ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ತೋಟದ ಮನೆಗೆ. ಇಂದು ಸರ್ಕಾರದ ಆದೇಶದಂತೆ ತೋಟದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಯಿತು. ರೈತ ಕಾಂತಪ್ಪ ರಟಕಲ ರವರ ತೋಟದ ಮನೆಗೆ ರಾತ್ರಿ ಹೊತ್ತು ಸಿಂಗಲ್ ಫೇಸ್ ಗೆ ಚಾಲನೆ ನೀಡಿದ ಕಾಳಗಿ ಜೆಸ್ಕಾಂ ಅಧಿಕಾರಿ ಸಹಾಯಕ ಕಾರ್ಯನಿರಂತರ ಅಭಿಯಂತರರು, ಇಲಿಯಾಸ ಅಹಮದ ರವರು ಸಾo 7:00ಗೆ ತೋಟದ ಮನೆಗೆ ಬಂದು ಚಾಲನೆ ನೀಡಿದರು. ಚಾಲನೆ ನೀಡಿದ ಜೆಸ್ಕಾಂ ಅಧಿಕಾರಿ ರವರಿಗೆ ರೈತರು ಸನ್ಮಾನಿಸಿ ಗೌರವಿಸಿ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಹಾಯಕ ಇಂಜಿನಿಯರ, ವೀರಣ್ಣ ಗಂಗಾಣಿ ತಾಲ್ಲೂಕು ಅಧ್ಯಕ್ಷರು ರೈತ ಸಂಘ, ಸಂಗಾರೆಡ್ಡಿ ಅಂತರೆಡ್ಡಿ ಶಿವಲಿಂಗಪ್ಪ ಸುಲೇಪೇಠ, ರಾಜಪ್ಪ ಗಂಜಗೂಡ, ರೇವಣಸಿದ್ದಪ್ಪ ಚಿದ್ರಿ, ಸಚಿನ ಮರಾಠ, ಸುಬ್ಬಣ್ಣ ಬೇಡರ, ಗುರಪ್ಪ ಚಿಂತಪಳ್ಳಿ, ಮೌನೇಶ ಮರಾಠ, ಪವರ್ ಮ್ಯಾನ್ ಗಳಾದ ರಮೇಶ ರಟಕಲ್, ಸಿದ್ದರಾಮ, ಚಂದ್ರು, ನೀಲಕಂಠ ಸೇರಿದಂತೆ ಇನ್ನೂ ಅನೇಕ ರೈತರಿದ್ದರು.
ವರದಿ ಚಂದ್ರಶೇಖರ ಆರ್ ಪಾಟೀಲ್




















