ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿದುಷಿ ಶ್ರೀಮತಿ ಗೀತಾ ಶ್ರೀನಾಥ್ ಅವರಿಂದ “ನಾಟ್ಯ ಸಂಗಮ” ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ನಾಟ್ಯ ಕುಸುಮಾಂಜಲಿ ಉತ್ಸವದ ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ಕಾಚರಕನಹಳ್ಳಿಯ ಲಿಂಗರಾಜಪುರ ಬೆಂಗಳೂರು ಇಲ್ಲಿ ಜರುಗಿತು.
ಸಹಕಾರ: ನೃತ್ಯ ಸಂಹಿತ ಅಕಾಡೆಮಿ, ಬೆಂಗಳೂರು
ಸಹಕಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ಹೆಜ್ಜೆ ಗೆಜ್ಜೆ ಮಧುರ ನಾದ ಸಂಭ್ರಮ ಎಂಬ ಈ ಕಾರ್ಯಕ್ರಮವು ರವೀಂದ್ರ ಕಲಾಕ್ಷೇತ್ರ ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿ ಜರುಗಿದಾಗ ಅಧ್ಯಕ್ಷತೆಯನ್ನು ಯೋಗ ವರ್ಧಮಾನ ಕಳಸೂರು ಇವರು ವಹಿಸಿದ್ದು ಮುಖ್ಯ ಅತಿಥಿಯಾಗಿ ಲಿಪಿ ಪ್ರಾಜ್ಞೆ, ಪ್ರಖ್ಯಾತ ಲೇಖಕಿ, ರಂಗ ಕರ್ಮಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮ ಅವರು ವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್




















