ಮಾತೆ ಮುತ್ತು ಮಾತೆ ಮೃತ್ಯು
ಕೊಪ್ಪಳ/ ಯಲಬುರ್ಗಾ : ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಡಿ. ೧೮ ರಂದು ಜರುಗಿರುವ ೩೮೧ ನೇ ಶಿವಾನುಭವಗೋಷ್ಠಿಯಲ್ಲಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ ಹಾಗು ಶರಣಯ್ಯ ಹಿರೇಮಠ ಸಾನಿದ್ಯವಹಿಸಿದ್ದರು. ಮಾತೆ ಮುತ್ತು ಮಾತೆ ಮೃತ್ಯು ವಿಚಾರ ಚಿಂತನ ಮಂತನ ಗೋಷ್ಠಿಯಲ್ಲಿ ಕರಮುಡಿಯ ವೀರಯ್ಯ ಹಿರೇಮಠ ಅವರು ಮಾತನಾಡಿ ನಾವು ಮಾತನಾಡುವ ಮಾತು ಬೇರೆಯವರ ಮನಸ್ಸಿಗೆ ತೊಂದರೆಯಾಗಬಾರದು ,ನಾವು ಮಾತನಾಡುವ ಮಾತು ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಶರಣರ ವಚನದಂತೆ ಇರಬೇಕು ಎಂದರು. ೩೨ ವರ್ಷದಿಂದ ಇಲ್ಲಿಯವರೆಗೆ ೩೮೧ ಶಿವಾನುಭವ ಗೋಷ್ಠಿಗಳು ಸಾಗಿ ಬಂದಿರುವುದು ಉತ್ತಮ ಕಾರ್ಯವಾಗಿದೆ ಎಂದು ಸಮಾಜ ಸೇವಕ ಫಕೀರಪ್ಪ ಉಪ್ಪಾರ ಅವರು ಮಾತನಾಡಿದರು. ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿತವಾಗಿ ಮಿತವಾಗಿ ಮಾತನಾಡಿದಾಗ ನಮ್ಮಲ್ಲಿರುವ ಸಿಟ್ಟು ದೂರವಾಗಿ ನಾವು ಮಾತನಾಡಿದಾಗ ನಮ್ಮ ತೊಕದ ಮಾತಿಗೆ ಬೇಲೆ ಬರಲು ಸಾದ್ಯ ಎಂದು ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಅವರು ಮಾತನಾಡಿದರು. ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕೈ ಜಾರಿದರೆ ಕಾಲಿಗೆ ಮೂಲ, ನಾಲಿಗೆ ಜಾರಿದರೆ ದವಡಿಗೆ ಮೂಲ ಆದ್ದರಿಂದ ನಾವು ಮಾತನಾಡುವಾಗ ನಿಧಾನವಾಗಿ ವಿಚಾರಮಾಡಿ ಮಾತನಾಡಬೇಕು ಅಂದಾಗ ವಾದ ವಿವಾದಗಳಿಂದ ದೂರವಿರಲು ಸಾದ್ಯ, ಇತ್ತಿಚಿಗೆ ಸಮಾಜದಲ್ಲಿ ನಿವೇಶನ, ಹೊಲ,ಮನೆ ವಿಚಾರದಲ್ಲಿ ಹಣ ಪಡೆದುಕೊಂಡು ಅವರಿಗೆ ಆಸ್ತಿ ಕೊಡಲಾರದೆ ವಂಚಿಸಿ ,ಕೊಟ್ಟ ಮಾತಿಗೆ ಬೆಲೆ ಇಲ್ಲದಂತೆ ವಚನ ಭ್ರಷ್ಟರಾಗಿರುವ ಪ್ರಸಂಗಗಳು ಇಂದು ನಡೆಯುತ್ತಿವೆ ನಾವು ಜಾಗೃತರಾಗಬೇಕು ಎಂದರು. ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ, ಪ್ರಕಾಶ ರಾವಣಕಿ ಮಾತನಾಡಿದರು. ಈ ವೇಳೆ ಕಳಕಪ್ಪ ಹಡಪದ , ಯಮನೂರಪ್ಪ ಹಳ್ಳಿಕೇರಿ ಸಹ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ವೇಳೆ ಹಿರಿಯರಾದ ಮಲ್ಲನಗೌಡ ನಿಡಗುಂದಿ, ವೀರಪ್ಪ ರಾವಣಕಿ, ಯಮನೂರಪ್ಪ ಚಿಕ್ಕಗೌಡ್ರ, ಶೇಖರಗೌಡ ದ್ಯಾಮನಗೌಡ್ರ, ಅಮರೇಶ ಚಿಕ್ಕಗೌಡ್ರ, ಮಂಜಪ್ಪ ಭೂನಕೊಪ್ಪ, ಗಣೇಶ ನಿಡಗುಂದಿ, ಶರಣಪ್ಪ ಜರಕುಂಟಿ, ಬಸವರಾಜ ಮರಗಪ್ಪನವರು ಸೇರಿದಂತೆ ಇತರರು ಇದ್ದರು. ಅನ್ನಸಂತರ್ಪಣೆ ಜರುಗಿತು.
- ಕರುನಾಡ ಕಂದ ಪತ್ರಿಕೆ.



















