ಬಳ್ಳಾರಿ / ಎಮ್ಮಿಗನೂರು : ಗ್ರಾಮದ ಹಂಪಿ ಸಾವಿರ ದೇವರ ಮಹಂತರ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಶಾಸಕರು ಮಾಜಿ ಸಚಿವರು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ನುಡಿ ನಮನ ಸಲ್ಲಿಸಲಾಯಿತು.
ಈ ವೇಳೆ ವಾಮದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಮತ್ತು ಉದ್ಯಮಿಯಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುವುದರ ಜೊತೆಗೆ ರಾಜಕಾರಣದಲ್ಲಿ ಅಜಾತಶತ್ರು ಎನಿಸಿಕೊಂಡವರು ಅಲ್ಲದೆ ರಾಜಕೀಯ ಸ್ಥಾನಮಾನಕ್ಕಿಂತ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಮಾನಗಳು ಬಹಳಷ್ಟು ಮುಖ್ಯ ಎಂದು ಸಮಾಜದಲ್ಲಿ ನಡೆದವರು ವಿಶಾಲ ಹೃದಯವಂತಿಕೆಯನ್ನು ಹೊಂದಿ ಮಠಮಾನ್ಯಗಳ ಉಳುವಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿ ದಾನ ಧರ್ಮವಂತರು ಎನಿಸಿಕೊಂಡ ಚೇತನ ಎಂದರು.
ಈ ಸಂದರ್ಭದಲ್ಲಿ ಮಸ್ಕಿಯ ಅವರ ರುದ್ರಮುನಿ ಶಿವಾಚಾರ್ಯರು ಪ್ರಮುಖರಾದ ಎಚ್. ಎಮ್. ಮಂಜುನಾಥ ಸ್ವಾಮಿ, ಬೇರ್ಗೆ ಮಹೇಶ್ ಗೌಡ, ಹಂಪಿ ಜಡಿಮೂರ್ತಿ, ಪಿಗ್ಮಿ ಶರಣಬಸವನಗೌಡ, ಘನ್ನಮಟ್ಟಸ್ವಾಮಿ, ಬಿ ಜಡೆಮೂರ್ತಿ, ಬಜಾರ್ ಬಸವರಾಜ್, ಚನ್ನಪಟ್ಟಣ ಬಸವನಗೌಡ, ಎಸ್. ರಾಮಪ್ಪ, ವಿರೇಶಪ್ಪ, ಲೋಕೇಶ್ ಸೇರಿದಂತೆ ಸಮಾಜದ ಮುಖಂಡರು ಯುವಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















