ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿವೃದ್ಧಿ ಹರಿಕಾರ ರೈತ ಪರ ಕಾಳಜಿಯುಳ್ಳ ಶ್ರೀ ಬಸನಗೌಡ ಪಾಟೀಲ ರವರ ಹುಟ್ಟುಹಬ್ಬ ಆಚರಣೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಮತ್ತು ಕಾಳಗಿ ಪಟ್ಟಣದಲ್ಲಿ ನೇರ ನುಡಿಯ, ರಾಜ್ಯದ ಅಭಿವೃದ್ಧಿಯ ಹರಿಕಾರ, ರೈತರ ಪರ ನಿರಂತರವಾಗಿ ಹೋರಾಟ ಮಾಡುವ ಮೂಲಕ ಕರ್ನಾಟಕದಲ್ಲಿ ತನ್ನದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚಿಂತನೆ ಮಾಡುವ ಏಕೈಕ ವ್ಯಕ್ತಿ, ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ವಿಜಯಪುರ ಶಾಸಕರು ಮತ್ತು ಸಿದ್ದಶ್ರೀ ಯತ್ನಾಳ್ ಕಾರ್ಖಾನೆಯ ಅಧ್ಯಕ್ಷರಾದ
ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಹುಟ್ಟುಹಬ್ಬದ ನಿಮಿತ್ಯ ಮೊದಲಿಗೆ ಶ್ರೀ ರೇವಣಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ ರಟಕಲ್ ಶಾಲೆಯಲ್ಲಿ ಗಿಡಕ್ಕೆ ನೀರುಣಿಸುವ ಮುಖಾಂತರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ 400 ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಬುಕ್, ಪೆನ್ನು ಕೊಟ್ಟು ಸಿಹಿ ಹಂಚಿ,
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ವಿಶೇಷವಾಗಿ ಚಿಂಚೋಳಿ ಕಾರ್ಖಾನೆಯ 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಖಾನೆಯನ್ನು ಮತ್ತೆ ಚಿಂಚೋಳಿಯಲ್ಲಿ ಮರು ಪ್ರಾರಂಭಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟ ಮಾನ್ಯ ಬಸನಗೌಡ ಪಾಟೀಲ್ ಯತ್ನಾಳ್ ರವರಿಗೆ ತಾಲೂಕು ರೈತ ಸಂಘ, ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ರೈತರು, ಯತ್ನಾಳ ಅವರ ಅಭಿಮಾನಿಗಳ
ವತಿಯಿಂದ ಈ ಹುಟ್ಟುಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾಳಗಿ ತಾಲೂಕ ರೈತ ಸಂಘ ಅಧ್ಯಕ್ಷ ವೀರಣ್ಣ ಗಂಗಾಣಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು, ವೇದಿಕೆಯ ಅಧ್ಯಕ್ಷತೆಯನ್ನು ಶ್ರೀ ಶಿವರಾಜ್ ಪಾಟೀಲ್ ಗೊಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಹಿಸಿದ್ದರು.
