ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆ.ಎಸ್ ಆರ್ ಟಿ ಸಿ ಬಸ್ ಗೆ ಚಾಲನೆ ನೀಡಿದ ಶಾಸಕ ಎಂ. ಆರ್ ಮಂಜುನಾಥ್.

ಚಾಮರಾಜನಗರ/ಹನೂರು :
ತಾಲೂಕಿನ ಕಾಡಂಚಿನ ಗ್ರಾಮವಾದ ಬೈಲೂರು ಗ್ರಾಮ ಪಂಚಾಯತಿ ಒಳಪಡುವ ಮುನಿಗೂಡಿ ದೊಡ್ಡಿ ಯಿಂದ ಅಂಡೆಕುರುಬನ ದೊಡ್ಡಿ,ವಿ.ಎಸ್ ದೊಡ್ಡಿ ಮಾರ್ಗವಾಗಿ ಒಡೆಯರಪಾಳ್ಯಕ್ಕೆ ತಲುಪುವ ಕೆ.ಎಸ್ ಆರ್ ಟಿ ಸಿ ಬಸ್ ಗೆ ಚಾಲನೆ ನೀಡಿದ ಶಾಸಕ ಎಂ. ಆರ್ ಮಂಜುನಾಥ್.

ಹನೂರು: ತಾಲೂಕಿನ ಅಂಡೆಕುರುಬನ ದೊಡ್ಡಿ ಗ್ರಾಮದಲ್ಲಿ ನೂತನವಾಗಿ ಸಾರಿಗೆ ಬಸ್ಸಿಗೆ ಚಾಲನೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ 2.20 ಕೋಟಿ ರೂ. ವೆಚ್ಚದಲ್ಲಿ ಡಾಂಬರ್ ರಸ್ತೆ ಹಾಗೂ ಮೆಟ್ಲಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಶಾಸಕ ಮಂಜುನಾಥ್ ಅವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಈ ಭಾಗಕ್ಕೆ ಬಸ್ಸಿನ ಸೌಕರ್ಯ ಇಲ್ಲದೆ ಇಲ್ಲಿನ ಜನರು ಹೋಗುವುದಕ್ಕೆ ಬರುವುದಕ್ಕೂ ತುಂಬಾ ತೊಂದರೆ ಅನುಭವಿಸಿ ನಡೆದುಕೊಂಡೆ ತೆರಳುವಂತಹ ಪರಿಸ್ಥಿತಿ ಇತ್ತು. ಇಲ್ಲಿನ ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ಉತ್ತಮ ರಸ್ತೆ ಬಸ್ ಸೌಲಭ್ಯಗಳು ಇಲ್ಲದೆ ವಂಚಿತರಾಗಿದ್ದರು.

ಅಂಡೆ ಕುರುಬನ ದೊಡ್ಡಿ ಮಾರ್ಗವಾಗಿ ಮುನಿಗುಡಿ ದೊಡ್ಡಿ, ಮಾದಪ್ಪನ ದೊಡ್ಡಿ, ವಿ.ಎಸ್ ದೊಡ್ಡಿ ಮೂಲಕ ಒಡೆಯರಪಾಳ್ಯ ಮುಖ್ಯ ರಸ್ತೆಗೆ ತೆರಳಲು ಸಾರಿಗೆ ಸೌಲಭ್ಯ ಇಲ್ಲದೆ. ಶಾಲಾ ಕಾಲೇಜು ಮಕ್ಕಳು ಗರ್ಭಿಣಿಯರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು.

