ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಮಲಾಪುರ ಕ. ಸಾ. ಪ ವತಿಯಿಂದ ರಾಜ್ಯೋತ್ಸವ ಗೌರವ ಪುರಸ್ಕಾರ ಪ್ರದಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಕೃತಿ ನೀಡಿದ ಪುಣ್ಯ ನೆಲ ನಮ್ಮದು, ಸಾಮಾಜಿಕ ನ್ಯಾಯ ಹಾಗೂ ವಾಸ್ತವಿಕತೆಯ ನೆಲಗಟ್ಟಿನ ಮೇಲೆ ರಚಿತವಾದ ವಚನ ಸಾಹಿತ್ಯ ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆಯಾಗಿದೆ,
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕವಿಯ ವಾಣಿಯಲ್ಲೇ ಕನ್ನಡ ಭಾಷೆಯ ಮಹತ್ವ ಅರಿವಾಗುತ್ತದೆ ಎಂದು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಹೇಳಿದರು.
ಕಮಲಾಪುರ ತಾಲೂಕಿನ ಕುರಿಕೋಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ರಾಜ್ಯೋತ್ಸವ ಗೌರವ ಪುರಸ್ಕಾರ ಪ್ರದಾನ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡು ನುಡಿಯ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯ ಇರಬೇಕು,
ಕನ್ನಡ ಭಾಷೆ ನಿಮ್ಮೆಲ್ಲರ ಅನ್ನದ ಭಾಷೆ, ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಬೇಡಿ , ಕನ್ನಡ ಭಾಷೆ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸೋಣ, ಎಂದರು.
ಉದ್ಯಮಿ ಗುರು ಮಾಟೂರ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಕನ್ನಡ ಭಾಷೆ ಕುರಿತು ಜಾಗೃತಿ ಅತ್ಯಗತ್ಯವಾಗಿದೆ, ಈ ನಿಟ್ಟಿನಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ ಶ್ರಮ ಶ್ಲಾಘನೀಯವಾಗಿದೆ, ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಿದ್ದರಿಂದ ಮತ್ತಷ್ಟು ಜವಾಬ್ದಾರಿ ವಹಿಸಿ ಕಾಯ೯ ನಿವ೯ಹಿಸುವಂತೆ ಪ್ರೇರಣೆ ದೊರಕಿದೆ ಎಂದರು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ಕೆಲವೇ ಜನರಿಗೆ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ್ನು ಜನಸಾಮಾನ್ಯರ ಪರಿಷತ್ ವನ್ನಾಗಿಸಲು ಜಿಲ್ಲಾ ಕ. ಸಾ. ಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ, ಕನ್ನಡ ಭಾಷೆ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ, ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮಗಿದೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಾಡು, ನುಡಿಯ ಏಳಿಗೆಗಾಗಿ ಶ್ರಮಿಸಿದ ಪ್ರಮುಖರಿಗೆ ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದರು.
ನಿವೃತ್ತ ಶಿಕ್ಷಕ, ಸಂಗಣ್ಣ ಚಿಲಶೇಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಚಿದಂಬರ ಶೇಖರ ಮಾತನಾಡಿದರು.
ಈ ಸಂದರ್ಭದಲ್ಲಿ ಕುರಿಕೋಟಾ ಗ್ರಾ. ಪಂ. ಅಧ್ಯಕ್ಷೆ ಅನಿತಾ ಧನ್ವಂತರಿ, ಕುರಿಕೋಟಾ ಪಿಕೆಪಿಎಸ್ ಅಧ್ಯಕ್ಷ ಗಣೇಶ ಚಿಕ್ಕನಾಗಾಂವ, ಕುರಿಕೋಟಾ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರು ಸಂತೋಷಕುಮಾರ ಹೊಸಮನಿ, ಕುರಿಕೋಟಾ ಶೀ ಚನ್ನವೀರ ಶಿವಯೋಗಿ ಪ್ರೌಢಶಾಲೆಯ ಮುಖ್ಯ ಗುರು ವಿಜಯಕುಮಾರ ಕಂದಳ್ಳಿ, ಗುರುರಾಜ ಬಮ್ಮಣ, ಪ್ರಿಯಾರಾಣಿ, ಅಂಬಾರಾಯ ಹಿಪ್ಪರಗಿ, ಸುರೇಖಾ, ಜಯಶ್ರೀ, ದೇವಿಲಾಲ ಖಡಕೆ, ಅಂಬಾರಾಯ ಹಿಪ್ಪರಗಿ, ಅಭಿಲಾಶ್ ಮದನಕರ್ ರವಿ ಸೇರಿದಂತೆ ಇತರರು ಇದ್ದರು.
ಕಸ್ತೂರಿಬಾಯಿ ರಾಜೇಶ್ವರ ನಿರೂಪಿಸಿದರು, ರಮ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಅನಂತಕುಮಾರ್ ಪಾಟೀಲ್ ಸ್ವಾಗತಿಸಿದರು, ನಾಗಣ್ಣ ವಿಶ್ವಕರ್ಮ ವಂದಿಸಿದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು : ಬಸವರಾಜ ಗೌಡನೂರ, ಸುಧಾ ಶೆಟ್ಟಿ, ಡಾ.ಪ್ರಕಾಶ ಗೋಗಿ, ಕುಮಾರಿ ಭವಾನಿ, ದೇವೇಂದ್ರ ಕಟ್ಟಿಮನಿ, ಕುಮಾರಿ ಅನಿತಾ, ಕುಮಾರಿ ಪೂಣಿ೯ಕಾ, ಕುಮಾರಿ ಭವಾನಿ, ಕುಮಾರಿ ಲಕ್ಷ್ಮೀ, ಕುಮಾರಿ ,
ಕುಮಾರಿ ನಂದಿತಾ, ಕುಮಾರಿ ಸುನಿತಾ ಭಾಗವಹಿಸಿ ಕವನ ವಾಚನ ಮಾಡಿದರು.
ರಾಜ್ಯೋತ್ಸವ ಗೌರವ ಪುರಸ್ಕಾರಕ್ಕೆ ಭಾಜನರಾದವರು
ಗುರುಪಾದಪ್ಪ ಮಾಟೂರ ( ಉದ್ಯಮ),
ಅರುಣಕುಮಾರ ಲಗಶೇಟ್ಟಿ (ವಿ ವಿ ಬಳ್ಳಾರಿ), ಚಿದಂಬರ ಶೇಖರ್ (ಪ್ರಾಥಮಿಕ ಶಿಕ್ಷಣ),
ಸತೀಶ ಪಾಟೀಲ್ (ಸಾಮಾಜಿಕ ಕ್ಷೇತ್ರ),
ಶಿವಲಿಂಗ ಕೋರಿ ಬೆಳಕೋಟಾ (ಮಾಧ್ಯಮ), ಮಲ್ಲಿಕಾರ್ಜುನ ಕೊಳ್ಳುರೆ (ಲೋಕಾಯುಕ್ತ ಇಲಾಖೆ)
- ಕರುನಾಡ ಕಂದ ಪತ್ರಿಕೆ




















