ಚಾಮರಾಜನಗರ/ ಹನೂರು : ತಾಲೂಕಿನ ತಾಲೂಕು ಕಚೇರಿಯ ಪಕ್ಕದಲ್ಲಿ ಇಂದು ಭೀಮ ಕೋರೇಗಾಂವ ವಿಜಯೋತ್ಸವ ಪೂರ್ವ ಭಾವಿ ಸಭೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಿ. 01/01/2026 ರಂದು ಸ್ವಾಭಿಮಾನಿ ಕಾಲು ನಡಿಗೆ ಜಾಗೃತಿ ಜಾಥಾ ಹನೂರು ಅಂಬೇಡ್ಕರ್ ಪುತ್ಥಳಿಯಿಂದ ಕಾಲು ನಡಿಗೆ ಮಾಡಿ ಕೊಳ್ಳೇಗಾಲ ಅಂಬೇಡ್ಕರ್ ಪುತ್ಥಳಿವರೆಗೆ ಡಿ ಎಸ್ ಎಸ್ ಸಂಘಟನೆ ಸದಸ್ಯರುಗಳ ಕಾಲು ನಡಿಗೆ ಜಾಗೃತಿ ಜಾಥ ಮಾಡಲು ತೀರ್ಮಾನ ಮಾಡಲಾಯಿತು.
ನಂತರ ಉಚಿತ ಆರೋಗ್ಯ ಶಿಕ್ಷಣ ಕಡ್ಡಾಯ, ಸಾರಾಯಿ ನಿಷೇಧ, ಸರ್ಕಾರಿ ಶಾಲೆಗಳ ಪುನಶ್ಚೇತನ ಮುಂತಾದವುಗಳ ಬಗ್ಗೆ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಅಂಬೇಡ್ಕರ್ ವಾದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಸಿದ್ದರಾಜು, ತಾಲೂಕು ಅಧ್ಯಕ್ಷ ಮಾದೇಶ್ ,ನಾಗರಾಜು, ಸುಂದ್ರಮ್ಮ, ಗುರುದೇವ್ ದೊಡ್ಡಯ್ಯ ಈರತಯ್ಯ ಕೆಂಪಣ್ಣ ,ವಾಸಿಂ, ಫಾರುಕ್ , ಫಯಾಜ್ ,ಶಾಂತಣ್ಣ , ರಾಮಲಿಂಗಂ , ಮಾದೇಶ್ ಮಾರ್ಟಳ್ಳಿ, ಚಿಕ್ಕತಾಯಮ್ಮ ಇತರರು ಇದ್ದರು.
ವರದಿ: ಉಸ್ಮಾನ್ ಖಾನ್



















