
ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ಭಾನುವಾರ ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಚಾಲನೆ ನೀಡಿದರು.
ಬಳಿಕ ಮಾತನಾಡಿ 2011 ರಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ.
ಹೀಗಾಗಿ ಭಾರತವು ಪೋಲಿಯೋ ಮುಕ್ತವಾಗಿದೆ.
ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿ 1 ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಮುಂದೆ ಬರಬಹುದಾದ ಅಂಗವಿಕಲತೆಯನ್ನು ತಡೆಯೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ವೈದ್ಯರಾದ ಗಂಗಮ್ಮ ಕುಂಬಾರ ಹಾಗೂ ಅಕ್ಷತಾ ಈಳಿಗೆರೆ ಮಾತನಾಡಿ ನಮ್ಮ ತಿಮ್ಮಾಪೂರ ಗ್ರಾಮದಲ್ಲಿ ಎರಡು ಪೊಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಇಲ್ಲಿ 5 ನೂರು ಮಕ್ಕಳು ಇದ್ದು ಅವರೆಲ್ಲರಿಗೂ ಪೋಲಿಯೋ ಲಸಿಕೆಯನ್ನು ಹಾಕುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀ ಇದ್ಲಿ, ಶಂಕ್ರಮ್ಮ ಇದ್ಲಿ, ವಿದ್ಯಾ ಇದ್ಲಿ, ದೇವಕ್ಕ ಆಲೂರು
ಶೃತಿ ತುಪ್ಪದ, ಸತ್ಯಮ್ಮ ಮಣ್ಣೂರ,
ಆಶಾ ಕಾರ್ಯಕರ್ತರ ವಿಜಯಲಕ್ಷ್ಮಿ ಉಂಡಿ ಶಾರದಾ ಗೋಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.




















