ಕಂಪ್ಲಿಯಲ್ಲಿ ನ್ಯಾಯಲಯ ಆರಂಭಿಸುವ ಭರವಸೆ ನೀಡಿದ ವಿಜಯನಗರ ವಕೀಲರ ಸಂಘದ ಜಿಲ್ಲಾಧ್ಯಕ್ಷ ಗುಜ್ಜಲ್ ನಾಗರಾಜ
ಕಂಪ್ಲಿ: ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ)ಯ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಪದಾಧಿಕಾರಿಗಳು ವಿಜಯನಗರ ಜಿಲ್ಲಾ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ ಗುಜ್ಜಲ್ ನಾಗರಾಜ ಇವರಿಗೆ ಹೊಸಪೇಟೆ ನಗರದ ಸಿದ್ದಾರೂಢ ಮಠದಲ್ಲಿ ಮೈಸೂರು ಪೇಟದೊಂದಿಗೆ ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಜಿಲ್ಲಾಧ್ಯಕ್ಷ ಗುಜ್ಜಲ್ ನಾಗರಾಜ ಮಾತನಾಡಿ, ವಕೀಲರ, ಮುಖಂಡರ, ಕರವೇ ಬಳಗದವರ ಸಹಕಾರದೊಂದಿಗೆ ವಕೀಲರ ಸಂಘಕ್ಕೆ ಜಿಲ್ಲಾಧ್ಯಕ್ಷರನ್ನಾಗಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಪ್ರತಿಯೊಬ್ಬರ ಪ್ರೀತಿ, ವಿಶ್ವಾಸದಂತೆ ವಕೀಲರ ಸಂಘದ ಅಭಿವೃದ್ಧಿಗೆ ಪ್ರತಿಯೊಂದು ಹಂತದಲ್ಲಿ ವಕೀಲರೊಂದಿಗೆ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡುತ್ತೇನೆ. ಹೊಸಪೇಟೆ ನಗರದಲ್ಲಿ 10ಎಕರೆ ಜಾಗದಲ್ಲಿ ಸುಮಾರು 130 ಕೋಟಿ ಅನುದಾನದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವುದು ಮೊದಲ ಧ್ಯೇಯವಾಗಿದೆ. ಕಂಪ್ಲಿಯಲ್ಲಿ ನ್ಯಾಯಾಲಯದ ಅವಶ್ಯಕತೆ ಇದೆ. ಆದ್ದರಿಂದ ಸ್ಥಳೀಯ ಶಾಸಕ ಗಣೇಶ ನೇತೃತ್ವದಲ್ಲಿ ಜಿಲ್ಲಾ ಸಚಿವರೊಂದಿಗೆ ಚರ್ಚಿಸಿ, ಅತಿ ಶೀಘ್ರದಲ್ಲಿ ನ್ಯಾಯಾಲಯ ಆರಂಭಿಸುವ ಭರವಸೆ ನೀಡಿದರು.
ಕರವೇ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಕರವೇ ಮೂಲಕ ಸಾಮಾಜಿಕ ಕಳಕಳಿ ಹೊಂದುವ ಜೊತೆಗೆ ಪ್ರತಿಯೊಂದು ರಂಗದಲ್ಲಿ ಸಲ್ಲಿಸಿರುವ ಸೇವೆಗೆ ಇಂದು ದೊಡ್ಡ ಮಟ್ಟದಲ್ಲಿ ಸ್ಥಾನಮಾನ ಸಿಕ್ಕಿದೆ.
ತಲೆ ಎತ್ತಿ ನೋಡುವಂತಹ ಸಾಧನೆಯೊಂದಿಗೆ ಛಾಪು ಮೂಡಿಸಿದ್ದಾರೆ. ನ್ಯಾಯ ಉಳಿಸುವಂತಹ ಕೆಲಸ ವಕೀಲರದ್ದಾಗಿದೆ. ಎಲ್ಲರ ಒಮ್ಮತದ ಬಹುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿರುವುದು ಖುಷಿ ತಂದಿದೆ. ನ್ಯಾಯಲಯದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷರಾಗುವ ಮೂಲಕ ಬಡವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ವಿಶ್ವಾಸವಿದೆ. ಮುಂದಿನ ದಿನದಲ್ಲಿ ಶಾಸಕರಾಗಿ ಹೊರಹೊಮ್ಮಲಿ. ಇಂದಿನ ಸಂಭ್ರಮಾಚರಣೆ ವೇಳೆ ಕೇಕ್ ಬದಲು ನೋಟ್ ಬುಕ್ ನೀಡಿದ್ದು, ಇದರಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ನಾಗರಾಜ, ಬಸಾಪುರದ ಪ್ರಣಾಮನಂದ ಭಾರತಿ ಸ್ವಾಮಿ, ವಕೀಲರ ಕಾರ್ಯಕಾರಿ ಮಂಡಳಿ ನೂತನ ಸದಸ್ಯ ರವಿ ವಕೀಲ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಹೊನ್ನಳ್ಳಿ ಗಂಗಾಧರಗೌಡ ಮೆಟ್ರಿ, ತಾಲೂಕು ಗೌರವಾಧ್ಯಕ್ಷ ಕೆ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಹೊನ್ನಳ್ಳಿ, ಕಾರ್ಯಾಧ್ಯಕ್ಷ ಹೆಚ್.ಪಿ.ಗಣೇಶ, ನಗರ ಘಟಕದ ಗೌರವಾಧ್ಯಕ್ಷ ಎಂ.ಶ್ರೀನಿವಾಸ, ಮುಖಂಡರಾದ ಹಂಪಾರೆಡ್ಡಿ, ಸೂಗೂರು ರಾಘವೇಂದ್ರ, ಕೆರೆಕೆರೆ ದೊಡ್ಡಪ್ಪ, ಗೌಳೇರ್ ಮಂಜುನಾಥ, ಬಿ.ರಮೇಶ, ಬಿ.ಶಂಕರ್, ರಾಘವೇಂದ್ರ, ಕಟ್ಟೆ ಅಮರೇಶ, ಬಿ.ಕಾರ್ತಿಕ, ಬಿ.ಹನುಮಂತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