ಇಲ್ಲಿನ ಜನರ ಅಪೇಕ್ಷೆಯಂತೆ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಿದ್ದು ಹಾಗೂ ಈ ಭಾಗಕ್ಕೆ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ ಇದರ ಸದುಪಯೋಗವನ್ನುಪಡೆದು ಕೊಳ್ಳಬೇಕು ಎಂದರು, ಹಾಗೂ ರಸ್ತೆ ಕಾಮಗಾರಿಯ ಇಂಜಿನಿಯರ್ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ಅಲಗುಮೂಲೆ ಕೆಂಚನ ದೊಡ್ಡಿ ಚಿಂಚಳ್ಳಿ ದೊಮ್ಮನಕದ್ದೆ, ಗೂಳ್ಯ, ಗುಂಡಾಪುರ, ಕಾಂಚಹಳ್ಳಿ ಕೊಡವೀರ ನಾಯಕನ ದೊಡ್ಡಿ ಈ ಭಾಗದ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇವಾಗ ಅಲ್ಲಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಶಾಲಾ ಕಾಲೇಜು ತೆರಳುವ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ಅಂಡೆಕುರುಬನ ದೊಡ್ಡಿ ಗ್ರಾಮದ ಮಹಿಳೆ ಸಾವಿತ್ರಿಬಾಯಿ ಎಂಬ ಮಹಿಳೆ ಮಾತನಾಡಿ ಸ್ವತಂತ್ರ ಪೂರ್ವದಿಂದ ಇಲಿಯ ತನಕ ನಮಗೆ ಸಾರಿಗೆ ಬಸ್ ಆಗಲೇ ಉತ್ತಮ ರಸ್ತೆಯು ಇರಲಿಲ್ಲ. ನಾವು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೆವು. ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ತೆರೆದುಕೊಂಡು ಹೋಗಲು ಒಡೆಯರ್ ಪಾಳ್ಯ ಪಿ ಜಿ ಪಾಳ್ಯಕ್ಕೆ ಹೋಗುವುದಕ್ಕೆ 500 ರೂ. ಇಂದ ಸಾವಿರ ರೂಪಾಯಿಗಳವರೆಗೆ ಖರ್ಚಾಗುತ್ತಿತ್ತು. ಶಾಲಾ ಕಾಲೇಜಿಗೆ ಹೋಗುವಂತಹ ಮಕ್ಕಳಿಗೆ ಆಟೋ ಬಾಡಿಗೆಗೆ 300. 400ರೂ ಖರ್ಚಾಗುತ್ತಿತ್ತು ಶಾಸಕ ಮಂಜುನಾಥ್ ರವರು ನಮ್ಮ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದರಿಂದ ನಮಗೆ ಬಹಳ ತುಂಬಾ ಅನುಕೂಲವಾಗಿದೆ ಅವರಿಗೆ ನಮ್ಮ ಧನ್ಯವಾದಗಳು ತಿಳಿಸುತ್ತೇವೆ ಎಂದರು.

ಅಂಡೆಕುರುಬನ ದೊಡ್ಡಿ ಗ್ರಾಮದ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ ನಾವುಗಳು ದಿನನಿತ್ಯ ಸಾಲ ಕಾಲೇಜುಗಳಿಗೆ ತೆರಳಲು ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಆಟೋ ಮೂಲಕ ತೆರಳಿ ದಿನಕ್ಕೆ 300. 400 ಖರ್ಚಾಗುತ್ತಿತ್ತು ಈ ಬಗ್ಗೆ ಸರ್ಕಾರ ಗಮನಕ್ಕೆ ತರಲಾಗಿತ್ತು ನಮ್ಮ ಮನವಿಗೆ ಸ್ಪಂದಿಸಿದ ಶಾಸಕರು ಇದೀಗ ನಮ್ಮ ಗ್ರಾಮಕ್ಕೆ ಬಸ್ ಸೌಕರ್ಯವನ್ನು ಕಲ್ಪಿಸಿದ್ದಾರೆ ಅವರಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಬಸ್ ಡಿಪೋ ವ್ಯವಸ್ಥಾಪಕರಾದ ಭೋಗಪ್ಪ ನಾಯಕ, ಚರಣ್ ರಾಜ್, ಕನಕರಾಜು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುರೇಂದ್ರ, ಮುಖಂಡರಾದ ಮಹದೇವಸ್ವಾಮಿ, ಜಿಎಂ ಮಾದೇಶ್, ಕೃಷ್ಣಮೂರ್ತಿ, ಪರಶಿವ, ನಾಗೇಂದ್ರ, ಮುತ್ತುಸ್ವಾಮಿ, ಪಿ ಜಿ ಪಾಳ್ಯ ಪ್ರವೀಣ್ ಸೇರಿದಂತೆ ಇನ್ನಿತರರು ಇದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!