ಕಲಬುರಗಿ/ ಯಡ್ರಾಮಿ : ಖ್ಯಾತ ವಾಗ್ಮಿಗಳು, ಜ್ಞಾನದ ಕಣಜ, ಯಡ್ರಾಮಿ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಮಠಕ್ಕೆ ಭೇಟಿ ನೀಡಿ ಭಕ್ತಿ ಪೂರ್ವಕವಾಗಿ ಜೈ ಕ. ರ. ವೇ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಅಮರನಾಥ ಸಾಹು ಕುಳಗೇರಿ ಅವರು ಶುಭಕೋರಿ ಆಶೀರ್ವಾದ ಪಡೆದರು.
ಈ ಸಮಯದಲ್ಲಿ ಹಿರಿಯರಾದ ನಿಂಗನಗೌಡ ಜವಳಗಿ, ಮಂಜುನಾಥ್ ಕುಲಕರ್ಣಿ, ಪ್ರಭುದೇವ ಜವಳಗಿ, ಅಪ್ಪಸಾಬ ಪುರಾಣಿಕ್, ರಾಚೋಟಯ್ಯ ಹಿರೇಮಠ, ಯಲ್ಲಾಲಿಂಗ ಹರನಾಳ, ಕೃಷ್ಣಕುಮಾರ್ ತಳವಾರ, ಆದಮ ಖುರೇಶಿ, ದೇವು ಯಡ್ರಾಮಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.




















