಿರಿ ಎಂದು ರೋಣ ಗಜೇಂದ್ರಗಡ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ಭರವಸೆ ಇಟ್ಟಿದ್ದೇವೆ.

ತಕ್ಷಣ ನಮ್ಮ ಮನವಿಯನ್ನು ಪರಿಶೀಲಿಸಿ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಗ್ರಾಮ ಪಂಚಾಯಿತಿ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ರೋಣ- ಗಜೇಂದ್ರಗಡ ತಾಲೂಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮರಲಿಂಗಪ್ಪ ಮುತಾರಿ ನಬಿಸಾಬ್ ಭಗವಾನ, ಬಸನಗೌಡ ಪಾಟೀಲ ಗಣಕಯಂತ್ರ ನಿರ್ವಾಹಕರು ಅಮರಗೊಳ, ಮಲ್ಲಪ್ಪ ಮೇಟಿ ಕರ ವಸೂಲಿಗಾರರು ಅಮರಗೊಳ, ಮಂಜುನಾಥ್ ಮಾಮನಿ ಕರ ವಸೂಲಿಗಾರರು ಗ್ರಾಮ ಪಂಚಾಯತ್ ಹುನಗುಂಡಿ,
ಚೆನ್ನಯ್ಯ ವಸ್ತ್ರದ ಕರ ವಸೂಲಿಗಾರರು ಗ್ರಾಮ ಪಂಚಾಯತ್ ಮೆಣಸಗಿ,
ಪ್ರಕಾಶ ನರೇಗಲ್, ಮುದುಕಪ್ಪ ದೊಣ್ಣೆಗುಡ್ಡ,
ಸಕ್ರಪ್ಪ ಬೆಳಕಲ್, ಚಂದ್ರು ಉಪಾಧ್ಯಾಯ, ಈರಣ್ಣ ಚಳಗೇರಿ, ಸಿಕಂದರ್ ಭಗವಾನ್, ಶಾನವಾಜ್, ಶಾಂತವ್ವ ಚಲವಾದಿ, ಮರಿಯಪ್ಪ ಮಾದರ, ಭೀಮಪ್ಪ ಹಡಪದ, ಮುತ್ತು ಅರಹುಣಿಸಿ ಸೇರಿದಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!