ಹನೂರು : ಸ್ಯಾಟ್ ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್ವರ್ಕ್ ಗೆ ಮೊದಲ ಬಾರಿಗೆ ಗಡಿ ಗ್ರಾಮದಲ್ಲಿ ಸೌಲಭ್ಯಕ್ಕೆ ಚಾಲನೆ ನೀಡಿದ ಶಾಸಕ ಎಂ.ಆರ್ ಮಂಜುನಾಥ್ ರವರು ನೀಡಿರುವುದು ಶ್ಲಾಘನೀಯ ವಿಚಾರವಾಗಿದೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ಯಾಟಲೈಟ್ ಬಿಎಸ್ಎನ್ಎಲ್ ಟವರ್ ಸಂಪರ್ಕವನ್ನು ಗಡಿ ಭಾಗದ ಗ್ರಾಮಸ್ಥರಿಗೆ ಚಾಲನೆ ನೀಡಿ ಅವರು ಮಾತನಾಡಿ ಅತ್ಯಾಧುನಿಕ ತಂತ್ರಜ್ಞಾನದ ಇತ್ತೀಚಿನ ದಿನಗಳಲ್ಲಿ ಗಡಿ ಗ್ರಾಮಗಳಲ್ಲಿ ದೂರವಾಣಿ ಸಂಪರ್ಕಗಳಿಲ್ಲದೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಫಲರಾಗುತ್ತಿದ್ದ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ತಾಲೂಕಿನಲ್ಲಿ ಮೇಡ್ ಇನ್ ಇಂಡಿಯಾ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿರುವ ಸ್ಯಾಟಲೈಟ್ ನೆಟ್ವರ್ಕ್ ಸೌಲಭ್ಯ ಇದಾಗಿದೆ ನೆಟ್ವರ್ಕ್ ಇಲ್ಲದೆ ವಂಚಿತರಾಗಿರುವ ಗ್ರಾಮಗಳಿಗೆ ನೆಟ್ವರ್ಕ್ ಸೌಲಭ್ಯ ಕಲ್ಪಿಸಲು ಉತ್ತಮ ಮಾರ್ಗವಾಗಿದೆ ಬಿಎಸ್ಎನ್ಎಲ್ ನೆಟ್ವರ್ಕ್ ಸೌಲಭ್ಯ ಈ ಗ್ರಾಮಕ್ಕೆ ದೊರಕಿಸಿ ಕೊಡುವಲ್ಲಿ ಅಧಿಕಾರಿಗಳ ಕಾರ್ಯವೈಖರಿ ಶ್ಲಾಘನೀಯ ವಿಚಾರವಾಗಿದೆ ಗ್ರಾಮಸ್ಥರು ವಿವಿಧ ಸೌಲಭ್ಯಗಳನ್ನು ಪಡೆಯಲು ನೆಟ್ವರ್ಕ್ ಸಮಸ್ಯೆಯಿಂದ ಇತರೆ ಗ್ರಾಮಗಳಿಗೆ ತೆರಳಿ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದ ಇತ್ತೀಚಿನ ದಿನಗಳಲ್ಲಿ ಉತ್ತಮ ಕೆಲಸವಾಗಿದೆ ಎಂದರು.
ಬಿಎಸ್ಎನ್ಎಲ್ ಎಜಿಎಂ ವ್ಯವಸ್ಥಾಪಕ ಸರತ್ ಕುಮಾರ್ ಮಾತನಾಡಿ ಬಿಎಸ್ಎನ್ಎಲ್ ವತಿಯಿಂದ ಉತ್ತಮ ಸೌಲಭ್ಯ ನೀಡುವ ಗುರಿ ಹೊಂದಿದ್ದೇವೆ , ಅರಣ್ಯ ಇಲಾಖೆಯವರು ನಮಗೆ ಮುಕ್ತಾವಕಾಶ ಕಲ್ಪಿಸಿದರೆ ಎಲ್ಲಾ ತಾಲೂಕಿನಲ್ಲಿ ನೆಟ್ವರ್ಕ್ ಸೌಕರ್ಯ ಒದಗಿಸಲಾಗುವುದು ಶಾಸಕರಾದ ಎಂ.ಆರ್ ಮಂಜುನಾಥ್ ಅವರ ಅವಿರತ ಶ್ರಮದಿಂದ ಗಾಣಿಗಮಂಗಲಕ್ಕೆ ಬಿಎಸ್ಎನ್ಎಲ್ ಸ್ಯಾಟಲೈಟ್ ನೆಟ್ವರ್ಕ್ ಕಲ್ಪಿಸಲು ಸಂಪೂರ್ಣ ಸಹಕಾರ ನೀಡಿದ್ದಾರೆ ನಾಗರಿಕರು ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ರವಿ ಬಾಬು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ ಎಸ್ಆರ್ ಮಹದೇವ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು .
ವರದಿ ಉಸ್ಮಾನ್ ಖಾನ್




















