ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ವತಿಯಿಂದ ಶೈಕ್ಷಣಿಕ ಪ್ರವಾಸ

ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ವತಿಯಿಂದ ಒಂದು ದಿನದ “ಅಗಡಿ ತೋಟ” ಹುಬ್ಬಳ್ಳಿ ಗೆ ಪಾಲಕರ ಸಹಕಾರದೊಂದಿಗೆ ದಿ. :24/12/2024 ರ ಬುಧವಾರದಂದು ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು.


ಶೈಕ್ಷಣಿಕ ಪ್ರವಾಸ ಯಶಸ್ವಿಯಾಗಿದ್ದು ಮಕ್ಕಳು ಪ್ರವಾಸದಲ್ಲಿ ತುಂಬಾ ಸಂತೋಷಪಟ್ಟರು.


ಹಳ್ಳಿಯ ಸೊಗಡಿನ ವಾತಾವರಣ, ಹಿಂದಿನ ಕಾಲದ ಜನರ ಜೀವನ ಶೈಲಿ ಪರಿಚಯಿಸುವ ವೇಷಭೂಷಣ ಪದ್ಧತಿಗಳು, ಕುಂಬಾರಿಕೆಯಲ್ಲಿ ಮಡಿಕೆ, ಬಿಂದಿಗೆ ,ದೀಪದ ಪಣತಿ, ಹೀಗೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಲಾಯಿತು.
ಜೊತೆಗೆ ಬೋಟ್ , ಟ್ರಾಕ್ಟರ್ ಪ್ರಯಾಣ, ತುಂತುರು ಹನಿಯಲ್ಲಿ ಮನರಂಜನಾತ್ಮಕ ನೃತ್ಯ, ಈಜುಕೊಳದಲ್ಲಿ ಈಜುವಿಕೆ, ಹಾಗೂ ಸಾಹಸಕ್ರೀಡೆಯಾದ ಹಗ್ಗದ ಮೇಲಿನ ನಡಿಗೆ ಮೂಲಕ ಮಕ್ಕಳಿಗೆ ಬ್ಯಾಲೆನ್ಸ್ ಕಂಡುಕೊಳ್ಳುವುದನ್ನು ಕಲಿಸಲಾಯಿತು.
ಇದೆಲ್ಲದರ ಜೊತೆಗೆ ಮಕ್ಕಳ ಮನಸ್ಸಿಗೆ ಖುಷಿ ನೀಡುವ ಮ್ಯೂಸಿಕಲ್ ಡ್ಯಾನ್ಸ್ ತರಬೇತಿ ಕೂಡ ನೀಡಲಾಯಿತು.
ಒಟ್ಟಾರೆಯಾಗಿ ಈ ವರ್ಷದ ಶೈಕ್ಷಣಿಕ ಪ್ರವಾಸ ಮಕ್ಕಳಿಗೆ ತುಂಬಾ ಖುಷಿ ನೀಡಿತು ಎಂದು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿಪ್ರಾಯ ಪಟ್ಟರು.
ಈ ಪ್ರವಾಸವನ್ನು ಕುರಿತು ಶಾಲಾ ಆಡಳಿತ ಮಂಡಳಿ, ಪಾಲಕರು ಹರ್ಷ ವ್ಯಕ್ತಪಡಿಸಿದರು.

ವರದಿ ಹನುಮಂತಪ್ಪ ನಾಯಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!