
ಬೆಳಗಾವಿ ಹೆಸ್ಕಾಂ ಇಂಜಿನಿಯರ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಹಾಗೂ ನೂತನ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಶಾಮರಾವ್ ಘಾಟಗೆ ವಹಿಸಿದ್ದರು.
ಅತಿಥಿಗಳಾಗಿ ರಾಜ್ಯ ಸಂಘಟನಾ ಸಂಚಾಲಕರಾದ ಕೆಂಪಣ್ಣ ಸಾಗ್ಯ, ಚಂದ್ರು ಚಕ್ರವರ್ತಿ, ಪ್ರಭು ಮೇಗಳಮನಿ, ಪ್ರಕಾಶ ಕೆಲ್ಲೂರ್, ಬೆಳಗಾವಿ ವಿಭಾಗೀಯ ಸಂಚಾಲಕರಾದ ರಮೇಶ ಸಣ್ಣಕ್ಕಿ
ಆಗಮಿಸಿದ್ದರು.
ಮಹಿಳಾ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ವಿಜಯಪುರ ಜಿಲ್ಲಾ ಸಂಚಾಲಕರಾದ ಚಂದ್ರಕಾಂತ ಶಿಂಗೆ ಇವರ ನೇತೃತ್ವದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳಾಗಿ ಲಕ್ಷ್ಮಣ ತೆಳಗಡೆ, ಸಂಘಟನಾ ಸಂಚಾಲಕರಾಗಿ ಶಾಬಪ್ಪ ಸಣ್ಣಕ್ಕಿ, ಶಿವಾನಂದ ಹೊಸಮನಿ, ನಟರಾಜ್ ಮಾವರಕರ, ಪುಂಡಲೀಕ ಕೋಲಕಾರ, ಮಹಾಂತೇಶ ಕಾಂಬಳೆ, ಬೈಲಹೊಂಗಲ ಉಪ ವಿಭಾಗೀಯ ಸಂಚಾಲಕ ರಮೇಶ ಇರಗಾರ, ಜಿಲ್ಲಾ ಕಾರ್ಯ ನಿರ್ವಾಹಕ ಸದಸ್ಯರಾಗಿ ಲಕ್ಷ್ಮಣ ಮೇತ್ರಿ, ಮಾರುತಿ ಸರ್ವಿ, ಬೆಳಗಾವಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅಶೋಕ ಸಿದ್ದಲಿಂಗಪ್ಪಗೋಳ, ಆನಂದ ಬಡಿಗವಾಡ, ವಿಲ್ಸನ್ ಡವಳೇಶ್ವರ, ಮೂಡಲಗಿ ತಾಲೂಕಾ ಸಂಚಾಲಕರಾಗಿ ನಂಜುಂಡಿ ಸರ್ವಿ ನೇಮಕಗೊಂಡರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು, ಕಾರ್ಯಕ್ರಮದ ನಿರೂಪಣೆ ಶಿವಾನಂದ ಹೊಸಮನಿ, ವಂದನಾರ್ಪಣೆಯನ್ನು ನಟರಾಜ್ ಮಾವರಕರ ನಡೆಸಿಕೊಟ್ಟರು.
ವರದಿ ವಿಲ್ಸನ್ ಡವಳೇಶ್ವರ




















