ಗೋವಾ : ಇಂದು ಅಂದರೆ ದಿ. 22/12/2025 ರಂದು ಗೋವಾ ರಾಜ್ಯದ ರಾಜ್ಯಪಾಲರಾದ ಮಾನ್ಯ ಶ್ರೀ ಅಶೋಕ ಗಜಪತಿರಾಜು ರವರಿಂದ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಜೀವಮಾನ ಸಾಧನೆಗಾಗಿ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ನ್ನು ಸ್ವೀಕರಿಸಿದ್ದಾರೆ.
ಹೈದರಾಬಾದ್ ನ ಪ್ರಜಾಡೈರಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಸುರೇಶ್ ರವರ ಪತ್ರಿಕೆಯು ಸಿಲ್ವರ್ ಜ್ಯುಬಿಲಿ (25 ವರ್ಷಗಳ) ಕಾಲ ಸುಧೀರ್ಘವಾಗಿ ನಡೆದು ಬಂದ ಹಿನ್ನೆಲೆಯ ಸಂಭ್ರಮಾಚರಣೆಯ ನಿಮಿತ್ತ ತಮ್ಮ ಪತ್ರಿಕೆಯ ಸರಳ ಸಮಾರಂಭದಲ್ಲಿ ಇಂದು ಅತ್ಯುನ್ನತ ಪ್ರಶಸ್ತಿಯನ್ನು ಬಂಗ್ಲೆ ಮಲ್ಲಿಕಾರ್ಜುನ ರವರು ನಡೆದ ಕಲ್ಲು ಮುಳ್ಳಿನ ಹಾದಿಯ, ಸತ್ಯ ನ್ಯಾಯಯುತವಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ 2,500 ಜೋಡಿಗಳ ಬಡಜನತೆಗೆ ಸಾಮೂಹಿಕ ವಿವಾಹಗಳು, 3 ಸಾವಿರ ಮೇಲ್ಪಟ್ಟು ತರೆಮರೆ ಹಿಂದಿರುವ ಸಾಧಕರು ಹಾಗೂ ಪ್ರತಿಭಾ ವಿಧ್ಯಾರ್ಥಿಗಳನ್ನು ಗುರ್ತಿಸಿ ಅವರುಗಳಿಗೆ ನಗದು ಸಮೇತ ಗೌರವ ಸನ್ಮಾನ ನೀಡಿರುವುದರ ಜೊತೆಗೆ ಅನೇಕ ನೊಂದಂತವರು ಹಾಗೂ ನಾಡಿನ ಪತ್ರಕರ್ತರ ಧ್ವನಿಯಾಗಿ ಜೊತೆಯಾಗಿ ನಿರಂತರ ಹೋರಾಟಗಳನ್ನು ಗುರ್ತಿಸಿ ಇಂದು ಪ್ರಜಾಡೈರಿ ಪತ್ರಿಕೆಯ ಸುರೇಶ್ ರವರು ಅತ್ಯುನ್ನತ ಪ್ರಶಸ್ತಿಯಾದ ಲೈಫ್ ಟೈಮ್ ಅಚೈವ್ ಮೆಂಟ್ ಅವಾರ್ಡ್ ನ್ನು ಗೋವಾದ ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ವರದಿ. ಪ್ರಸನ್ನಕುಮಾರ್ . ಎಸ್.
ಕೊರಟಗೆರೆ



















