
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಹೆಲ್ಪ್ ಸೊಸೈಟಿ ಮತ್ತು ಸೇವಾ ಟ್ರಸ್ಟ್ ವತಿಯಿಂದ ರೈತರ ದಿನಾಚರಣೆಯ ಅಂಗವಾಗಿ ಅಕ್ಷಯ ಬ್ಲೂ ಜಮ್ ಶಾಲೆ ಮಕ್ಕಳನ್ನು ರೈತರು ಮಾಡುವ ಕೆಲಸ ಕಾರ್ಯಗಳನ್ನು ಪ್ರತ್ಯಕ್ಷವಾಗಿ ಮಕ್ಕಳಿಗೆ ತೋರಿಸಲಾಯಿತು. ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ಮಾನಂ ಸಂಧ್ಯಾ ಶಶಿಕಿರಣ್ ಮಾತನಾಡಿ ರೈತರು ಈ ದೇಶದ ಬೆನ್ನೆಲುಬಾಗಿದ್ದು ರೈತರ ಒಂದು ಪ್ರಾಮುಖ್ಯತೆಯನ್ನು ಈಗಿನ ಮಕ್ಕಳಿಗೆ ವ್ಯವಸಾಯ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪ್ರತ್ಯಕ್ಷವಾಗಿ ತೋರಿಸಲಾಯಿತು ಹಾಗೂ ಮಕ್ಕಳಿಗೆ ರೈತರ ದಿನ ನಿತ್ಯ ಮಾಡುವ ಕೆಲಸ ಕಾರ್ಯಗಳು ಬಗ್ಗೆ ಅರಿವನ್ನು ಮೂಡಿಸಲಾಯಿತು ರೈತರಿಗೆ ತಾವು ಕೆಲಸ ಮಾಡುವ ಜಮೀನಿನಲ್ಲಿಯೇ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ರೈತರು ಕೆ.ಪಿ ಮಲ್ಲಿಕಾರ್ಜುನರವರು, ಕೆಂಪಯ್ಯರವರು, ದಾಸಪ್ಪರವರು, ಅಂಜಿನಪ್ಪನವರು ಮತ್ತು ಲೀಲಾವತಿಯವರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಹಾಗೂ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಾನಂ ಶಶಿಕಿರಣ್ ರವರು ಹಾಗೂ ಅಕ್ಷಯ ಬ್ಲೂ ಜಮ್ ಮಾಂಟೇಸರಿ ಶಾಲೆಯ ಮುಖ್ಯ ಶಿಕ್ಷಕರು ಆದ ಶ್ರೀಮತಿ ಸಂಧ್ಯಾ ಹಾಗೂ ಶ್ರೀಮತಿ ಭವ್ಯರವರೊಂದಿಗೆ ಶಾಲೆಯ ಶಿಕ್ಷಕಿಯರು ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ.




















