
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಗೆ ಹೊಸ ವರುಷದ ದಿನದoದು ವಿಶೇಷ ಪುಷ್ಪ ಅಲಂಕಾರ, ಕುಂಕುಮಾರ್ಚನೆ, ಪೂಜೆ ಭಕ್ತಿಗೆ ಪೂರಕವಾಗಿ ದೇವಿಯನ್ನು ಆರಾಧಿಸುತ್ತಾ, ಭಕ್ತಾದಿಗಳು ದರ್ಶನ ಪಡೆದಿದ್ದಾರೆ. ಬೇಡಿದ ವರವ ನೀಡುವ ಕರುಣಾಮಯಿ ಮಹಾಲಕ್ಷ್ಮಿ ತಾಯಿಯ ಪುಣ್ಯಕ್ಷೇತ್ರ ಗೊರವನ ಹಳ್ಳಿಯಲ್ಲಿದೆ.
ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. ಇದು ಕರ್ನಾಟಕದ ನಾಲ್ಕನೇ ಅತ್ಯoತ ಹೆಚ್ಚು ಭಕ್ತರು ಪ್ರವಾಸಿಗರು ಬರುವ ಪುಣ್ಯ ಕ್ಷೇತ್ರವಾಗಿದೆ ಇಂದು ಹೊಸ ವರುಷದ ಪ್ರಯುಕ್ತ ಸಾವಿರ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದು ಮಹಾಲಕ್ಷ್ಮಿ ತಾಯಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ತಾಯಿಯ ಕೃಪೆಯಿಂದ ಎಲ್ಲಾ ಭಕ್ತರಿಗೂ, ಕರ್ನಾಟಕದ ಜನತೆಗೂ ಹೊಸ ವರುಷ ಸುಖ, ಸಂಪತ್ತು, ಆರೋಗ್ಯ ಐಶ್ವರ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
2026ರ ಹೊಸ ದಿನಕ್ಕೆ ಸಂತೋಷ ಬಾಂಧವ್ಯ ಮತ್ತು ಪ್ರೀತಿಯಿಂದ ಸ್ವಾಗತಿಸೋಣ…
ವರದಿ : ಪ್ರಸನ್ನಕುಮಾರ್. ಎಸ್ ಕೊರಟಗೆರೆ




















