ಕಲಬುರಗಿ : ಅಂಬೇಡ್ಕರ್ ಯುವ ಸೇನೆ (ರಿ.) ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದ ಶ್ರಿ ಭೀಮು ಮಲ್ಕಪಲ್ಲಿ ಹಾಗೂ ಲಾಲಪ್ಪ ಮಲ್ಕಪಲ್ಲಿ ಮೌನೇಶ್ ಮಲ್ಕಪಲ್ಲಿ ನೇಮಕವಾಗಿದ್ದಾರೆ.
ದೀನ ದಲಿತರ ಮತ್ತು ಹಿಂದುಳಿದ / ಅಲ್ಪಸಂಖ್ಯಾತರಿಗೆ ತುಳಿತಕ್ಕೆ ಒಳಗಾದವರ ಹಾಗೂ ಸ್ವಾಭಿಮಾನಿ ದಲಿತರ ರಕ್ಷಣೆಗಾಗಿ ಉದಯವಾಗಿರುವ ಅಂಬೇಡ್ಕರ್ ಯುವ ಸೇನೆ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ಕೌಶಲ್ಯ ಹೆಚ್ ಕೋದಂಡರಾಮ್ ಹಾಗೂ ಕಲಬುರಗಿ ಜಿಲ್ಲೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಎ. ತಳಕೇರಿ ಸೇಡಂ ತಾಲೂಕ ಅಧ್ಯಕ್ಷರು ಗೋಪಾಲ ನಾಟೇಕರ್ ರವರ ಆದೇಶದ ಮೇರೆಗೆ ಯುವ ಉತ್ಸಾಹಿ ಸಮಾಜ ಸೇವಕ ಮತ್ತು ಹಿಂದೆ ಅನೇಕ ದಲಿತಪರ ಹೋರಾಟಗಳಲ್ಲಿ ಹೋರಾಡಿದ ಇವರನ್ನು ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದ ಅಧ್ಯಕ್ಷರಾಗಿ ಶ್ರಿ ಭೀಮು ಮಾಲ್ಕಪಲ್ಲಿ ಉಪಾಧ್ಯಕ್ಷರಾಗಿ ಲಾಲಪ್ಪ ಮಲ್ಕಪಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಮಲ್ಕಪಲ್ಲಿ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
- ಹಿಂದಿನಿಂದಲೇ ತಮ್ಮ ಹುದ್ದೆಗೆ ಜವಾಬ್ದಾರಿಯಿಂದ ನಿಷ್ಠವಂತರಾಗಿ ಕಾರ್ಯ ನಿರ್ವಹಿಸಿಕೊಂಡು ಅಲ್ಲಿ ಇರುವಂತಹ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯಬದ್ಧವಾಗಿ ಹೋರಾಡಬೇಕು ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಪಾಲಿಸುತ್ತಾ ಮತ್ತು ಪ್ರಜಾ ಪ್ರಭುತ್ವದಲ್ಲಿ ಸಂವಿಧಾನಬದ್ದವಾಗಿ ಸ್ವಾಭಿಮಾನಿ ದಲಿತರಿಗೆ/ಹಿಂದುಳಿದ /ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸೂಚಿಸಲಾಗಿದೆ.
- ಕರುನಾಡ ಕಂದ ಪತ್ರಿಕೆ.



















