ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಡು ಪ್ರಾಣಿಗಳ ದಾಳಿಯನ್ನು ಖಂಡಿಸಿ ರೈತ ಸಂಘದ ವತಿಯಿಂದ ಗುಂಡ್ಲುಪೇಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಡೀಪುರ ಆರ್. ಎಫ್.ಒ ಹಾಗೂ ಸಿ.ಎಫ್.ಒ ವಿರುದ್ದ ಘೋಷಣೆ ಕೂಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವನ್ನೂರು ಪ್ರಕಾಶ್ ಮಾತಾಡಿ ನಮ್ಮ ರೈತರು ದೇಶಕ್ಕೆ ಅನ್ನ ನೀಡುವುದು ರೈತರು, ಆ ರೈತರ ಮೇಲೆ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗಿದೆ ಇದನ್ನು ತಡೆಯದಿದ್ದರೆ ಮುಂದಿನ ದಿನ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂದು ಹೇಳಿದರು.
ಹಾಗೆಯೇ ಅಧ್ಯಕ್ಷರು ಮಾತಾಡಿ ಸರ್ಕಾರ ಇದರ ಬಗ್ಗೆ ತನಿಖೆ ನಡೆಸಬೇಕು ಇಲ್ಲವಾದಲ್ಲಿ ಪ್ರಾಣಿಗಳನ್ನು ಹಿಡಿಯುವ ಹಕ್ಕು ನಮಗೆ ಕೊಡಿ ಎಂದು ಪ್ರತಿಭಟಿಸುತ್ತಾ ಮುಂದಿನ ದಿನಗಳಲ್ಲಿ ಇದು ಮತ್ತೆ ನಡೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವರದಿ ಗುಂಡ್ಲುಪೇಟೆ ಕುಮಾರ್



















