ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳ ಆಸಕ್ತಿಯನ್ನು ನೋಡಿ ಶಿಕ್ಷಣ ಕೊಡಿಸಿ : ಅರುಣಾ ಕಲ್ಲೂರ ದೇಸಾಯಿ

ವಿಜಯಪುರ/ ಮುದ್ದೇಬಿಹಾಳ :
ನಾಲತವಾಡ ಪಟ್ಟಣದ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಶಂಕ್ರಪ್ಪ ಗಂಗಪ್ಪ ನವಲಿ ಇವರ ಮೊಮ್ಮಗಳಾದ ಕುಮಾರಿ ಅರುಣಾ ರಾಮು ಕಲ್ಲೂರ ದೇಸಾಯಿ ಸಿ. ಎ. ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಈ ಸಾಧಕಿಗೆ ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ನಾಲತವಾಡ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವಿದ್ಯಾರ್ಥಿನಿಗೆ ಜ್ಞಾನದ ಜೊತೆಗೆ ಆರೋಗ್ಯ ಆಯಸ್ಸು ಕೂಡ ಕೊಟ್ಟು ಕಾಪಾಡಲಿ ಎಂದು ಎ ಎಸ್ ಪಟ್ಟಣಶೆಟ್ಟಿ ನಿವೃತ್ತ ಶಿಕ್ಷಕರು ಹೇಳಿದರು. ಹೆಣ್ಣು ಮಕ್ಕಳಿಗೆ ಬೇಗನೆ ಮದುವೆ ಮಾಡಿ ಕಳಿಸಿ ಬಿಡುತ್ತಾರೆ ಅವರಿಗೆ ಶಿಕ್ಷಣದ, ಜೀವನದ ಅರಿವೇ ಇರುವುದಿಲ್ಲ. ಹೆಣ್ಣು ಮಕ್ಕಳು ಶಿಕ್ಷಣದಿಂದ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಾಧ್ಯ. ಪಾಲಕರು ಮಕ್ಕಳ ಯಾವ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುತ್ತಾರೋ ಅದನ್ನೇ ಪಾಲಕರು ಪ್ರೋತ್ಸಾಹ ಮಾಡಬೇಕು ಎಂದು ಹೇಳಿದರು . ಮಕ್ಕಳಿಗೆ ಯಾವುದೇ ರೀತಿಯಿಂದ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಸಾಧಕಿ ಅರುಣಾ ರಾಮು ಕಲ್ಲೂರ ದೇಸಾಯಿರವರು ಹೇಳಿದರು. ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ನವಲಿ ಕುಮಾರಿ ಅರುಣಾ ರಾಮು ಕಲ್ಲೂರ ದೇಸಾಯಿ ರವರು ನಡೆದು ಬಂದ ಹಾದಿಯನ್ನು ವಿದ್ಯಾಭ್ಯಾಸ ಹೇಗೆ ಮಾಡಿದರೆಂದು ಹೇಳಿದರು. ಶಿಕ್ಷಕ ದಂಪತಿಗಳಾದ ಭಾಗ್ಯಶ್ರೀ ಸಂಗಮೇಶ ನವಲಿ ಸಾಧಕಿ ಅರುಣಾ ರಾಮು ಕಲ್ಲೂರ ದೇಸಾಯಿರವರ ಪರಿಚಯವನ್ನು ಕಿರು ಚಿತ್ರದ ಮೂಲಕ ವಿಸ್ತಾರವಾಗಿ ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಧಕಿ ಅರುಣಾ ರಾಮು ಕಲ್ಲೂರ ದೇಸಾಯಿ ರವರಿಗೆ ಕಸಬಾಪೇಟೆ ಗುರು ಹಿರಿಯರು, ಶ್ರೀ ಅಮರೇಶ್ವರ ಶಾಲೆಯ ಸಿಬ್ಬಂದಿಯವರು ಶ್ರೀ ಅನುಸೂಯ ಶಾಂತಪ್ಪ ಶಿವಪ್ಪ ಅಂಬ್ರಮ್ಮ ನವಲಿ ರವರ ಆಶೀರ್ವಾದ ಶಿಕ್ಷಣ ಸೇವಾ ಟ್ರಸ್ಟ್ ನಾಲತವಾಡ ನವಲಿ ಬಂಧು ಬಳಗ ಮತ್ತು ಊರಿನ ಗಣ್ಯ ವ್ಯಕ್ತಿಗಳು ಹಾಗೂ ಗುರು ಹಿರಿಯರು ಸನ್ಮಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜ ಸೇವಕರಾದ ಶ್ರೀಮಂತ ಗುರುಪ್ರಸಾದ ದೇಶಮುಖರವರು ಮಾತನಾಡಿ ನಮ್ಮ ನಾಲತವಾಡದ ವೀರೇಶ್ವರ ಕಾಲೇಜಿನಲ್ಲಿ ಕಲಿಯುವ ಎಲ್ಲಾ ಮಕ್ಕಳಿಗೂ ಸಾರಥಿ ಕುಮಾರಿ ಅರುಣಾ ರಾಮು ಕಲ್ಲೂರ ದೇಸಾಯಿ ಜ್ಞಾನಾಮೃತ ಲಭಿಸಲೆಂದು ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಸಬಾ ಪೇಟೆಯ ಮತ್ತು ನಾಲತವಾಡದ ಕೀರ್ತಿಯನ್ನು ಹೆಚ್ಚಿಸಿದಳು ಎಂದು ಶಶಿಧರ ಬಂಗಾರಿಗೌಡ್ರ ಮಾತನಾಡಿದರು. ಶ್ರೀ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಎಮ್ ಎಸ್ ಪಾಟೀಲರವರು ಮಾತನಾಡಿ ನಮ್ಮ ಊರಿನ ಕೀರ್ತಿ ಇದೇ ರೀತಿ ನವಲಿ ಜೇನುಗೂಡು ಪರಿವಾರದಿಂದ ಬೆಳಗಲಿ ಎಂದು ಹಾರೈಸಿದರು.
ಈ ವೇಳೆ ದಿವ್ಯ ಸಾನಿಧ್ಯವನ್ನು ಗುರುಸ್ವಾಮಿ ಹಿರೇಮಠ, ಸುರೇಶ ಹಿರೇಮಠ, ಶೇಖರಯ್ಯ ಸ್ಥಾವರಮಠ, ಶಿವಯ್ಯ ವಿರಕ್ತಮಠ, ಮುತ್ತು ಸ್ತಾವರಮಠ ವಹಿಸಿದ್ದರು. ಬಿ ಬಿ ಪಾಟೀಲ,ಶಶಿಧರ ಬಂಗಾರಿಗೌಡ್ರ, ಅಮರೇಶ ದೇಶಮುಖ , ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಜಗದೀಶ ತಾತರೆಡ್ಡಿ, ಬಸಣ್ಣ ವಡಗೇರಿ, ಶಂಕ್ರಪ್ಪ ನವಲಿ,ಎ ಎಸ್ ಪಟ್ಟಣಶೆಟ್ಟಿ ಸಂಗಣ್ಣ ಹಡ್ಲಗೇರಿ,ಸಂಗಮೇಶಗೌಡ ಪಾಟೀಲ, ರಾಯನಗೌಡ ತಾತರೆಡ್ಡಿ, ಖಾಜಾ ಹುಸೇನ್ ಎತ್ತಿನಮನಿ, ಮಹಾಂತೇಶ ಗಂಗನಗೌಡ (ಎಮ್ ಎ ಜಿ), ಹನುಮಂತರಾಯ ಕುರಿ, ಮೌನೇಶ ಪೆಟ್ಕರ್, ಸಂಗಮೇಶ ಮೇಟಿ, ಕಸಬಾಪೇಟೆ ಓಣಿಯ ಗುರುಹಿರಿಯರು ನವಲಿ ಬಂಧು ಬಳಗ ಶಾಲೆಯ ಸಿಬ್ಬಂದಿ ವರ್ಗ ಮುದ್ದು ಮಕ್ಕಳು ನಾಲತವಾಡದ ಗುರು ಹಿರಿಯರು ಉಪಸ್ಥಿತರಿದ್ದರು.
ಕುಮಾರಿ ಸಮೃದ್ಧಿ ಸಂಗಮೇಶ ನವಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಗುರು ಮಾತಾಜಿ ಭಾಗ್ಯಶ್ರೀ ಸಂಗಮೇಶ ನವಲಿ ನಿರೂಪಿಸಿದರು. ಶ್ರೀ ಬಸವರಾಜ ನವಲಿ ಸ್ವಾಗತಿಸಿದರು ಕ್ಯಾತನಡೋಣಿ ಶಾಲೆಯ ಮುಖ್ಯ ಗುರುಗಳಾದ ಬಸವರಾಜ ನಿಂಗಪ್ಪ ನವಲಿ ಕಾರ್ಯಕ್ರಮ ನಿರ್ವಹಿಸಿದರು ಸ.ಹಿ.ಪ್ರಾ ಶಾಲೆ ಗುಡಿಹಾಳ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!