
ವಿಶೇಷ ಪುಷ್ಪ ಅಲಂಕಾರ | ನೂರಕ್ಕೂ ಅಧಿಕ ಸುಮಂಗಲೆಯರಿಂದ ಕುಂಕುಮಾರ್ಚನೆ.
ಯಾದಗಿರಿ/ಗುರುಮಠಕಲ್: ಡಿ.07 ಪಟ್ಟಣದ ನಾರಾಯಣಪುರ ಬಡಾವಣೆಯ ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನವ ಮೂರ್ತಿ ಪ್ರತಿಷ್ಠಾನದ 2 ನೇಯ ವಾರ್ಷಿಕೋತ್ಸವ ಇಂದು ಅತ್ಯಂತ ಭಕ್ತಿ ಶ್ರದ್ಧೆಯಿಂದ ಜರುಗಿತು.
ಖಾಸಾಮಠ ಶ್ರೀ ಮನಿಪ್ರ ಶಾಂತವೀರ ಮುರುಘ ರಾಜೇಂದ್ರ ಗುರುಗಳು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೀರಭದ್ರ ಸ್ವಾಮಿಗೆ ಪುಷ್ಪ ನಮನ ನೀಡಿ ನೆರೆದಿದ್ದ ಭಕ್ತ ಸಮೂಹಕ್ಕೆ ಶುಭ ಆಶಿರ್ವಾದ ನೀಡಿದರು.

ಆರ್ದ್ರಾ ನಕ್ಷತ್ರದ ಹಿನ್ನಲೆಯಲ್ಲಿ ಶಿವನನ್ನು ಒಲಿಸಿಕೊಳ್ಳಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದೇ ದಿನದಂದು ವಾರ್ಷಿಕೋತ್ಸವದ ಬಂದಿರುವದು ದೇವಸ್ಥಾನದ ಸದ್ಭಕ್ತರಲ್ಲಿ ವಿಶೇಷವಾದ ಭಕ್ತಿ ಸಂಭ್ರಮ ಹೆಚ್ಚಾಗುವಂತೆ ಮಾಡಿತ್ತು.
ಗೋ ಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಭದ್ರಕಾಳಿ ಮಾತಾ, ಗಜಾನನ, ನಂದಿ ವಿಗ್ರಹಗಳಿಗೆ ವಿಶೇಷ ಪೂಜೆ, ವಿವಿಧ ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕಾರ ನೂರಕ್ಕೂ ಅಧಿಕ ಮಾತೆಯರಿಂದ ಶ್ರೀಮಾತಾ ಭದ್ರಕಾಳಿ ಅಮ್ಮನವರಿಗೆ ಉಡಿ ತುಂಬುವ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಪುರೋಹಿತ ಬಳಗ,ವೀರಶೈವ ಲಿಂಗಾಯತ ಸಮಾಜ ಸದಸ್ಯರು, ಶ್ರೀ ಭದ್ರಕಾಳಿ ಮಾತಾ ಮಹಿಳಾ ಸಂಘ ಸದಸ್ಯರು, ಆರ್ಯವೈಶ್ಯ ವಾಸವಿ ಸಮಾಜ, ದೇವಸ್ಥಾನದ ಸದ್ಭಕ್ತರು ಸೇರಿದಂತೆ ಇತರರು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















