ಯಾದಗಿರಿ/ಶಹಾಪುರ : ದಿನಾಂಕ 23-11-2025 ರಂದು ಬೆಳಿಗ್ಗೆ 11 ಗಂಟಿಗೆ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನು ಮಾಡುವ ಸಲುವಾಗಿ ಕರೆ ಕೊಟ್ಟಿದ್ದ ಬಗ್ಗೆ ಶ್ರೀ ಸರ್ವಜ್ಞ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷರು ಸಂಗಮೇಶ ಕುಂಬಾರ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನು ಮಾಡುವುದರಿಂದ ನಮ್ಮ ಭಾಗದಲ್ಲಿ ಪದವಿ ಮುಗಿಸಿಕೊಂಡು ಮನೆಯಲ್ಲಿರುವ ಯುವಕ ಯುವತಿಯರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ತುಂಬಾ ಉಪಯೋಗವಾಗಿತ್ತದೆ ಪ್ರತ್ಯೇಕ ರಾಜ್ಯವನ್ನು ಮಾಡಿದರೆ ಅನುದಾನವನ್ನು ಸರಿಯಾದ ರೀತಿಯಿಂದ ಬಳಕೆ ಮಾಡಿ ನಮ್ಮ ಭಾಗದ ಜನರಿಗೆ ಅಭಿವೃದ್ದಿ ಮಾಡುವ ಸಲವಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಲೇಬೇಕು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಸುಭಾಸ್ ಹೋತಪೇಟ ಅಂಗವಿಕಲರ ಸಂಘಟನೆ ರಾಜ್ಯ ಅಧ್ಯಕ್ಷರು, ಅಂಬ್ರೆಷ್ ದಿಗ್ಗಿ RPI ಜಿಲ್ಲಾ ಅಧ್ಯಕ್ಷರು ಯಾದಗಿರಿ, ಮಹಮ್ಮದ್ ಇಸ್ಮಾಯಿಲ್ ದಲಿತ ಮತ್ತು ಮೈನಾರಿಟಿ ತಾಲೂಕು ಅಧ್ಯಕ್ಷರು, ಭೀಮಣ್ಣಗೌಡ ರೈತ ಸಂಘದ ತಾಲೂಕು ಅಧ್ಯಕ್ಷರು, ಧರ್ಮಣ್ಣ ನಾಟೇಕರ ಡಿ ಎಸ್ ಎಸ್ ತಾಲೂಕು ಅಧ್ಯಕ್ಷರು, ಭೀಮಣ್ಣ ಬಡಿಗೇರ ಡಿ ಎಸ್ ಎಸ್ ಜಿಲ್ಲಾ ಅಧ್ಯಕ್ಷರು ಯಾದಗಿರಿ, ಶ್ರೀಶೈಲ ಮುಡುಬುಳ ಸಮಾಜ ಸೇವಕರು, ಅಮಲಪ್ಪ ಪೂಜಾರಿ ಹಿರಿಯ ಸಾಹಿತಿಗಳು, ಮರೆಪ್ಪ ಹಾಲಗೇರಾ ಶಿಕ್ಷಕರು, ಮಾಳಪ್ಪ ಭೋಸಿ, ಮಂಜುನಾಥ್ ಭೋಸಿ ಸೇರಿದಂತೆ ಇತರರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ.




















