ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಣರಂಗವಾದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ.

ಸದಸ್ಯರ ಪ್ರಶ್ನೆಗಳಿಗೆ ಪಿಡಿಓ ಮೌನಕ್ಕೆ ಶರಣು, ಕಿರಿಯ ಇಂಜನಿಯರ ವಿರುದ್ಧ ಸರ್ವ ಸದಸ್ಯರು ಗರಂ.

ಕಾಕಲವಾರ/ಗುರುಮಠಕಲ್: ಡಿ.12 ತಾಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಇಂದು ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್, ಅಧ್ಯಕ್ಷರಾದ ಹಣಮಂತು ಮೀದಿಗಡ್ಡ ಮಧ್ಯೆ ಮಾತಿನ ಚಕಮಕಿ ಜರುಗಿತು.

ನರೇಗಾ ಕೂಲಿ ಹಣ, ಕರ ವಸೂಲಿ ತೆರಿಗೆ, ವಿಕಲ ಚೇತನರ 5% ಅನುದಾನ, ಗ್ರಾಮದಲ್ಲಿನ ಚರಂಡಿ, ಕಾಕಲವಾರ ವಿದ್ಯುತ್ ದೀಪಗಳು, ಬೋರಾಬಂಡಾದಲ್ಲಿ ಕೆಟ್ಟು ನಿಂತ ಬೋರವೆಲ್ ದುರಸ್ತಿ ಸೇರಿದಂತೆ ಹಲವು ವಿಷಯಗಳ ಕುರಿತು ಪಿಡಿಓ ಹಾಗೂ ಇಂಜಿನಿಯರ್ ವಿರುದ್ಧ ಸದಸ್ಯರು ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತರಾಟೆ ತೆಗೆದುಕೊಂಡರು.

ಈಗಾಗಲೇ ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ನೀಡಿಲ್ಲ, ಕಾಮಗಾರಿ ಹಣದ ಬಗ್ಗೆ ಕೇಳಿದರೆ ಹಿಂದಿನ ಜೆಇ ಅವಧಿಯದ್ದು ಅವರಿಗೇ ಕೇಳಿ ನಂಗೆ ಗೊತ್ತಿಲ್ಲ ಎಂದು ಪಿಡಿಓ ಶಿವರಾಯ ಹೇಳುತ್ತಾರೆ.

ಸದಸ್ಯರಾದ ಈರಾರೆಡ್ಡಿ ಮತ್ತು ಬಸಯ್ಯ ಕಲಾಲ್‌ ಮಾತನಾಡಿ, ನಮ್ಮಲ್ಲಿ ಕರ ವಸೂಲಿ ಮಾಡಿದ್ದು ಗೊತ್ತಾಗುತ್ತಿದೆ. ಆದರೆ, ಬಳಕೆಗೆ ಸಂಬಂಧಿಸಿ ಸದಸ್ಯರಿಗೆ ಒಂದು ನಯಾ ಪೈಸೆ ಲೆಕ್ಕವೂ ಗೊತ್ತಿಲ್ಲ. ಜತೆಗೆ 15ನೇ ಹಣಕಾಸು ಯೋಜನೆಯ ಬಳಕೆಯ, 5 ವರ್ಷದಿಂದ ಅಂಗವಿಕಲರಿಗೆ ಮಿಸಲಿಟ್ಟಿರುವ 5% ಅನುದಾನ ಬಳಕೆಯ ಮಾಹಿತಿ ಕೇಳಿದರೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು, ಜೆಇ ರಾಜಿರೆಡ್ಡಿ ವಿರುದ್ಧ ಎಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ ಎಂದು ಹೇಳಿದರು.

ಸ್ಪಷ್ಟವಾಗಿ ಭ್ರಷ್ಟಾಚಾರದ ಅನುಮಾನ ಮೂಡುತ್ತಿದೆ. ಬೇಸತ್ತಿರುವ ಎಲ್ಲಾ ಸದಸ್ಯರ ಸಹಿ ಸಂಗ್ರಹಿಸಿ ಜೆಇ ಅವರನ್ನು ಗ್ರಾಮ ಪಂಚಾಯಿತಿಯಿಂದ ಎತ್ತಂಗಡಿ ಮಾಡಲು ಸದಸ್ಯರು ಅಧ್ಯಕ್ಷರಿಗೆ ತಾಕೀತು ಮಾಡಿದರು.

ಪಂಚಾಯಿತಿ ಅಧ್ಯಕ್ಷ ಹಣಮಂತು ಮೀದಿಗಡ್ಡ ಮಾತನಾಡಿ, ಕಳೆದ 5 ವರ್ಷಗಳ ಅವಧಿಯ ಕರ ವಸೂಲಿ ಮತ್ತು ಬಳಕೆ ಕುರಿತು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಹಾಗೂ ಹಣಕಾಸು ಯೋಜನೆಗಳ ಮಾಹಿತಿಯನ್ನು ಸೋಮವಾರ ಸದಸ್ಯರಿಗೆ ನೀಡಿ ಪಿಡಿಒ ಮತ್ತು ಸಿಬ್ಬಂದಿಗೆ ಸೂಚಿಸಿದರು.

ಪಿಡಿಒ ಶಿವರಾಜ ಮಾತನಾಡಿ, ಜೆಇ ಬದಲಾವಣೆಗೆ ಸದಸ್ಯರ ನಿರ್ಧಾರದಂತೆ ಜೆಇ ಅವರನ್ನು ಬದಲಿಸಲು ಮೇಲಾಧಿಕಾರಿಗಳಿಗೆ ತಿಳಿಸುವದಾಗಿ, ಸಭೆಯ ನಡವಳಿಕೆಯ ಮತ್ತು ಶಿಫಾರಸ್ಸಿನೊಡನೆ ಮನವಿ ಸಲ್ಲಿಸುವೆ ಮತ್ತು ಅಧ್ಯಕ್ಷರ ಸೂಚನೆಯಂತೆ ಸೋಮವಾರ ಸದಸ್ಯರು ಕೇಳಿದ ಲೆಕ್ಕಪತ್ರ ಮತ್ತು ಮಾಹಿತಿ ನೀಡುವುದಾಗಿ ಈಗಾಗಲೇ ಸದಸ್ಯರ ಸಮಸ್ಯೆಯಾಗಿರುವ ಕುರಿಶೆಡ್ ನಿರ್ಮಾಣದ ಬಿಲ್‌, ನರೇಗಾ ಕೂಲಿ ಕಾರ್ಮಿಕರ ವೇತನವನ್ನು ಬಿಡುಗಡೆಗೆ ಶೀಘ್ರವೇ ಎನ್‌ಎಂಆರ್ ಸಮಸ್ಯೆ ಬಗೆಹರಿಸಲು ಸ್ವಲ್ಪ ಸಮಯಾವಕಾಶ ನೀಡಿ ಎಂದು ಸಭೆಗೆ ಕೋರಿದರು.

ಇವತ್ತಿನ ಸಾಮಾನ್ಯ ಸಭೆ ಸಾಕಷ್ಟು ಸಮಸ್ಯೆಗಳ ಕುರಿತು ಚರ್ಚೆ ಹಾಗೂ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ಮುಕ್ತಾಯವಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ವಸಂತಾ ಕೇಶವರೆಡ್ಡಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!