ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಯಾತ್ರಿಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಪ್ರವೀಣ್ ಎಂಬ ಯಾತ್ರಿಕನನ್ನು ಚಿರತೆ ಕಾಡಿನೊಳಗೆ 1 ಕಿ.ಮೀ.ವರೆಗೆ ಎಳೆದೊಯ್ದಿದೆ. ತಡ ರಾತ್ರಿ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಡ್ಯದ ಚೀರನಹಳ್ಳಿಯಿಂದ 5 ಮಂದಿ ಪಾದಯಾತ್ರೆ ಹೊರಟಿದ್ದರು. ಈ ವೇಳೆ ಚಿರತೆ ದಾಳಿ ಮಾಡಿದೆ. ಗಾಬರಿಯಿಂದ ಓಡಿ ಹೋಗುವಾಗ ಪ್ರವೀಣ್ ಚಿರತೆ ಬಾಯಿಗೆ ಸಿಕ್ಕಿ, ಬಲಿಯಾಗಿದ್ದಾರೆ. ಇದೀಗ ತಾಳಬೆಟ್ಟದ ಕಂಕ ಎಂಬಲ್ಲಿ ಯಾತ್ರಿಕ ಪ್ರವೀಣ್ ಅವರ ಶವ ಪತ್ತೆಯಾಗಿದೆ. ಆದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ..
ವರದಿ: ಉಸ್ಮಾನ್ ಖಾನ್



















