
ಸೀಡ್ ಫಂಡ್ ಯೋಜನೆಯಡಿ 22 ಫಲಾನುಭವಿಗಳಿಗೆ ಆಡು ವಿತರಣೆ.
ಗುರುಮಠಕಲ್: ನ.24 ಪಟ್ಟಣದ ಪಶು ಚಿಕಿತ್ಸಾ ಅಸ್ಪತ್ರೆಯಲ್ಲಿ ಎಪಿಡಿ ಸಂಸ್ಥೆಯ ಜೀವನೋಪಾಯ ವಿಭಾಗದ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮಗಳ ಒಟ್ಟು 22 ಜನ ವಿಕಲಚೇತನರಿಗೆ ಉಸ್ಮಾನ ಬಾದ್ ತಳಿಯ ಆಡುಗಳನ್ನು ವಿತರಿಸುವ ಮೂಲಕ ವಿಕಲಚೇತನರಿಗೆ ಆದಾಯದ ದಾರಿ ಮಾಡಿಕೊಳ್ಳಲು ಪ್ರೇರಣೆಯಾದರು.
ಸಂಸ್ಥೆಯು ಕಳೆದ 3 ವರ್ಷಗಳಿಂದಲೂ ಒಟ್ಟಾರೆ 21 ತರಹದ ವಿಕಲಚೇತನರಿಗಾಗಿ ಆರೋಗ್ಯ,ಶಿಕ್ಷಣ, ಜೀವನೋಪಾಯ, ನೀತಿ ಮತ್ತು ವಕಾಲತ್ತು ಎಂಬ ನಾಲ್ಕು ಹಂತಗಳಲ್ಲಿ ಅನೇಕ ಮಾದರಿಯ ಕಾರ್ಯಕ್ರಮಗಳನ್ನು ಸರ್ಕಾರದ ಸಹಯೋಗದಲ್ಲಿ ಕೈ ಗೊಂಡು ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ವಿಕಲಚೇತನರು ಆಡುಗಳನ್ನು ಪಡೆದು ಮುಂಬರುವ ದಿನಮಾನಗಳಲ್ಲಿ ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ ತಮ್ಮ ಆರ್ಥಿಕತೆಯನ್ನು ಬಲಗೊಳಿಸಿ ಇತರರಿಗೆ ಮಾದರಿಯಾಗಬೇಕೆಂದು ಎಪಿಡಿ ತಾಲೂಕ ಸಂಯೋಜಕ ವಿರುಪಾಕ್ಷಪ್ಪ ಮಾಲಿ ಪಾಟೀಲ್ ಮಾತನಾಡಿದರು.
ಉಸ್ಮಾನ ಬಾದ್ ಕುರಿ ಸಾಕಾಣಿಕೆ ಹಾಗೂ ತರಬೇತಿಯ ಗುಂಡು ಪವಾರ್ ರವರು ಮಾತನಾಡಿ ಇದು ಉತ್ತಮ ತಳಿಯಾಗಿದ್ದು ಇದಕ್ಕೆ ತಾವುಗಳು ಉತ್ತಮ ಆರೈಕೆ ಮಾಡಿದರೆ ವರ್ಷಕ್ಕೆ ಎರಡರಿಂದ ಮೂರು ಉತ್ತಮ ಮರಿಗಳನ್ನು ನೀರಿಕ್ಷಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಕಿರಣ್ ಹಾಜಾರೆ ಪಶು ವೈಧ್ಯಾಧಿರಿಗಳು, ಡಾ. ಸುನೀಲ್ ಕುಮಾರ್, ಸಂಸ್ಥೆಯ ಜೀವನೋಪಾಯ ವಿಭಾಗದ ಜಿಲ್ಲಾ ಸಂಯೋಜಕರಾದ ಶಿವಯೋಗಪ್ಪ. ಹುಲಿಯಪ್ಪ, ರಮೇಶ ಹೊಸಳ್ಳಿ ,ಶ್ರೀ ಕುಮಾರ, ಶಿಲ್ಪಾ ಎಸ್. ಶಿಲ್ಪಾ ಎಂ. ಶ್ರೀಮತಿ ಅಂಬಿಕಾ, ಸುರೇಶ, ರೇಷ್ಮಾಬೇಗಂ, ನಾಗಮಣಿ, ಗಂಗಪ್ಪ ಸೇರಿದಂತೆ ಅಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















