
ಡಾ.ಕುಮಾರ ಭೋಜರಾಜರ 30 ನೇ ವರ್ಷದ ಜನ್ಮ ದಿನಕ್ಕೆ ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ : ಎಮ್. ಬಿ. ಹಡಪದ ಸುಗೂರ ಎನ್.
ಕಲಬುರಗಿ / ಚಿತ್ತಾಪುರ : ತಾಲೂಕಿನ ಸುಗೂರ ಎನ್. ಗ್ರಾಮದ ನಿಸ್ವಾರ್ಥ ಸಮಾಜದ ಸೇವಕ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸಂಘಟನಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ನೇತೃತ್ವದಲ್ಲಿ ಇದೆ ಜನವರಿ 3 ರಂದು ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಸುಪುತ್ರರಾದ ಕಿರಿಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅಭಿನವ ಡಾ.ಕುಮಾರ ಭೋಜರಾಜನ 30 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ನಾಲ್ಕು ವರ್ಷಗಳಿಂದ ಸತತವಾಗಿ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಮಕ್ಕಳಿಗೆ ಪೂಜ್ಯರ ಜನ್ಮ ದಿನದ ಅಂಗವಾಗಿ ವಿಶೇಷವಾಗಿ ಉಚಿತ ಕ್ಷೌರ ಸೇವೆ ಸಲ್ಲಿಸಲಾಗುತ್ತದೆ.
ಈ ಸಂಧರ್ಭದಲ್ಲಿ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕ ಮಿತ್ರರು ಮತ್ತು ಕಾಯಕ ಬಂಧುಗಳು ಸೇರುವ ಸಾಧ್ಯತೆ ಇದೆ. ಶ್ರೀಮಠದ ಆವರಣದಲ್ಲಿ ಶಾಲಾ ಮಕ್ಕಳಿಗೆ ಪೂಜ್ಯರ ಜನ್ಮ ದಿನದಂದು ಈ ಸೇವೆ ಸಲ್ಲಿಸಲಾಗುವುದು ಎಂದು ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















