ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯದಲ್ಲಿ ಅಹಿಂದ ವರ್ಗಗಳ ಜನಪ್ರಿಯ ಸುದೀರ್ಘಾವಧಿಯ ಮುಖ್ಯಮಂತ್ರಿ ಕರ್ನಾಟಕದ ಸಿದ್ದರಾಮಯ್ಯನವರು

ಕರ್ನಾಟಕದ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಿವಂಗತ ದೇವರಾಜು ಅರಸುರವರ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ 2792 ದಿನಗಳ ಜನಸೇವೆಯನ್ನು ಪೂರ್ಣಗೊಳಿಸಿ ಕರ್ನಾಟಕದ ಸುದೀರ್ಘ ಅವಧಿಯ ಜನಪ್ರಿಯ ಮುಖ್ಯಮಂತ್ರಿಗಳಾಗಿ ಶ್ರೀ ಸಿದ್ದರಾಮಯ್ಯನವರು ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ.

2013ರಲ್ಲಿ ಅನ್ನಭಾಗ್ಯ ಜೊತೆ ವಿವಿಧ ಯೋಜನೆ ಜಾರಿ!

ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ!

ರೈತರಿಗೆ ನೆರವಾಗುವುದಕ್ಕಾಗಿ ಕೃಷಿ ಭಾಗ್ಯ ಯೋಜನೆ!

ವಿದ್ಯಾಸಿರಿ ಯೋಜನೆಯಲ್ಲಿ ವಾರ್ಷಿಕ 1500 ರೂಪಾಯಿ.

2023ರಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದ್ಮೇಲೆ ಪ್ರಮುಖವಾಗಿ ಅಹಿಂದ ಸಮುದಾಯವನ್ನು ಒಟ್ಟಾಗಿಸಿದ್ದಾರೆ.
ಅವರೇ ಕರ್ನಾಟಕದ ಅನ್ನರಾಮಯ್ಯ, ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಮಾಡಿದ ಗ್ಯಾರಂಟಿ ರಾಮಯ್ಯ ಭಾಗ್ಯ ರಾಮಯ್ಯ ಹಾಲುಮತದ ನಿಷ್ಕಳಂಕ ಜನರ ಮನಸ್ಸು ಗೆದ್ದ ಅಮೃತರಾಮಯ್ಯ ಕನ್ನಡ ರಾಮಯ್ಯ ಕರುನಾಡ ದೊರೆ. ಅನುಭವ ಸಂಪನ್ನ ಹೋರಾಟದ ಛಲ ಸಮರ್ಥ ನಾಯಕತ್ವ ಅಪರೂಪದ ವಾಕ್ಚಾತುರ್ಯ ಅವರೇ ಟಗರು ಸಿದ್ದರಾಮಯ್ಯನವರು. 17ನೇ ಬಜೆಟ್ ಮಂಡನೆ ಮಾಡಲು ಹೊರಟಿರುವ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣುತ್ತಿರುವ ಸಿದ್ದರಾಮಯ್ಯನವರು ಬಡವರು ಶೋಷಿತರಿಗೆ ಸಾಮಾಜಿಕ ನ್ಯಾಯ ಸಮಾನತೆ ಅಭಿವೃದ್ಧಿಯ ಕನಸು ಕಾಣುವ ದೂರ ದೃಷ್ಟಿ ಹೊಂದಿರುವ ನಾಯಕ, ಸಂವಿಧಾನದ ಆಶಯ ಹಾಗೂ ತತ್ವಗಳ ಪರಿಪಾಲಕ ರೈತಗಾಗಿ ಕೃಷಿಭಾಗ್ಯವನ್ನು ನೀಡಿದ ರೈತರಾಮಯ್ಯ. ಇಂದು ರಾಜ್ಯ ಇತಿಹಾಸದಲ್ಲಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ ಏಕೈಕ ನಾಯಕರು ಅದು ಶ್ರೀ ಮಾನ್ಯ ಸಿದ್ದರಾಮಯ್ಯನವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಕರ್ನಾಟಕ ದೇಶದೆಲ್ಲೆಡೆ ಮನೆ ಮಾತಾಗಿರುವ ಅಹಿಂದ ವರ್ಗಗಳ ಜನಜನಿತ ನಾಯಕರಾದ ಸಿದ್ದರಾಮಯ್ಯನವರ ಜನಸೇವೆ ನಾಡಿಗೆ ಮತ್ತಷ್ಟು ಸಿಗಲಿ ಆಶಿಸುತ್ತಾ ಕೊರಟಗೆರೆ ಪತ್ರಕರ್ತರ ಧ್ವನಿ ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ವರದಿಗಾರರು : ಪ್ರಸನ್ನಕುಮಾರ್. ಎಸ್., ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!