
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಆದರ್ಶ ಶಾಲೆಯಲ್ಲಿ ನಡೆದ ಕನಕಗಿರಿ ಉತ್ತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಪಬ್ಲಿಕ್ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ನಿರ್ಣಾಯಕರ ಗಮನ ಸೆಳೆದರು.
ಒಟ್ಟು 12 ಪ್ರಶಸ್ತಿಗಳು ಶಾಲೆಗೆ ಸಂದಿದ್ದು,
ತರುಣಕುಮಾರ ಮರಾಠ ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನ,
ಅನ್ಸರ್ ಮೆಹದಿ ಹಿಂದಿ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಕೃತಿಕಾ ರಕ್ಕಸಗಿ ಕಥೆ ಹೇಳುವುದರಲ್ಲಿ ಪ್ರಥಮಸ್ಥಾನ, ಸ್ನೇಹಾ ನಾಯ್ಕ ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಪ್ರಥಮಸ್ಥಾನ,
ಭುವನ್ ಕುಮಾರ ಛದ್ಮವೇಷದಲ್ಲಿ ಪ್ರಥಮಸ್ಥಾನ, ಆಶುಭಾಷಣದಲ್ಲಿ ಮತ್ತು ಅಭಿನಯ ಗೀತೆಯಲ್ಲಿ ಮಿಜಭಾ ಹಯಾತ್ ಪ್ರಥಮ ಸ್ಥಾನ,
ವೈಭವಿ ಶಿರಾಗೋಳ ಕಂಠಪಾಠ ಇಂಗ್ಲೀಷ್ ನಲ್ಲಿ ದ್ವಿತೀಯ ಸ್ಥಾನ,
ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಸಾರಾ ಹಂಚಿನಾಳ ದ್ವಿತೀಯ ಸ್ಥಾನ,
ಮಫ್ತೂಹಾ ತಸ್ನೀಮ್ ಕಂಠಪಾಠ ಕನ್ನಡದಲ್ಲಿ ತೃತೀಯ ಸ್ಥಾನ,
ಭೂಮಿಕಾ ದೇಶಭಕ್ತಿ ಗೀತೆಯಲ್ಲಿ ಭೂಮಿಕಾ ತೃತೀಯ ಸ್ಥಾನ,
ನಿಶಾರಾ ಕಥೆಹೇಳುವುದಲ್ಲಿ ತೃತೀಯ ಸ್ಥಾನ ಒಟ್ಟು ಹನ್ನೆರಡು ಪ್ರಶಸ್ತಿಗಳು ಮಕ್ಕಳಿಗೆ ಬಹುಮಾನವಾಗಿ ಲಭಿಸಿವೆ.
ಈ ಸಂದರ್ಭದಲ್ಲಿ ಕನಕಗಿರಿ ಉತ್ತರ ಕ್ಲಸ್ಟರ್ ಸಿ ಆರ್ ಪಿ ಶ್ರೀಯುತ ರಾಜೀವ್ ರವರು ಸೇರಿದಂತೆ ಅಧಿಕಾರಿಗಳು, ಆದರ್ಶ ಶಾಲೆಯ ಮುಖ್ಯಗುರುಗಳು ಶಿಕ್ಷಕರು ಮಕ್ಕಳನ್ನು ಶ್ಲಾಘಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ ನಾಯಕ, ಸಹ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ನಾಯ್ಕ, ಶಿಕ್ಷಕಿಯರಾದ ಕಾವ್ಯ ಬಾವಿಕಟ್ಟಿ, ಬೀಬಿ ಫಾತಿಮಾ, ಮಂಜುನಾಥ ಪಾಟೀಲ್, ಮಂಜುನಾಥ ಮಿಟ್ಲಕೋಡ, ಶ್ರೀಮತಿ ಮೇಘಶ್ರೀ ನಾಯಕ, ಮರಿಯಮ್ಮ ಚಲುವಾದಿ , ಶ್ರೀಮತಿ ತ್ರಿವೇಣಿ ರಾಮ್ ಜಿ, ರಿಯಾನಾ ಬೇಗಂ, ಸುನೀತಾ ಹಿರೇಮಠ, ರಾಜೇಶ್ವರಿ.ವಿ, ನೀಲಾ ಚಿತ್ರಗಾರ , ವೆಂಕಟೇಶ ಕಂಠಿ ವೆಂಕಟೇಶ ಕಲಿಕೇರಿ, ಜುಬೇದಾ ಬೇಗಂ, ಜಡೇಶ್ ಎಲ್ಲರೂ ಮಕ್ಕಳ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ವರದಿ ಹನುಮಂತಪ್ಪ ನಾಯಕ



















