ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಘವೇಂದ್ರ ಸ್ವಾಮಿ ಮಠದಲ್ಲಿ ಹರಿದಾಸರ ಕೀರ್ತನಗಳ ಕುರಿತು ‘ದಾಸ’ ಪರೀಕ್ಷೆ

ಹರಪನಹಳ್ಳಿ: ಹರಿದಾಸರ ಕೀರ್ತನಗಳ ಬಗ್ಗೆ ಸರ್ವಧರ್ಮೀಯರಿಗೂ ಅರಿವು ಮೂಡಿಸಲು ಮತ್ತು ಸಮ ಸಮಾಜದ ನಿರ್ಮಾಣಕ್ಕಾಗಿ ದಾಸ ಸಾಹಿತ್ಯ ಪ್ರಕಾರವು ಅತ್ಯುತ್ತಮವಾದ ನಿದರ್ಶನಗಳಾಗಿವೆ ಎಂದು ಬೆಂಗಳೂರು ಬಸವನಗುಡಿ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪ್ರಾಚಾರ್ಯರಾದ ಪ್ರಮೋದಾಚಾರ್ಯರು ತಿಳಿಸಿದರು.

ಹರಪನಹಳ್ಳಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ನಡೆದ ಹರಿದಾಸರ ‘ದಾಸ’ ಪರೀಕ್ಷೆಯ ಸಂಚಾಲಕ ಕಾರ್ಯ ನಿರ್ವಹಿಸಿ ಮಾತನಾಡಿದರು.

ದೇಶದ ಸನಾತನ ಪರಂಪರೆಯನ್ನು ಹರಿದಾಸರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ, ತಂತ್ರಜ್ಞಾನ ಬೆಳೆದಂತೆ ಸಮ್ಮ‌ ಸನಾತನ ಪರಂಪರೆ, ಸಂಸ್ಕಾರದ ಬಗ್ಗೆ ಇಂದಿನ ಯುವ ಪೀಳಿಗೆಗೆ ಮತ್ತು ಎಲ್ಲಾ ಧರ್ಮದ ಜನಗಳಿಗೆ ತಿಳಿಸುವ ಅಗತ್ಯವಿದೆ.

ಆದ್ದರಿಂದ ದಾಸರ ಕೀರ್ತನೆಗಳ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ, ಇದರಲ್ಲಿ ಕೇವಲ ಬ್ರಾಹ್ಮಣ ಸಮುದಾಯ ಮಾತ್ರ ಬರೆಯುವುದಷ್ಟೆ ಅಲ್ಲ ಎಲ್ಲ ವರ್ಗದ ಜನರು ಬರೆಯ ಬಹುದಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ಮಾಲತಿ ಮಾಳಗಿ, ವೈದ್ಯ ನಾಗೇಶ್ ಭಟ್, ವ್ಯಾಸರಾಜ್ ಟಿ, ಪರೀಕ್ಷಾರ್ಥಿಗಳಾದ ವಸಂತ, ಅನಿತಾ, ಅರುಣಾ ನಾಗೇಶ್ ಭಟ್, ಪಂಕಜಾ, ಮಾಲಾ, ಮಂಜುಳಾ, ಶಾರದಾ, ಸುಮನಾ, ಮೇಧಾವತಿ, ಸೌಮ್ಯ, ಅರ್ಚನ, ರೂಪಾ, ಅರ್ಪಣ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!