ವೇದಿಕೆಯನ್ನು ಉದ್ದೇಶಿಸಿ ರೈತ ಮುಖಂಡ ವೀರಣ್ಣ ಗಂಗಾಣಿ ಮಾತನಾಡುತ್ತಾ ” ಸನ್ಮಾನ್ಯ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ ರವರ ಕೊಡುಗೆ ತಾಲೂಕಿಗೆ ಅಪಾರವಾಗಿದ್ದು ಚಿಂಚೋಳಿ ಪಟ್ಟಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಸಿದ್ಧ ಸಿರಿ ಕಾರ್ಖಾನೆ ತಾಲೂಕಿನ ರೈತರಿಗೆ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟಂತ ಸಿದ್ದಶ್ರೀ ಕಾರ್ಖಾನೆ. ಮತ್ತು ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಅನೇಕ ಕಡೆ ಸಿದ್ದಸಿರಿ ಬ್ಯಾಂಕ್ ಹಳ್ಳಿಗಳಲ್ಲಿ ನೂರಾರು ಜನರಿಗೆ ಉದ್ಯೋಗವಕಾಶ ಮಾಡಿಕೊಟ್ಟ ಸಂಸ್ಥೆ ಇದಾಗಿದ್ದು ರೈತರಿಗೆ ಮತ್ತು ಕಾರ್ಮಿಕರಿಗೆ ವ್ಯಾಪಾರಸ್ಥರಿಗೆ ಸುಮಾರು ಜನರಿಗೆ ಈ ಸಂಸ್ಥೆ ಅನುಕೂಲ ಮಾಡಿಕೊಟ್ಟಿದೆ. ಈ ಭಾಗದ ರೈತರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹುಟ್ಟುಹಬ್ಬ ಆಚರಣೆ ಮಾಡೋಣ ಅಂತ ಹೇಳಿದಾಗ ಹಲವಾರು ಅಭಿಮಾನಿಗಳು ತಾಲೂಕಿನ ರೈತ ಮುಖಂಡರು ಎಲ್ಲರೂ ಕೂಡಿ ಈ ಒಂದು ಯತ್ನಾಳ್ ಗೌಡರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು, ಅಭಿಮಾನಿಗಳು ,ರೈತ ಮುಖಂಡರು ಭಾಗಿಯಾಗಿದ್ದು ನನಗೆ ಸಂತೋಷವಾಗಿದೆ ಮುಂದಿನ ದಿನಮಾನಗಳಲ್ಲಿ ಮಾನ್ಯ ಬಸನಗೌಡ ಪಾಟೀಲ್ ಯತ್ನಾಳ ರವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಆಯುಷ್ಯ ಸಂಪತ್ತು ಕೊಟ್ಟು ಆ ಭಗವಂತ ಕಾಪಾಡಲೆಂದು ಮತ್ತು ರಾಜ್ಯದ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು, ಮುಖ್ಯ ಗುರುಗಳಾದ ಲಕ್ಷ್ಮಣ ದೇಸಾಯಿ, ಶಿವರಾಜ್ ಪಾಟೀಲ್ ಗೋಣಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ರೈತ ಸಂಘ, ನಾಗಯ್ಯ ಸಾಲಿಮಠ, ಶರಣು ಸೀಗಿ, ವೀರೇಶ್ ಬುಕ್ಕಟಿಗಿ, ವಿಜಯ್ ಕುಮಾರ್ ಜಡಗಿ, ರಮೇಶ ಸಿದ್ದನಾಕ, ಮಲ್ಲು ಹೂಗಾರ, ಜಗ್ಗು ಹೆಬ್ಬಾಳ ಸರಕಾರಿ ಪ್ರಾಥಮಿಕ ಶಾಲೆ ರಟಕಲ್, ಮುಖ್ಯ ಗುರುಗಳಾದ, ಅಹಮದ ಖಾನ, ಸಹ ಶಿಕ್ಷಕರಾದ ಶಿವಲಿಂಗಪ್ಪ , ಸಿ ಆರ್ ಪಿ ಗಳಾದ ದಯಾನಂದ ಹುಲಸುಗೂಡ, ಅತಿಥಿ ಶಿಕ್ಷಕರದ ಭೀಮರಾವ್ ಕುಡ್ದಳ್ಳಿ, ಸಹ ಶಿಕ್ಷಕಿಯರು, ನೂರಾರು ಮುದ್ದು ಮಕ್ಕಳು, ಡಾ.ವೈಶಾಲಿ ಎಸ್ ಕೆ,
ಸ್ಟಾಫ್ ನರ್ಸ್ ಮಾದೇವಿ ಹಾಗೂ ಮುಖಂಡರಾದ ಸುಂದರ್ ಡಿ ಸಾಗರ, ದೇವಿಂದ್ರ ಕದಂ ಕಾಳಗಿ, ತಿಮ್ಮಯ್ಯ ಆರ್ ಒಡೆಯರಾಜ, ಕರಣ ರಾಜಪುರ, ಸುಭಾಷ್ ಕಾಳಗಿ, ಸಿದ್ದು ರಾಮನ ಸೇರಿದಂತೆ ಇನ್ನೂ ಅನೇಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಇದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!