
ಕೊರಟಗೆರೆ ಕ್ಷೇತ್ರದ ದೇವಲಾಯಗಳ ಅಭಿವೃದ್ಧಿಯ ಹರಿಕಾರ ಎಂದು ಪ್ರಸಿದ್ಧರಾಗಿರುವ ಕೋಳಾಲ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ ಎನ್ ಕೃಷ್ಣಮೂರ್ತಿ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ ಲಿಂಗಾಪುರ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ದೇವಿಯ ವಿಗ್ರಹವನ್ನು ಸುಮಾರು 2 ಲಕ್ಷ 50,000 ರೂಪಾಯಿಗಳ 55 ಕೆಜಿಯ ವಿಗ್ರಹವನ್ನು ಮಾಡಿಸಿ ಕೊಡುವೆನೆಂದು ಭರವಸೆಯನ್ನು ಕೊಟ್ಟಂತೆ ಇಂದು ಅವರೇ ಖುದ್ದಾಗಿ ಬಂದು ವಿಗ್ರಹವನ್ನು ಮಾಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಪಿ ಎನ್ ಕೆ ಆಗಮಿಸಿದಾಗ ಮಹಿಳೆಯರು ಆರತಿ ಮಾಡುವುದರ ಮೂಲಕ ಮುಂದಿನ ಶಾಸಕರು ನೀವೇ ಅಣ್ಣ ಎಂದು ಆಶೀರ್ವದಿಸಿ ಸ್ವಾಗತಿಸಿದರು. ಪಿ ಎನ್ ಕೆ ಮಾತನಾಡಿ ಜನರೊಂದಿಗೆ ಅವರ 20ವರುಷದ ಸ್ನೇಹದ ಒಡನಾಟ ಪ್ರೀತಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಗ್ರಾಮಸ್ಥರು ನಿಮ್ಮ ಜೊತೆ ನಾವು ಇರುತ್ತೇವೆ ನೀವು ಮುಂದಿನ ಶಾಸಕರು ಆಗಬೇಕು ಎಂದು ಆಶೀರ್ವದಿಸಿದರು.
ಕೊರಟಗೆರೆ ತಾಲ್ಲೂಕು ರಕ್ಷಣಾ ವೇದಿಕೆ ಅಧ್ಯಕ್ಷರಾದ ನರಸಿಂಹರಾಜು ಎಲ್ ಮಾತನಾಡಿ ಸುಮಾರು ಐವತ್ತು ವರ್ಷಗಳಿಂದ ದೇವಿಯ ವಿಗ್ರಹ ಮಾಡಿಸಲು ಎಷ್ಟೋ ಜನ ಪ್ರಯತ್ನ ಪಟ್ಟರು ಅದು ನೆರವೇರಿರಲಿಲ್ಲ ಈಗ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕರಾದ ಮಾನ್ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ ಅವರು ನೆರವೇರಿಸಿ ಕೊಟ್ಟಿದ್ದಾರೆ. ಅವರಿಗೆ ಎಲ್ಲಾ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ




















